ಯೋಗವೆಂದರೆ (International Yoga Day 2024) ಕೇವಲ ದೈಹಿಕವಾಗಿ ಮಾಡುವ ಆಸನಗಳ ವ್ಯಾಯಾಮ ಅಷ್ಟೇ ಅಲ್ಲ. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಮ್ಮಿಲನದ ಆಯಾಮ. ಈಗಿನ ವೇಗದ, ಒತ್ತಡಮಯ ಜೀವನಶೈಲಿಯಿಂದ ಮನುಕುಲ ಅಲ್ಪಾಯುಷಿಯಾಗುತ್ತಿದೆ. ಯಾರೊಬ್ಬರ ಬದುಕಿನಲ್ಲಿ ‘ಯೋಗ’ ವೆಂಬುದೇ ಇಲ್ಲದಂತಾಗಿದೆ. ದೈಹಿಕ ಸದೃಢತೆ, ಮಾನಸಿಕ ಸಾಮರ್ಥ್ಯ, ಆಧ್ಯಾತ್ಮಿಕ ಚಿಂತನೆ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ. ಮನುಷ್ಯ ಪರಿಪೂರ್ಣನಾಗಿದ್ದರೆ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಈಗಿನ ಡೋಲಾಯಮಾನ ಯುಗದಲ್ಲಿ ಯೋಗದ ಹಾದಿಯಲ್ಲಿ ನಡೆದು ಆರೋಗ್ಯಕರ ಸಮಾಜ ನಿರ್ಮಿಸುವುದು ಮುಖ್ಯವಾಗಿದೆ.
ಇಂದು (ಜೂ.21) ಅಂತರರಾಷ್ಟ್ರೀಯ ಯೋಗ ದಿನ. ಈ ಬಾರಿಯ ವಸ್ತು ವಿಷಯ ‘ನಮಗಾಗಿ ಮತ್ತು ಸಮಾಜಕ್ಕಾಗಿ ಯೋಗ’. ಇಡೀ ಜಗತ್ತಿಗೆ ಇಂದು ಯೋಗಾಸನ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಎಲ್ಲರ ಚಿತ್ತ ಯೋಗದ ಕಡೆ ನೆಟ್ಟಿದೆ. ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಯನ್ನು ದಾಟಿ ಯೋಗ ಪಸರಿಸಿದೆ. ಯೋಗಾಸನದ (Yoga) ಪ್ರಯೋಜನ, ಮಹತ್ವವನ್ನು ಜಗತ್ತು ಕೊಂಡಾಡುತ್ತಿದೆ. ಭಾರತವಷ್ಟೇ ಅಲ್ಲ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತಿದೆ. ದೈಹಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಯೋಗ ಎಂದು ಸಾರಿ ಹೇಳಲಾಗುತ್ತಿದೆ. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್, ಕ್ರಿಕೆಟಿಗ ಮನಿಷ್ ಪಾಂಡೆ ಸಾಥ್
Advertisement
Advertisement
ಭಾರತದಲ್ಲಂತೂ ಪ್ರತಿ ವರ್ಷ ಯೋಗ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಗುಜರಾತ್, ಕರ್ನಾಟಕ ಹೀಗೆ ಅನೇಕ ರಾಜ್ಯಗಳಲ್ಲಿ ಗಿನ್ನಿಸ್ ರೆಕಾರ್ಡ್‌ಗಳು ಕೂಡ ಆಗಿದೆ. ‘ಯೋಗ’ಕ್ಕೆ ಜಾಗತಿಕ ಮನ್ನಣೆ ತಂದುಕೊಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರ ನೇತೃತ್ವದಲ್ಲಿ ಭಾರತದ ಅನೇಕ ಕಡೆಗಳಲ್ಲಿ ದಾಖಲೆಯ ಮಟ್ಟದಲ್ಲಿ ಜನರನ್ನು ಸೇರಿ ಯೋಗ ದಿನವನ್ನು ಆಚರಿಸಲಾಗುತ್ತಿದೆ.
Advertisement
ಮೊದಲ ಅಂತಾರಾಷ್ಟ್ರೀಯ ಯೋಗ ದಿನವೇ ರೆಕಾರ್ಡ್
2015ರ ಜೂ.21 ರಂದು ವಿಶ್ವದಾದ್ಯಂತ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಭಾರತದ ನವದೆಹಲಿಯ ರಾಜಪಥದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅನೇಕ ರಾಷ್ಟ್ರಗಳ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. 35 ನಿಮಿಷಗಳ ಕಾಲ 21 ಆಸನಗಳನ್ನು ಪ್ರದರ್ಶಿಸಲಾಯಿತು. ಬರೋಬ್ಬರಿ 35,985 ಮಂದಿ ಒಂದೇ ವೇದಿಕೆಯಲ್ಲಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಗಿನ್ನಿಸ್ ದಾಖಲೆ ಬರೆಯಿತು. ಭಾರತವಷ್ಟೇ ಅಲ್ಲದೇ ನ್ಯೂಯಾರ್ಕ್, ಪ್ಯಾರಿಸ್, ಬೀಜಿಂಗ್, ಬ್ಯಾಂಕಾಕ್, ಕೌಲಾಲಂಪುರ್, ಸ್ಯಾನ್ ಫ್ರಾನ್ಸಿಸ್ಕೋ, ಸಿಯೋಲ್ ಮತ್ತು ಸೀಶೆಲ್ಸ್ ಸೇರಿದಂತೆ ಅನೇಕ ರಾಷ್ಟçಗಳಲ್ಲಿ ಯೋಗ ದಿನವನ್ನು ಆಚರಿಸಲಾಗಿತ್ತು. ಇದನ್ನೂ ಓದಿ: ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ
Advertisement
ಉತ್ತರ ಪ್ರದೇಶದಲ್ಲಿ 51,000 ಜನರಿಂದ ಯೋಗಾಸನ
ಮೊದಲ ವರ್ಷದ ಯಶಸ್ಸಿನ ಫಲವಾಗಿ, ಪ್ರತಿ ಬಾರಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ಜನರನ್ನು ಒಟ್ಟುಗೂಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೊಂಡಿತು. 2017 ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 50,000 ಜನರು ಪಾಲ್ಗೊಂಡು ಯೋಗಾಸನ ಮಾಡಿದರು. ಇದು ಮೊದಲ ವರ್ಷದ ದಾಖಲೆಯನ್ನು ಮುರಿಯಿತು. ಆಗ ಕರ್ನಾಟಕದ ಮೈಸೂರಿನಲ್ಲೂ ಬೃಹತ್ ವೇದಿಕೆಯಲ್ಲಿ ಯೋಗಾಸನ ಕಾರ್ಯಕ್ರಮ ಜರುಗಿತ್ತು. ಇಲ್ಲಿ 55,506 ಜನರು ಭಾಗವಹಿಸಿದ್ದರು. ಇದು ಕೂಡ ಗಿನ್ನಿಸ್ ರೆಕಾರ್ಡ್ ದಾಖಲಿಸಿತ್ತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಹಂಗಾಮ
2022ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಕಾರ್ಯಕ್ರಮ ನಡೆದಿತ್ತು. ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಜನರು ಯೋಗಾಸನ ಮಾಡಿದರು. ಆಗ ಸುಮಾರು 15,000 ಮಂದಿ ಭಾಗವಹಿಸಿದ್ದರು. ಇದು ಗಿನ್ನಿಸ್ ರೆಕಾರ್ಡ್ ಮಾಡದೇ ಇದ್ದರೂ ದೇಶದ ಗಮನ ಸೆಳೆಯಿತು. ಆಗ ತಾನೇ ದೇಶವು ಜನತೆ ಕೋವಿಡ್ ಸಾಂಕ್ರಾಮಿಕದಿಂದ ಚೇತರಿಸಿಕೊಂಡಿತ್ತು. ಹೀಗಾಗಿ ಮುಂಜಾಗ್ರತೆ ದೃಷ್ಟಿಯಿಂದ ಸೀಮಿತ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನೂ ಓದಿ: ಅಫ್ಘಾನ್ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್ ಜಯ – ಹಿಟ್‌ಮ್ಯಾನ್ ವಿಶೇಷ ಸಾಧನೆ!
ಮೋದಿ ತವರಲ್ಲಿ ದಾಖಲೆ
2023ರಲ್ಲಿ ಪ್ರಧಾನಿ ಮೋದಿ ತವರು ಗುಜರಾತ್‌ನ ಸೂರತ್‌ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸುಮಾರು 1.50 ಲಕ್ಷ ಜನರು ಪಾಲ್ಗೊಂಡು ಯೋಗಾಸನ ಮಾಡಿದರು. ವಿಶ್ವದಲ್ಲೇ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಡೆಸಿದ ಕಾರ್ಯಕ್ರಮ ಇದಾಗಿದೆ. ಇದುವರೆಗಿನ ಅತಿದೊಡ್ಡ ದಾಖಲೆಯಿದು. ಹೀಗಾಗಿ ಇದು ವರ್ಲ್ಡ್ ಆಫ್ ಬುಕ್ ರೆರ್ಕಾಡ್ ಸೇರಿತು. ಇದೇ ವರ್ಷ ಭಾರತದ ನರೇಂದ್ರ ಮೋದಿ ನೇತೃತ್ವದಲ್ಲಿ ನ್ಯೂಯಾರ್ಕ್ನಲ್ಲಿರುವ ಯುಎನ್ ಪ್ರಧಾನ ಕಚೇರಿಯಲ್ಲಿ ಐತಿಹಾಸಿಕ ಯೋಗ ಕಾರ್ಯಕ್ರಮ ನಡೆಯಿತು.