– ಇತ್ತ ಗದಗ್ ನಲ್ಲಿ ನಿವೃತ್ತ ಶಿಕ್ಷಕಿ ಈಗ ಯೋಗ ಗುರು
ಚಿತ್ರದುರ್ಗ/ಗದಗ: ಇಂದು ವಿಶ್ವದ್ಯಾಂತ 5ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಯೋಗ ದಿನದ ಅಂಗವಾಗಿ ಯೋಗಾಸನ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಮಲ್ಲಿಕಾರ್ಜುನ್ ಅವರ ವಯಸ್ಸು 70. ಆದರೂ ಚಿರಯುವಕನಂತೆ ಸದಾ ಉತ್ಸಾಹದಿಂದಿರೋ ಇವರ ತೇಜಸ್ಸಿನ ಗುಟ್ಟೆ ಯೋಗ.
ಒಂದು ಹೊತ್ತಿನ ಊಟ ಬಿಟ್ಟರೂ ಇವರು ಯೋಗ ಮಾತ್ರ ಬಿಡಲ್ಲ. ಕಳೆದ 12 ವರ್ಷಗಳ ಹಿಂದೆ ಸಿದ್ದ ಸಮಾದಿ ಯೋಗಾದಿಂದ ಆರೋಗ್ಯ ರಕ್ಷಣೆಗಾಗಿ ಯೋಗಾಭ್ಯಾಸದಲ್ಲಿ ತೊಡಗಿದ ಇವರು ಚಿತ್ರದುರ್ಗ ಜಿಲ್ಲಾ ಪತಾಂಜಲಿ ಯೋಗಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
Advertisement
Advertisement
ಜಿಲ್ಲೆಯಾದ್ಯಂತ ಪತಂಜಲಿ ಸಹಯೋಗದೊಂದಿಗೆ 37 ಉಚಿತ ಯೋಗ ಕೇಂದ್ರಗಳನ್ನು ತೆರೆದಿರೋ ಇವರು 40 ಜನ ನುರಿತ ಯೋಗ ಶಿಕ್ಷಕರನ್ನು ನೇಮಿಸಿದ್ದಾರೆ. ಪ್ರತಿ ತಿಂಗಳು ತಮ್ಮ ಜೇಬಿನಿಂದ 5000 ಹಣವನ್ನು ಖರ್ಚು ಮಾಡಿಕೊಂಡು ಯೋಗ ಕುರಿತು ಮಾರ್ಕೆಟಿಂಗ್ ಮಾಡುವ ಮೂಲಕ ಯೋಗಾವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಯೋಗ ಶಿಕ್ಷಕ ಶಿವಲಿಂಗಪ್ಪ ಹೇಳಿದರು.
Advertisement
Advertisement
ಇತ್ತ ಗದಗದಲ್ಲಿ ನಿವೃತ್ತಿಯಾದ್ರೂ ಶಿಕ್ಷಕಿ ಪದ್ಮಾವತಿ ಬಿ.ಹುಂಬಿ ಕಳೆದ 35 ವರ್ಷಗಳಿಂದ ಯೋಗಾಭ್ಯಾಸದ ವಿದ್ಯೆಯನ್ನು ಜನರಿಗೆ, ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಅಷ್ಟೇ ಅಲ್ಲ ಯೋಗದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ಪ್ರೌಢಶಾಲೆಯ ಸಹ ಶಿಕ್ಷಕಿಯಾಗಿ ಕೆಲಸ ಮಾಡಿ ಈಗ ನಿವೃತ್ತಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಇವರು ಹಿಂದೆ ಬೀಳದೆ 2001ರಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ, ಮ್ಯಾತ್ಸ್ ಎಕ್ಷಲೆಂಟ್ ಟೀಚರ್ ಅವಾರ್ಡ್ ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬಳಿಕ ಯೋಗ ಗುರುವಾಗಿ ಗುರುತಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಈ ಸಂದರ್ಭದಲ್ಲಿ ಇಂತಹ ಯೋಗಪಟುಗಳನ್ನು ಸಮಾಜ ಗುರ್ತಿಸಿ ಗೌರವಿಸಬೇಕಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]