ಬೆಂಗಳೂರು: ಪುರುಷರಿಗೆ ಮಹಿಳೆಯರೇ ಸ್ಪೂರ್ತಿ, ಅವರಿಂದಲೇ ನಾವು. ಮಹಿಳೆಯರು ತಮ್ಮ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾರೆ. ಆ ಎಲ್ಲಾ ಪಾತ್ರಗಳನ್ನು ಅವರು ಅಚ್ಚುಕಟ್ಟಾಗಿ ನಿರ್ವಸುತ್ತಾರೆ ಎಂದು ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಚುತ್ ಗೌಡ ವಿಶ್ವ ಮಹಿಳಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ಈ ಒಂದು ದಿನಕ್ಕೆ ಮಾತ್ರ ಮಹಿಳಾ ದಿನಾಚರಣೆಯನ್ನು ಮೀಸಲಿಡಬಾರದು. ಪ್ರತಿನಿತ್ಯ ಅವರ ದಿನವನ್ನ ಸಂಭ್ರಮಿಸಬೇಕು. ನಾನು ಕೂಡ ಈ ಮಟ್ಟಕ್ಕೆ ಬೆಳೆಯಲು ನನ್ನ ಜೀವನದಲ್ಲಿರುವ ನನ್ನ ತಾಯಿ, ನನ್ನ ಮಡದಿ ಹಾಗೂ ನನ್ನ ಮಗಳು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದರು.
ಬನಶಂಕರಿಯ ಫಿಡಿಲಿಟಿಸ್ ಸಂಸ್ಥೆಯ ಪುರುಷರು ಮಹಿಳೆಯರನ್ನು ಕಛೇರಿಯೊಳಗೆ ವಿಭಿನ್ನವಾಗಿ ಸ್ವಾಗತಿಸಲಾಯಿತು. ಪ್ರತಿಯೊಬ್ಬ ಮಹಿಳಾ ಉದ್ಯೋಗಿಗಳನ್ನು ಕುದುರೆ ಸಾರೋಟಿನ ಮೂಲಕ ಸ್ವಾಗತಿಸಿದ್ದು, ಮಹಿಳೆಯರು ಪಲ್ಲಕ್ಕಿಯ ಮೇಲೆ ಕುಳಿತು ಆಗಮಿಸುತ್ತಿದ್ದಂತೆ ಪುರುಷರು ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಮಹಿಳೆಯರನ್ನು ಕಛೇರಿಗೆ ಬರ ಮಾಡಿಕೊಂಡರು. ಇದನ್ನೂ ಓದಿ: ಮತ್ತೆ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರಾ ವಿಶಾಲ್ ಗಾರ್ಗ್?
ಸಂಸ್ಥೆಯ ಮಹಿಳೆಯರು ಶ್ವೇತ ವರ್ಣದ ಉಡುಪುಗಳಲ್ಲಿ ಕಂಗೊಳಿಸಿದ್ದು, ಅವರಿಗಾಗಿಯೇ ರ‍್ಯಾಂಪ್ ವಾಕ್ ಆಯೋಜಿಸಲಾಗಿತ್ತು. ರ‍್ಯಾಂಪ್ ಮೇಲೆ ಮಹಿಳೆಯರು ಹೆಜ್ಜೆ ಹಾಕಿ, ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಿದರು. ಇದನ್ನೂ ಓದಿ: ಊಟಕ್ಕೆ ಹೊರಗೆ ಹೋದರೆ ವಾಪಸ್ ಬದುಕಿ ಬರುವ ನಂಬಿಕೆ ಇರಲಿಲ್ಲ: ಹಾಸನದ ವಿದ್ಯಾರ್ಥಿ
ಮಹಿಳೆಯ ಹೋರಾಟ ಇಂದು-ನಿನ್ನೆಯದಲ್ಲ. ಸದಾ ತನ್ನ ಹಕ್ಕಿಗಾಗಿ ಮಹಿಳೆ ಕಾದಾಡುತ್ತಿದ್ದಾಳೆ. ಪ್ರಪಂಚ ಇಷ್ಟು ಮುಂದುವರೆದಿದ್ದರೂ ಮಹಿಳೆಗೆ ಸಿಗಬೇಕಾದ ಸ್ಥಾನ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ. ಇಷ್ಟರ ಮಧ್ಯೆಯೂ ತುಳಿತಕ್ಕೊಳಗಾಗುತ್ತಿರುವ, ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಅವರಿಗೆ ಧೈರ್ಯ ನೀಡಿ, ಮಹಿಳೆಗೆ ತನ್ನ ಹಕ್ಕಿನ ಪರಿಚಯ ಮಾಡಿಸಿ, ಆಕೆಯನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ, ಆಕೆಯ ಜೀವನವನ್ನು ಸುಂದರ ಸಶಕ್ತಗೊಳಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.