– ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಹಣ ನೀಡಿಲ್ಲ
– ಸರ್ಕಾರದ ನೆರವಿಲ್ಲದೆ ದೇಶಕ್ಕೆ ಕೀರ್ತಿ
ಮೈಸೂರು: ತಾಯಿಗೆ ಕ್ಯಾನ್ಸರ್, ಅಪ್ಪನಿಗೆ ಕಾಯಿಲೆ ಇದ್ದರೂ ಛಲ ಬಿಡದ ಮಗ ತಾಯಿಯ ಆಸೆಯಂತೆ ಇಂಟರ್‌ನ್ಯಾಷನಲ್ ಕಿಕ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ರಂಜಿತ್ ಚಿನ್ನದ ಪದಕ ಗೆದ್ದ ಯುವಕ. ವಾಕೋ ಇಂಡಿಯನ್ ಓಪನ್ ಇಂಟರ್‌ನ್ಯಾಷನಲ್ ಕಿಕ್ ಬಾಕ್ಸಿಂಗ್‍ನ 84 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಪೌರ ಕಾರ್ಮಿಕರ ಮಗನಾಗಿರುವ ರಂಜಿತ್, 5ಕ್ಕೂ ಹೆಚ್ಚು ದೇಶ ಭಾಗಿಯಾಗಿದ್ದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಮೈಸೂರಿಗೆ ಹೆಮ್ಮೆ ತಂದಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಲು ಹಣ ಇಲ್ಲದೆ ರಂಜಿತ್ ಪರದಾಡಿದ್ದರು. ಈ ವೇಳೆ ಸ್ನೇಹಿತರು, ಸ್ಥಳೀಯರು ನೀಡಿದ ಧನ ಸಹಾಯದಿಂದ ದೆಹಲಿಗೆ ಹೋಗಿದ್ದರು. ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಹಣ ನೀಡಿರಲಿಲ್ಲ. ಇದೀಗ ಸರ್ಕಾರದ ನೆರವಿಲ್ಲದೆ ರಂಜಿತ್ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ಒಟ್ಟು ಮೂರು ಚಿನ್ನದ ಪದಕ ಗೆದ್ದಿರುವ ರಂಜಿತ್ ಮುಂದೆ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಆಸೆ ಹೊಂದಿದ್ದಾರೆ.