ಡಯಾಸ್ಪೊರಾಡಿಪ್ಲೊಮಸಿ: ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನ ಆಚರಿಸಲು ಇಂಡಿಯನ್ ಅಮೇರಿಕನ್ ಸ್ಟೇಟ್ ಇನ್ವೆಂಟ್ ಮತ್ತು STEM ಪ್ರವರ್ತಕಿ ಗೀತಾಂಜಲಿರಾವ್ ಅವರೊಂದಿಗೆ ನೀವೂ ಭಾಗವಹಿಸಿ
ಚೆನ್ನೈ: ಚೆನ್ನೈನಲ್ಲಿರುವ ಅಮೆರಿಕಾ ದೂತಾವಾಸವು ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನ ಅಮೆರಿಕಾ ದೂತಾವಾಸಗಳ ಸಮನ್ವಯದಲ್ಲಿ ಫೆಬ್ರವರಿ 11ರ ಶುಕ್ರವಾರದಂದು ಆಯೋಜಿಸಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ಹದಿಹರೆಯದ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿರಾವ್ ಅವರು ಭಾಗವಹಿಸಲಿದ್ದಾರೆ.
Advertisement
ಡಯಾಸ್ಪೊರಾಡಿಪ್ಲೊಮಸಿ ಸರಣಿಯಲ್ಲಿನ ಆರನೇ ಕಾರ್ಯಕ್ರಮ ವರ್ಚುವಲ್ ಆಗಿ ಫೆಬ್ರವರಿ 11ರಂದು ಸಂಜೆ 6:45ಕ್ಕೆ ನಡೆಯಲಿದ್ದು, ಆಗ ಐದು ನಿಮಿಷಗಳ ಅವಧಿಯ “ಸರ್ಚ್‍ಆನ್: ಪಾಸಿಟಿವ್ ಕರೆಂಟ್” ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ರಾವ್ ಅವರ ಆವಿಷ್ಕಾರಗಳಲ್ಲಿ ಒಂದಾದ ನೀರಿನಲ್ಲಿ ಸೀಸದ ಮಾಲಿನ್ಯವನ್ನು ಪತ್ತೆ ಹಚ್ಚುವ ಮೊಬೈಲ್ಸ್ ಧನದ ವಿವರ ಇದರಲ್ಲಿದೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್
Advertisement
“ವೈ ವೇಸ್ಟ್?”
ಎನ್‍ಜಿಒ ಸಂಸ್ಥಾಪಕಿ, ವಾಟರ್‍ಗರ್ಲ್ ಆಫ್ ಇಂಡಿಯಾ” ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ಗರ್ವಿತಾಗುಲ್ಹಾಟಿ ಅವರು ಗೀತಾಂಜಲಿರಾವ್ ಅವರ ಸಂದರ್ಶನ ನಡೆಸಲಿದ್ದಾರೆ. ಈ ಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಗಣಿತ (STEM) ಪ್ರೀತಿಯಿಟ್ಟುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಎಂಬ ಗುರುತಿನಲ್ಲಿ ಬೆಳೆಯುವ ಪಯಣದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೆ STEM ಕಲಿತ ಹೆಣ್ಣು ಮಕ್ಕಳು ಹೇಗೆ ವಿಶ್ವವನ್ನು ಬದಲಿಸಬಲ್ಲರು ಎಂಬ ಕನಸನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೇ ಅಮೆರಿಕಾದಲ್ಲಿನ ಪ್ರಯೋಗಾತ್ಮಕ ಕಲಿಕೆಯ ಅವಕಾಶಗಳು ಮತ್ತು ಅಮೆರಿಕನ್ ಶಾಲೆಗಳಲ್ಲಿ STEM ಶಿಕ್ಷಣದ ಕುರಿತು ಚರ್ಚಿಸಲಿದ್ದಾರೆ.
Advertisement
ಇದಕ್ಕೂ ಮುನ್ನ, ಚೆನ್ನೈನಲ್ಲಿರುವ ಅಮೆರಿಕಾ ದೂತಾವಾಸದ ಕಾನ್ಸಲ್ಜನರಲ್ಜುಡಿತ್ರೇವಿನ್, ನಮ್ಮ ಡೈಸ್ಪೊರಾಡಿಪ್ಲೊಮಸಿ ಸ್ಪೀಕರ್ ಸರಣಿಯ ಭಾಗವಾಗಿ ನಡೆಯುತ್ತಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಗೀತಾಂಜಲಿರಾವ್ ಭಾಗವಹಿಸುವಿಕೆಗೆ ಉತ್ಸುಕರಾಗಿದ್ದೇವೆ. ಭಾರತದಲ್ಲಿನ U.S. ಮಿಷನ್ ಪರವಾಗಿ, ಗೀತಾಂಜಲಿ ಅವರ ಸಾಧನೆಗಳಿಗಾಗಿ ನಾನು ಶ್ಲಾಘಿಸುತ್ತೇನೆ. ಇದು ಯುವಜನರಿಗೆ, ವಿಶೇಷವಾಗಿ ಹುಡುಗಿಯರಿಗೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ತಮ್ಮ ಭವಿಷ್ಯದ ವೃತ್ತಿ ಜೀವನದಲ್ಲಿ STEM ವಿಷಯಗಳನ್ನು ಪರಿಗಣಿಸಲು ಸ್ಫೂರ್ತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ STEM ಶಿಕ್ಷಣ ಮತ್ತು ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳ ಬಯಸುವ ಆಸಕ್ತ ವಿದ್ಯಾರ್ಥಿಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
Advertisement
ರಾವ್ ಅವರ ಆವಿಷ್ಕಾರಗಳು ಮತ್ತು ಭಾರತ ಸೇರಿದಂತೆ ಜಗತ್ತಿನಾದ್ಯಂತ ಯುವಜನರಿಗಾಗಿ ಅವರು ನಡೆಸುವ STEM ಕಾರ್ಯಾಗಾರಗಳನ್ನು ಗುರುತಿಸಿ 2020ರಲ್ಲಿ STEM ನಿಯತಕಾಲಿಕ ಅದೇ ಮೊದಲ ಬಾರಿ ಸ್ಥಾಪಿಸಲಾದ ಕಿಡ್ ಆಫ್ ದ ಇಯರ್ ಪುರಸ್ಕಾರ ನೀಡಲಾಯಿತು. ಈ ವರ್ಚುವಲ್ಪ್ರೋಗ್ರಾಂನಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿ: ನೋಂದಣಿ ಲಿಂಕ್‍ನಲ್ಲಿದೆ. Registration link, ರಾವ್ ಅವರು ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ಪ್ರಶ್ನೋತ್ತರ ಚಾಟ್‌ಬಾಕ್ಸ್‌ನಲ್ಲಿ ತಮ್ಮ ಪ್ರಶ್ನೆಗಳನ್ನು ಕಳಿಸಲು ಅವಕಾಶವಿದೆ. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ
ಡಯಾಸ್ಪೊರಾ ಡಿಪ್ಲೊಮಸಿ ಸರಣಿಯ ಬಗ್ಗೆ: ಸುಂದರ್ ಪಿಚೈ, ಸುನಿತಾ ವಿಲಿಯಮ್ಸ್, ವಿವೇಕ್ ಮೂರ್ತಿ ಇವರು, ಸ್ಪೆಲ್ಲಿಂಗ್ಬೀ ಗೆಲ್ಲುವುದರಿಂದ ಹಿಡಿದು, ನಮ್ಮ ಕೆಲವು ದೊಡ್ಡ ಕಂಪನಿಗಳನ್ನು ನಡೆಸುವವರೆಗೆ, ಫೆಡರಲ್ಸರ್ಕಾರದಲ್ಲಿ ಧ್ವನಿಯನ್ನು ಹೊಂದುವವರೆಗೆ, ಭಾರತೀಯ ಅಮೆರಿಕನ್ನರು ಅಮೆರಿಕಗಾಥೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಯಶಸ್ಸಿನ ಗುಟ್ಟೇನು? ಸಂಭಾಷಣೆಗಳ ಸರಣಿಯ ಮೂಲಕ ಡಯಾಸ್ಪೊರಾಡಿಪ್ಲೊಮಸಿಯು ಅಮೆರಿಕದ ಬಹುಸಂಸ್ಕೃತಿಯ ನೆಲೆಯಲ್ಲಿ ಭಾರತೀಯ ಅಮೆರಿಕನ್ ಡಯಾಸ್ಪೊರಾ ಗುರುತಿಸುವಿಕೆ, ಸಾಧನೆಗಳು ಮತ್ತು ಸಮೀಕರಣವನ್ನು ತಿಳಿಸುತ್ತದೆ, ಅರ್ಥೈಸುತ್ತದೆ ಮತ್ತು ಅದನ್ನು ಎತ್ತಿಹಿಡಿಯುತ್ತದೆ. ಜೀವನದ ವಿವಿಧ ಹಂತಗಳ ಭಾರತೀಯ ಅಮೆರಿಕನ್ ಸಾಧಕರು ತಮ್ಮ ಪ್ರಯಾಣದ ಬಗ್ಗೆ ಮಾತನಾಡಲು ಅತಿಥಿ ಭಾಷಣಕಾರರಾಗಿ, ವೈಯಕ್ತಿಕ ಮತ್ತು ಸಾಮೂಹಿಕ ನೋಟಗಳ ಮೂಲಕ ಅಮೆರಿಕದ ಭರವಸೆಯನ್ನು ಎತ್ತಿ ತೋರಿಸುತ್ತಾರೆ. ಭಾರತೀಯ ಅಮೆರಿಕನ್ ಸಮುದಾಯದ ವ್ಯವಹಾರ, ಶಿಕ್ಷಣ, ರಾಜಕೀಯ, ಬಾಹ್ಯಾಕಾಶ, ಕಲೆಗಳು ಮತ್ತು ನಾಗರಿಕ ಸಮಾಜದ ಅಸಾಧಾರಣ ಕೊಡುಗೆಗಳನ್ನು ಹೈಲೈಟ್ ಮಾಡಲು ಭಾರತದಲ್ಲಿ US ಮಿಷನ್‍ಗೆ ಸೇರಿ.
ಗೀತಾಂಜಲಿರಾವ್ ಬಗ್ಗೆ: ಗೀತಾಂಜಲಿರಾವ್ ಅವರು ಸಂಶೋಧಕರು, ವಿಜ್ಞಾನಿ, ಲೇಖಕರು, ಹಾಗೂ ಭಾಷಣಕಾರರು ಮತ್ತು ಪ್ರಪಂಚದಾದ್ಯಂತ STEM ಶಿಕ್ಷಣದ ಸಕ್ರಿಯ ಪ್ರವರ್ತಕರು. ಅವರು ಅಮೆರಿಕದ ಉನ್ನತಯುವ ವಿಜ್ಞಾನಿ ಎಂದು ಗುರುತಿಸಲ್ಪಟ್ಟಿದ್ದಾರೆ. ಸೀಸದ ಮಾಲಿನ್ಯ ಪತ್ತೆ ಸಾಧನವಾದ ಟೆಥಿಸ್‍ನ ಆಷ್ಕಾರಕ್ಕಾಗಿ ಯುಎಸ್ ಪರಿಸರ ಸಂರಕ್ಷಣಾ ಸಂಸ್ಥೆ ಅಧ್ಯಕ್ಷೀಯ ಪ್ರಶಸ್ತಿಯನ್ನು ಪಡೆದರು. ಕೃತಕ ಬುದ್ಧಿಮತ್ತೆ ಮತ್ತು ನ್ಯಾಚುರಲ್ಲ್ಯಾಂಗ್ವೇಜ್ಪ್ರೊಸೆಸಿಸ್ ಅನ್ನು ಬಳಸುವ Kindly ಎಂಬ ಅವರ ಆವಿಷ್ಕಾರ ಸೈಬರ್-ಬುಲ್ಲಿಯಿಂಗ್ ತಡೆಯುವಲ್ಲಿ ಪ್ರಭಾವ ಬೀರಿತು. 2019ರಲ್ಲಿ ಫೋರ್ಬ್ಸ್‌ನ 30 ವರ್ಷದೊಳಗಿನ ವಿಜ್ಞಾನದಲ್ಲಿ 30 ಮತ್ತು ಟೈಮ್ ಮ್ಯಾಗಜಿನ್ ಟಾಪ್ ಯಂಗ್ ಇನ್ನೋವೇಟರ್ ಮತ್ತು STEM ಶಿಕ್ಷಣದ ಆವಿಷ್ಕಾರಗಳು ಮತ್ತು ಪ್ರಚಾರಕ್ಕಾಗಿ ವರ್ಷದ ಮೊದಲ ಬಾಲೆ ಎಂದು ಗೌರವಿಸಲಾಯಿತು. ಅವರು ತಮ್ಮ ಕಾರ್ಯಾಗಾರಗಳ ಮೂಲಕ ಆರು ಖಂಡಗಳು ಮತ್ತು 37 ದೇಶಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 58,000 ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಇಂದು ಮೆಗಾ ರ್‍ಯಾಲಿ ನಡೆಸಲಿರುವ ಮೋದಿ
ಗೀತಾಂಜಲಿ ಅವರು ಯಂಗ್ ಇನ್ನೋವೇಟಸ್ರ್ಗೈಡ್ಟು STEM ಪುಸ್ತಕದ ಲೇಖಕರಾಗಿದ್ದಾರೆ. ಇದು ಸ್ವಯಂ-ಅಭಿವೃದ್ಧಿಪಡಿಸಿದ ಪ್ರಿಸ್ಕ್ರಿಪ್ಟಿವ್ ಐದು-ಹಂತದ ಆವಿಷ್ಕಾರ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ. ಕೀನ್ಯಾದಲ್ಲಿನ ಕಕುಮಾ ನಿರಾಶ್ರಿತರ ಶಿಬಿರ ಶಾಲೆಗಳು ಮತ್ತು ಘಾನಾದಲ್ಲಿನ ಕೆಲವು ಪ್ರೌಢಶಾಲೆಗಳಲ್ಲಿ ಈ ಪುಸ್ತಕವನ್ನು ಅಧಿಕೃತವಾಗಿ STEM ಪಠ್ಯಕ್ರಮವಾಗಿ ಅಳವಡಿಸಿಕೊಳ್ಳಲಾಗಿದೆ. ಅವರು 2021 ರಲ್ಲಿ ಪ್ರುಡೆನ್ಶಿಯಲ್‍ನಿಂದ ಅಮೆರಿಕದ ಉನ್ನತ ಯುವ ಸ್ವಯಂ ಸೇವಕರಲ್ಲಿ ಒಬ್ಬರಾಗಿ ಗೌರವಿಸಲ್ಪಟ್ಟರುವ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸಲು ವಿಜ್ಞಾನವನ್ನು ಬಳಸುವುದಕ್ಕಾಗಿ UNICEF ಈ ಯುವನೇತಾರರಾಗಿ ಆಯ್ಕೆಗೊಂಡಿದ್ದಾರೆ. ಅವರು ಇತ್ತೀಚೆಗೆ STEM ಶಿಕ್ಷಣವನ್ನು ಉತ್ತೇಜಿಸಲು ನ್ಯಾಷನಲ್ ಜಿಯೋಗ್ರಾಫಿಕ್ ಯಂಗ್ ಎಕ್ಸ್‍ಪ್ಲೋರ್ ಆಗಿ ಅನುದಾನವನ್ನು ಪಡೆದರು.