ಬೆಂಗಳೂರು: ರಾಜ್ಯ ಬಸವ ಸಮಿತಿಗೆ ಐವತ್ತು ವರ್ಷ ಆದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಬಸವ ಸಮಿತಿ ನಿರ್ಧರಿಸಿದೆ.
ಬೆಳಗ್ಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಮೊದಲ ಅಂತರಾಷ್ಟ್ರೀಯ ಬಸವ ಜಯಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ 23 ರಾಜ್ಯದ ವಿವಿಧ ಭಾಷೆಗಳಲ್ಲಿ 2 ಸಾವಿರದ 500 ವಚನಗಳನ್ನು ಮುದ್ರಿಸಲಾಗಿದ್ದು ಈ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.
Advertisement
200ಕ್ಕೂ ಅಧಿಕ ಭಾಷಾ ತಜ್ಞರು ಸೇರಿ ತಯಾರು ಮಾಡಿರುವ ಈ ವಚನಗಳ ಬಂಢಾರ ಇಂಗ್ಲಿಷ್, ಹಿಂದಿ, ತಮಿಳು, ಉರ್ದು, ಸಂಸ್ಕೃತ, ತಮಿಳು ಹೀಗೆ 23 ಭಾಷೆಗಳಲ್ಲಿ ಪ್ರಕಟವಾಗಲಿದ್ದು ಬಸವಣ್ಣನವರ ತತ್ವಗಳನ್ನು ದೇಶದ ತುಂಬಾ ಹರಡುವ ಯೋಜನೆಗೆ ಬಸವ ಸಮಿತಿ ಮುಂದಾಗಿದೆ.