ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದ್ದಾರೆ. ಒಂದು ಕಡೆ ಇವರು ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ (Kantara) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮೂಡಿಸಿದ್ದರೆ, ಮತ್ತೊಂದು ಕಡೆ ಇವರ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ 27ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಇದು ಜೈ ಶಂಕರ್ ನಿರ್ದೇಶನ ಮಾಡಿ, ರಿಷಬ್ ನಿರ್ಮಾಣ ಮಾಡಿರುವ ಸಿನಿಮಾ.
Advertisement
ಬೂಸಾನ್ ನಲ್ಲಿ ನಡೆಯುತ್ತಿರುವ 27ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಶಿವಮ್ಮ’ (Shivamma) ಚಿತ್ರ ಆಯ್ಕೆಯಾಗಿತ್ತು. ಇದೀಗ ಸ್ಪರ್ಧೆಯಲ್ಲೂ ಅದು ಗೆದ್ದಿದ್ದು, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು (award) ತನ್ನದಾಗಿಸಿಕೊಂಡಿದೆ. ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನೆಟ್ ವರ್ಕ್ ವಹಿವಾಟಿನಲ್ಲಿ ಹೂಡಿಕೆ ಮಾಡಿ, ಅದರಿಂದ ಪಡುವ ಸಂಕಟವನ್ನು ಕುರಿತಾದ ಸಿನಿಮಾವಿದು. ಇದನ್ನೂ ಓದಿ:ತಂಡು ಬಟ್ಟೆ ಧರಿಸಿ, ನಡೆಯೋಕು ಕಷ್ಟಪಡ್ತಿದ್ದ ಉರ್ಫಿಗೆ ನೆಟ್ಟಿಗರಿಂದ ತರಾಟೆ
Advertisement
Advertisement
ಈ ಸಿನಿಮಾ ವೀಕ್ಷಿಸಿದ ತೀರ್ಪುಗಾರರು ನಿರ್ದೇಶಕ ಜೈ ಶಂಕರ್ (Jai Shankar) ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಕಥೆಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಕಟ್ಟಿಕೊಟ್ಟ ನಿರ್ದೇಶಕರ ಜಾಣ್ಮೆಯನ್ನು ಕೊಂಡಾಡಿದ್ದಾರೆ. ಇಂತಹ ಸಿನಿಮಾಗೆ ರಿಷಬ್ ಹಣ ಹೂಡುವ ಮೂಲಕ ಹೊಸ ಹುಡುಗನ ಚಿತ್ರಕ್ಕೆ ಉತ್ತೇಜನ ನೀಡಿದ್ದಾರೆ.