ಬೆಂಗಳೂರು : ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟಕ್ಕೆ ಸ್ವಪಕ್ಷದವರೇ ಈಗ ತಿರುಗಿ ಬಿದ್ದಿದ್ದಾರೆ. ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪರಿಷತ್ ಸದಸ್ಯ ಸಿಟಿ ರವಿ (CT Ravi) ಬಿಜೆಪಿಯಲ್ಲಿ (BJP) ಕಿತ್ತಾಟಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ರೆಬಲ್ಸ್ ಗಳಿಂದ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿರುವ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಲಕ್ಷಾಂತರ ಕಾರ್ಯಕರ್ತರಿಗೆ ನನ್ನನ್ನು ಸೇರಿ ದುಃಖ ತಂದಿದೆ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಆಲೋಚನೆ ಮಾಡುವ ಅವಶ್ಯಕತೆ ಇದೆ. ಎಷ್ಟೋ ಜನ ತಮ್ಮ ಜೀವನವನ್ನು ಕೊಟ್ಟು, ಮನೆ ಮಠ ಹಾಳು ಮಾಡಿಕೊಂಡು ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ.ಅಧಿಕಾರ ಮರಿಚಿಕೆಯಾಗಿದ್ದ ಕಾಲದಲ್ಲಿ ದುಡಿದ್ದಾರೆ. ಕಾಂಗ್ರೆಸ್ ಇವತ್ತು ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ನಿತ್ಯ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವು ತಪ್ಪಿದ್ದಿಲ್ಲ. ಕಳಪೆ ಔಷಧಿ ಕಾರಣಕ್ಕೆ ಬಾಣಂತಿಯರು, ಮಕ್ಕಳು ಸಾಯ್ತಿದ್ದಾರೆ. ಅಭಿವೃದ್ಧಿ ನಿಂತ ಸ್ಥಿತಿಯಲ್ಲಿ ನಿಂತಿದೆ. ಆಡಳಿತ ಪಕ್ಷದವರಿಗೆ ಅಸಹನೆ ನಿರ್ಮಾಣ ಮಾಡಿದೆ. ನಾವು ಇಂತಹ ಸಮಯದಲ್ಲಿ ಜನರ ಪರವಾಗಿ ಹೋರಾಟ ಮಾಡಬೇಕು.ನಮ್ಮ ಕರ್ತವ್ಯ ಜನರ ಪರ ಹೋರಾಟ ಮಾಡೋದಾಗಿತ್ತು. ಆದರೆ ನಾವು ಮಾಡ್ತಿಲ್ಲ ಅಂತ ಆಕ್ರೋಶ ಹೊರ ಹಾಕಿದರು.
Advertisement
Advertisement
ನಮ್ಮ ಪಕ್ಷದ ಬೆಳವಣಿಗೆ ನನಗೆ ಸಮಾಧಾನ ತಂದಿಲ್ಲ. ಪಕ್ಷಕ್ಕೆ ಮಾಲೀಕರು ಪಕ್ಷದ ಸಾಮಾನ್ಯ ಕಾರ್ಯಕರ್ತರು. ಅವರಿಗೆ ನೋವಾಗುವಂತೆ,ಅವರಿಗೆ ದುಃಖ ತರುವಂತೆ ನಾವು ನಡೆದುಕೊಳ್ಳಬಾರದು. ಜನಹಿತ ಮರೆತು ರಾಜಕಾರಣ ಮಾಡಬಾರದು. ಜನಪರವಾದ ಹೋರಾಟ ಮಾಡದೇ ಹೋದರೆ ನಾವು ಕಳೆದು ಹೋಗುತ್ತೇವೆ. ಪಕ್ಷಕ್ಕೂ ನಷ್ಟ ಆಗುತ್ತದೆ ಅಂತ ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ
Advertisement
ವಿಜಯೇಂದ್ರ ಬದಲಾವಣೆಗೆ ರೆಬಲ್ಸ್ ಗಳ ಪಟ್ಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಹೊರಗೆ ಮಾತನಾಡುವುದಿಲ್ಲ. ನಮಗೆ ಹೇಳುವ ಜಾಗ ಇವೆ ಹೇಳಿದ್ದೇವೆ. ಹೇಳುವ ವ್ಯಕ್ತಿಗಳ ಹತ್ರ ಹೇಳಿದ್ದೇವೆ. ಪಕ್ಷದ ಬಗ್ಗೆ ಗೌರವ ಇದೆ. ನಮಗೆ ಎರಡನೇ ಆಯ್ಕೆ ಇಲ್ಲ. ಸೈದ್ಧಾಂತಿಕ ಕಾರಣಕ್ಕೆ ನಾವು ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇವೆ. 36 ವರ್ಷಗಳ ಹಿಂದೆ ಆಯ್ಕೆ ಮಾಡಿಕೊಂಡಿದ್ದು. ನಮಗೆ ಎರಡನೇ ಆಯ್ಕೆ ಇಲ್ಲ. ಸುಖ ದುಃಖದಲ್ಲೂ ಪಕ್ಷದ ಜೊತೆ ಇರುತ್ತೇವೆ. ಪಕ್ಷ ಸರಿ ಮಾಡಲು ಪ್ರಾಮಾಣಿಕ ಪ್ರಯತ್ನ ನಮ್ಮ ಕಡೆಯಿಂದ ಮಾಡುತ್ತೇವೆ. ಹೈಕಮಾಂಡ್ ಮನಸಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ ಅಂತ ತಿಳಿಸಿದರು.
Advertisement
ವಿಜಯೇಂದ್ರ ಹಿರಿಯರನ್ನ ಕಡೆ ಕಣಿಸುತ್ತಿದ್ದಾರೆ ಎಂಬ ರಮೇಶ್ ಜಾರಕಿಹೋಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದನ್ನೂ ಸಾರ್ವಜನಿಕವಾಗಿ ಕಾಮೆಂಟ್ ಮಾಡೋಕೆ ಬಯಸೊಲ್ಲ. ಸಾಮಾನ್ಯ ಕಾರ್ಯಕರ್ತ ಆಗಿದ್ದ ನನಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಕ್ಷ ಮಾಡಿದೆ. ಕೆಲವು ಕಾಲ ನಾವು ನೇಪಥ್ಯಕ್ಕೆ ಸರಿದಿದ್ದೇವೆ ಅಂದರೆ ಶಾಶ್ವತವಾಗಿ ನೇಪಥ್ಯಕ್ಕೆ ಸರಿದ್ದೇವೆ ಅಂತ ಅಲ್ಲ. ಸಂಕಷ್ಟವೂ ಕೂಡಾ ನಮ್ಮ ಸಾಮರ್ಥ್ಯ ಹೆಚ್ಚು ಮಾಡಲು ಬರುತ್ತದೆ. ನಮ್ಮ ಆತ್ಮ ವಿಶ್ವಾಸ ಪರೀಕ್ಷೆ ಮಾಡೋಕೆ ಸಂಕಷ್ಟ ಬರುತ್ತದೆ. ನನ್ನ ಜೀವನದಲ್ಲಿ ಬರುವ ಸಂಕಷ್ಟಗಳನ್ನ ನನ್ನ ಸಾಮರ್ಥ್ಯ ಹೆಚ್ಚಳಕ್ಕೆ ಬರುತ್ತದೆ ಅಂತ ನನ್ನ ಭಾವನೆ. ಸಂಕಷ್ಟ ಕಾಲದಲ್ಲಿ ಹಿಂದೆ ಹೆಜ್ಜೆ ಇಟ್ಟಿಲ್ಲ. ಸಂಕಷ್ಟ ಕಾಲ ಹೀಗೆ ಇರೊಲ್ಲ ಅಂತ ಭಗವದ್ಗೀತೆಯಲ್ಲಿ ಹೇಳಿದೆ. ಕಾಲ ಹೀಗೆ ಇರುವುದಿಲ್ಲ.. ಕಾಲ ಸರಿಬೇಕು ನೋಡೋಣ ಅಂತ ಮಾರ್ಮಿಕವಾಗಿ ಮಾತನಾಡಿದರು.