ಬೆಂಗಳೂರು: ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿ (Internal Reservation) ಕಲ್ಪಿಸುವ ವಿಚಾರವಾಗಿ ಇಂದು ಮಹತ್ವದ ಸಭೆ ನಡೆಯಿತು. ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ (Nagamohan Das) ಹಾಜರಿದ್ದರು.
ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಭಾಗಿಯಾಗಿದರು. ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಮಧ್ಯಂತರ ವರದಿ ನೀಡುವ ಬಗ್ಗೆ ಚರ್ಚೆ ನಡೆಯಿತು. ಸಭೆ ಬಳಿಕ ದಲಿತ ಸಮುದಾಯದ ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ ಒಳ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಒಗ್ಗಟ್ಟು ಪ್ರದರ್ಶಿಸಿದರು. ಇದನ್ನೂ ಓದಿ: ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ
- Advertisement3
ಸಚಿವ ಹೆಚ್.ಸಿ.ಮಹದೇವಪ್ಪ (Mahadevappa) ಮಾತನಾಡಿ, ಒಳಮೀಸಲಾತಿ ಬಗ್ಗೆ ವಾರದಲ್ಲಿ ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಕೊಡುತ್ತಾರೆ. ಮಧ್ಯಂತರ ವರದಿ ಬಳಿಕ ಒಳಮೀಸಲಾತಿ ಜಾರಿ ತೀರ್ಮಾನ ಮಾಡುವುದಾಗಿ ಹೇಳಿದರು.
- Advertisement
ಒಳಮೀಸಲಾತಿಯಾಗುವ ತನಕ ಯಾವುದೇ ಹೊಸ ನೇಮಕ, ಬಡ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ, ಮಧ್ಯಂತರ ವರದಿ ಕೊಟ್ಟ ಬಳಿಕ ಮತ್ತೆ ಸಿಎಂ ಜೊತೆ ಸಭೆ ಸೇರಿ ತೀರ್ಮಾನ ಮಾಡುವುದಾಗಿ ಹೇಳಿದರು.