– 3 ತಿಂಗಳಲ್ಲಿ ವರದಿ ಕೊಡಲು ಸರ್ಕಾರದ ಸೂಚನೆ
ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಲು ಸರ್ಕಾರ ಮುಂದಾಗಿದೆ.
Advertisement
ಈ ಸಮಿತಿ 3 ತಿಂಗಳಲ್ಲಿ ವರದಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಅಂತ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ. ಅಲ್ಲದೇ, ಇಂದಿನಿಂದ ಯಾವುದೇ ನೇಮಕಾತಿ ನೋಟಿಫಿಕೇಷನ್ ಆದರೂ ಆಯೋಗದ ವರದಿ ಆಧರಿಸಿ ಮುಂದಿನ ತೀರ್ಮಾನ ಇರುತ್ತೆ ಅಂದಿದ್ದಾರೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಮುಂದುವರಿದ ಇಡಿ ಬೇಟೆ – ಸಿಎಂ ಆಪ್ತ, ಬಿಲ್ಡರ್, ಮಾಜಿ ಆಯುಕ್ತರಿಗೂ ಶಾಕ್; ದಿನವಿಡೀ ಶೋಧ!
Advertisement
Advertisement
ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿ, ಸದಾಶಿವ ಆಯೋಗದ ವರದಿಯನ್ನು 2022ರಲ್ಲಿಯೇ ಬಿಜೆಪಿ ತಿರಸ್ಕಾರ ಮಾಡಿತ್ತು. ಚಿತ್ರದುರ್ಗದಲ್ಲಿ ಸಮಾವೇಶದಲ್ಲಿ ಒಳ ಮೀಸಲಾತಿ ಮಾಡ್ತೇವೆ ಅಂತ ಕೊಟ್ಟಿರುವ ಭರವಸೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ದಲಿತ ಪಂಗಡಗಳ ಬಲ-ಎಡ, ಬೋವಿ-ಲಂಬಾಣಿ ಸಮಾಜದ ಎಲ್ಲರೂ ಚರ್ಚೆ ಮಾಡಿದ್ದೇವೆ. ತೆಲಂಗಾಣ ಮಾದರಿ ಅನುಸರಿಸ್ತೇವೆ ಅಂದಿದ್ದಾರೆ. ಈ ಮಧ್ಯೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರೋ ಬಿಜೆಪಿ, ಒಳಮೀಸಲಾತಿ ಜಾರಿ ಮಾಡದಿದ್ದರೆ ಕಾಂಗ್ರೆಸ್ ಸಚಿವರು, ಶಾಸಕರನ್ನು ಜನ ಬೀದಿಯಲ್ಲಿ ಓಡಾಡೋದಿಕ್ಕೆ ಬಿಡಲ್ಲ ಅಂತ ಎಚ್ಚರಿಸಿದ್ರು. ಇದನ್ನೂ ಓದಿ: 12,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಮೋದಿ ಚಾಲನೆ