ಶ್ರೀನಗರ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ ಎಂದು ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ (Omar Abdullah) ತಿಳಿಸಿದ್ದಾರೆ.
Intermittent sounds of blasts, probably heavy artillery, can now be heard from where I am.
— Omar Abdullah (@OmarAbdullah) May 9, 2025
ಭಾರತದ ವಿರುದ್ಧ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ಮುಂದುವರಿಸಿದೆ. ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್, ಪೂಂಚ್, ಉರಿ, ಸಾಂಬಾ, ಫಿರೋಜ್‌ಪುರ ಸೇರಿದಂತೆ ಹಲವೆಡೆ ಪಾಕ್ ಮತ್ತೆ ಡ್ರೋನ್ ದಾಳಿ ಹಾಗೂ ಶೆಲ್ ದಾಳಿ ನಡೆಸಿದೆ. ಜಮ್ಮು ಕಾಶ್ಮೀರದಲ್ಲಿ (Jammu Kashmir) ಭಾರೀ ಸ್ಫೋಟದ ಸದ್ದು ಕೇಳಿದ ಹಿನ್ನೆಲೆ ಬ್ಲ್ಯಾಕ್‌ಔಟ್ ಘೋಷಿಸಲಾಗಿದೆ. ಸೈರನ್‌ಗಳನ್ನು ಮೊಳಗಿಸಿದ ಬಳಿಕ ಜಮ್ಮು ಸಿಎಂ ಓಮರ್ ಅಬ್ದುಲ್ಲಾ ಹೈ ಅಲರ್ಟ್ ಘೋಷಿಸಿ, ಜನರು ಮನೆಯೊಳಗೇ ಸುರಕ್ಷಿತವಾಗಿ ಇರುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಫಿರೋಜ್‌ಪುರದ ಮನೆ ಮೇಲೆ ಬಿದ್ದ ಪಾಕ್ ಡ್ರೋನ್ – ಮೂವರಿಗೆ ಗಾಯ, ಓರ್ವ ಗಂಭೀರ
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ. ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಒಮರ್ ಅಬ್ದುಲ್ಲಾ ಜನರ ಬಳಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿ ಮಿತ್ರರಾಷ್ಟ್ರಗಳ ಬಳಿ ಸಾಲಕ್ಕಾಗಿ ಅಂಗಲಾಚಿದ ಪಾಕ್ – ಟ್ರೋಲ್