ಬೆಂಗಳೂರು: ಐಎಂಎ (IMA) ನಡೆಸುತ್ತಿದ್ದ ಸ್ಕೂಲ್‍ಗೆ ಇಂದು ಅಧಿಕೃತವಾಗಿ ಬೀಗ ಬಿದ್ದಿದೆ. ಸ್ಕೂಲ್ ಆಸ್ತಿ ಮುಟ್ಟುಗೋಲು ಪ್ರಶ್ನಿಸಿ ಪೋಷಕರು ಹೈಕೋರ್ಟ್ (HighCourt) ಮೊರೆ ಹೋಗಿದ್ದಾರೆ. ಶಾಲೆ ಸೀಝ್ ಮಾಡುವಾಗ ಆವರಣದಲ್ಲಿ ಪೋಷಕರ ಕಣ್ಣೀರ ಕೋಡಿಯೇ ಹರಿದಿದ್ದು, ಸ್ಕೂಲ್ ಕ್ಲೋಸ್ ಮಾಡದಂತೆ ಗಲಾಟೆ ಮಾಡಿದ್ದಾರೆ.
Advertisement
ಬೆಂಗಳೂರಿನ ಶಿವಾಜಿನಗರದ ನೆಹರು ಸ್ಕೂಲ್ (Nehru School) ನಲ್ಲಿ, ದಯವಿಟ್ಟು ನಿಮಗೆ ಕೈಮುಗಿಯುತ್ತೇವೆ ಶಾಲೆಗೆ ಬೀಗ ಹಾಕಬೇಡಿ. ನಮ್ಮ ಮಕ್ಕಳನ್ನು ಬೀದಿಗೆ ತರಬೇಡಿ.. ಆರು ತಿಂಗಳು ಕಾಲಾವಕಾಶ ಕೊಡಿ. ಹೀಗೆ ಕಣ್ಣೀರು ಹಾಕಿಕೊಂಡು ಶಾಲಾ ಆವರಣದಲ್ಲಿ ಪೋಷಕರು (Parents) ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಇನ್ನೊಂದಡೆ ಇದ್ಯಾವುದನ್ನು ಕೇಳದೇ ಕಂದಾಯ ಅಧಿಕಾರಿಗಳು ಶಾಲೆ ಸೀಝ್ ಮಾಡಿ ಬೀಗ ಜಡಿದರು.
Advertisement
Advertisement
ಐಎಂಎ ನಡೆಸುತ್ತಿದ್ದ ಸ್ಕೂಲ್ ಅನ್ನು ಇಂದು ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಂಡು ಬೀಗ ಹಾಕಲಾಯ್ತು. ಆದ್ರೆ ಪೋಷಕರು ಇದರ ವಿರುದ್ಧ ನಮ್ಗೆ ಮಾಹಿತಿ ನೀಡದೇ ಬೀಗ ಹಾಕೋದು ಸರಿಯಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಶಾಲೆಯ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಬಿಗಿಭದ್ರತೆ ನೀಡಲಾಯ್ತು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ
Advertisement
ಈ ಬೆಳವಣಿಗೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಪೋಷಕರಿಗೆ ಹೈಕೋರ್ಟ್ (HighCourt) ತೀರ್ಪು ಕೊಂಚ ರಿಲೀಫ್ ಕೊಟ್ಟದೆ. ನೆಹರೂ ಸ್ಕೂಲ್‍ನ್ನು ಮುಂದಿನ ವಿಚಾರಣೆಯವರೆಗೆ ತೆರೆಯುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಟಿದ್ದು ಆಕ್ಟೋಬರ್ 12 ಕ್ಕೆ ಸದ್ಯ ವಿಚಾರಣೆ ಮುಂದೂಡಿದೆ.
ಅಕ್ಟೋಬರ್ 12ವರೆಗೆ ಸದ್ಯ ಸ್ಕೂಲ್‍ನಲ್ಲಿ ಎಂದಿನಂತೆ ತರಗತಿ ನಡೆಯುವಂತೆ ಹೈಕೋರ್ಟ್ ಆದೇಶ ಪೋಷಕರಲ್ಲಿ ಸಂಭ್ರಮ ತಂದಿದೆ. ಆದರೆ ಮುಂದಿನ ದಿನದಲ್ಲಿ ಏನಾಗಲಿದೆ ಎನ್ನುವ ಆತಂಕವೂ ಇದೆ.