ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಮಧ್ಯಂತರ ಬಜೆಟ್ (Interim Budget ) ಮಂಡಿಸಲು ಸಜ್ಜಾಗಿದೆ. ಇದು ಚುನಾವಣಾ ವರ್ಷವಾದ (Election Year) ಕಾರಣ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅವಕಾಶ ಇರುವುದಿಲ್ಲ. ಕೇವಲ ಲೇಖಾನುದಾನ ಮಾತ್ರ ಮಂಡಿಸಲಾಗುತ್ತದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.
ಬೆಳಕ್ಕೆ 11 ಗಂಟೆಗೆ ಹೊಸದಾಗಿ ಲೋಕಾರ್ಪಣೆಯಾದ ಲೋಕಸಭೆಯಲ್ಲಿ (Lok Sabha) ಮಧ್ಯಂತರ ಬಜೆಟ್ ಮಂಡನೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ ಆರನೇ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಮೋದಿ ಸರ್ಕಾರ ನಾಳೆಯ ಬಜೆಟ್‌ನಲ್ಲಿ ಜನಾಕರ್ಷಕ ನಿರ್ಣಯಗಳನ್ನೇನಾದ್ರೂ ಪ್ರಕಟಿಸುತ್ತಾ? ಇಲ್ಲವೇ, ಮೂಲಧನ ವ್ಯಯವನ್ನು ಹೆಚ್ಚಿಸುವ ಮೂಲಕ ಆರ್ಥಿಕ ವ್ಯವಸ್ಥೆಗೆ ಬೂಸ್ಟ್ ನೀಡುತ್ತಾ? ಇಲ್ಲವೇ, ಜನ ಕಲ್ಯಾಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಮತೋಲನ ಸಾಧಿಸುತ್ತಾ?..ಜನಪ್ರಿಯತೆಯ ಹಳಿ ಮೇಲೆ ಸಾಗುತ್ತಾ? ಇಂತಹ ಹಲವು ಪ್ರಶ್ನೆಗಳ ಬಗ್ಗೆ ಇದೀಗ ವಿಸ್ತೃತ ಚರ್ಚೆಗಳು ನಡೆಯುತ್ತಿವೆ.ಇದು ವೋಟ್ ಆನ್ ಅಕೌಂಟ್ ಆದರೂ ಚುನಾವಣೆ ಸನಿಹದಲ್ಲಿರುವ ಕಾರಣ ವಿವಿಧ ವರ್ಗಗಳ ಮೇಲೆ ಮೋದಿ ಸರ್ಕಾರ ಕೃಪೆ ತೋರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಇಡಿ ಅಧಿಕಾರಿಗಳ ವಿರುದ್ಧವೇ ಹೇಮಂತ್ ಸೋರೆನ್ FIR
Advertisement
Advertisement
ರೈತರಿಗೆ ಏನು ಸಿಗಬಹುದು?
* ಪಿಎಂ ಕಿಸಾನ್ ಮೊತ್ತ 9ಸಾವಿರಕ್ಕೆ ಹೆಚ್ಚಾಗಬಹುದು
* ಎಲ್ಲರಿಗೂ ಅಲ್ಲದಿದ್ರೂ ಮಹಿಳಾ ರೈತರಿಗೆ ಈ ಗಿಫ್ಟ್ ಸಿಗಬಹುದು
* ರಸಗೊಬ್ಬರ ರಿಯಾಯ್ತಿ ಮೊತ್ತ ಹೆಚ್ಚಳ ಆಗಬಹುದು
* ಕೃಷಿ ವಿಮೆ ನಿಯಮಗಳ ಸರಳೀಕರಣ ಮಾಡಬಹುದು
Advertisement
ಗ್ರಾಮೀಣ ಭಾಗಕ್ಕೆ ಏನು?
* ಗ್ರಾಮೀಣ ಜನತೆಯ ಕೊಳ್ಳುವ ಶಕ್ತಿ ಕುಸಿದಿದೆ
* ಹೀಗಾಗಿ ಕೈಗಾರಿಕಾ ಉತ್ಪಾದನೆಯೂ ಕುಸಿದಿದೆ
* ಗ್ರಾಮೀಣ ಜನತೆಯ ಆದಾಯ, ಖರೀದಿ ಶಕ್ತಿ ಹೆಚ್ಚಿಸುವತ್ತ ಗಮನ
* ರೈತರ ಕೃಷಿಯೇತರ ಆದಾಯ ಹೆಚ್ಚಿಸಲು ಹಲವು ಯೋಜನೆ
* ನರೇಗಾ ಯೋಜನೆಗೆ ಈ ಬಜೆಟ್‌ನಲ್ಲಿ ಪ್ರಾಧಾನ್ಯತೆ ಹೆಚ್ಚಬಹುದು ಇದನ್ನೂ ಓದಿ: ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವನೆ – ಇದು ಪಿಕ್ನಿಕ್ ಸ್ಪಾಟ್ ಅಲ್ಲ ಎಂದು ಕೋರ್ಟ್ ಗರಂ
Advertisement
ವೇತನಜೀವಿಗಳಿಗೆ ರಿಲೀಫ್ ಸಿಗುತ್ತಾ?
* ಐಟಿ ಸ್ಲಾಬ್‌ಗಳಲ್ಲಿ ದೊಡ್ಡ ಬದಲಾವಣೆ ಇರದಿರಬಹುದು
* ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಬಹುದು
* ಈ ಮೂಲಕ ಅಲ್ಪ, ಮಧ್ಯಶ್ರೇಣಿಯ ವೇತನಜೀವಿಗಳಿಗೆ ರಿಲೀಫ್!
* ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಕಳೆದ 5 ವರ್ಷದಿಂದ 50ಸಾವಿರದಲ್ಲೇ ಇದೆ
* ಹಣದುಬ್ಬರ ಹೆಚ್ಚಾದರೂ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಿಸಿಲ್ಲ
* ರಿಟೇಲ್ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕ್ರಮ ಆಗಬಹುದು
ಭವಿಷ್ಯದ ಭಾರತಕ್ಕೆ ಏನು ಸಿಗಬಹುದು?
* ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಉತ್ತೇಜನ
* ಪುನರುತ್ಪಾದಕ ಇಂಧನ, ಬಿಟಿ, ಇವಿ ವಲಯಕ್ಕೆ ಪ್ರೋತ್ಸಾಹ
* ಫಿನ್‌ಟೆಕ್, ಇವಿ, ಆರೋಗ್ಯ ಸೇವೆ, ವಿಮಾ ವಲಯಕ್ಕೆ ಪ್ರೋತ್ಸಾಹ
ಮೂಲ ಧನ ವ್ಯಯ ಹೆಚ್ಚಿಸಲಾಗುತ್ತಾ?
* ಪಿಎಂ ಗತಿಶಕ್ತಿ ಯೋಜನೆಗೆ ಮತ್ತಷ್ಟು ಬಲ ತುಂಬಬಹುದು
* ಮೂಲ ಸೌಕರ್ಯಕ್ಕಾಗಿ ಮೂಲಧನ ವ್ಯಯ ಹೆಚ್ಚಿಸಬಹುದು
* ಮೂಲಧನ ವ್ಯಯ ಹೆಚ್ಚಿಸಿದಲ್ಲಿ ಜಿಡಿಪಿ ಹೆಚ್ಚುತ್ತದೆ
* ಮೂಲಧನ ವ್ಯಯ ಹೆಚ್ಚಿಸಿದಲ್ಲಿ ಹೊಸ ಉದ್ಯೋಗ ಸೃಷ್ಟಿ
* ರೈಲ್ವೆಯಲ್ಲಿ ಮೂಲಧನ ವ್ಯಯ ತಗ್ಗದಂತೆ ನೋಡಿಕೊಳ್ಳಬಹುದು