ನವದೆಹಲಿ: ಕೇಂದ್ರ ಸರ್ಕಾರವು ಫೆ. 1ರಂದು ಮಂಡನೆ ಮಾಡಲಿರುವ ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಘೋಷಿಸಲಿದೆ. ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ಇದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರ ಬೆಂಬಲ ಗಳಿಸಲು ಬಿಜೆಪಿ ಮುಂದಾಗಿದೆ. ಕಾರ್ವಿಕ ಸಚಿವಾಲಯ ಸಲ್ಲಿಸಿರುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದೆ ಎಂದು ಮಧ್ಯಮವೊಂದು ವರದಿ ಪ್ರಕಟಿಸಿದೆ.
Advertisement
Advertisement
ಹೆರಿಗೆ ಸೌಲಭ್ಯ ಕಾಯ್ದೆಯನ್ನು 2017ರಲ್ಲಿ ಸರ್ಕಾರ ತಿದ್ದುಪಡಿ ಮಾಡಿತ್ತು. ಆಗ ಉದ್ಯೋಗಸ್ಥ ಮಹಿಳೆಯರಿಗೆ ಕೊಡುವ ಸಂಬಳ ಸಹಿತ ಹೆರಿಗೆ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಿತ್ತು. ಈ ಹಿಂದೆ ಕಾರ್ವಿಕ ಸಚಿವಾಲಯವು ಕಡಿಮೆ ಸಂಬಳ ಪಡೆಯುವ ಮಹಿಳೆಯರಿಗೂ ಕೂಡ 26 ವಾರಗಳ ಹೆರಿಗೆ ರಜೆ ಸಿಗುವಂತೆ ಮಾಡಲು ಕೆಲವು ಕ್ರಮಗಳ ಬಗ್ಗೆ ಸರ್ಕಾರದ ಬಳಿ ಪ್ರಸ್ತಾವನೆ ಇಟ್ಟಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv