ರಾಯಚೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಲ್ಲಿ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ ಕುರಿತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.
ರಾಯಚೂರಿನ ಮಾನ್ವಿಯ ಇಸ್ಲಾಂನಗರದಲ್ಲಿರುವ ಅಲ್ ಫುರ್ ಖಾನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೆ ಪರಶುರಾಮ್ ವಿದ್ಯಾಭ್ಯಾಸ ನಡೆಸಿದ್ದಾನೆ. ಅಲ್ಲದೇ ಪರಶುರಾಮ್ ಕುಟುಂಬ ಮಾನ್ವಿಯಲ್ಲಿ ನೆಲೆಸಿದ್ದ ವೇಳೆ ಮುಸ್ಲಿಮರು ಹೆಚ್ಚು ವಾಸಿಸುವ ಇಸ್ಲಾಂ ನಗರದಲ್ಲೇ ವಾಸವಾಗಿತ್ತು.
Advertisement
Advertisement
ಉಳಿದಂತೆ 1997 ರಿಂದ 2005ರ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಪರಶುರಾಮ್, ಮಾನ್ವಿಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯನ್ನ ಓದಿದ್ದಾನೆ. 2007 ರಿಂದ 2009ರಲ್ಲಿ ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ಮುಗಿಸಿ ಬಳಿಕ ಅದೇ ಕಾಲೇಜಿನಲ್ಲಿ ಬಿಕಾಂ ಸೇರಿದ್ದ. ಆದರೆ ಬಿಕಾಂ ಮೊದಲ ಹಾಗೂ ಎರಡನೇ ಸೆಮಿಸ್ಟರ್ ಗಳಲ್ಲಿ ಫೇಲ್ ಆಗಿದ್ದ ಆಕರಣ ಬಳಿಕ ಬಿಕಾಂ ಮೂರನೇ ಸೆಮಿಸ್ಟರ್ ಗೆ ಲಿಂಗಸುಗೂರಿನ ವಿಸಿಬಿ ಎಜುಕೇಶನ್ ಸೊಸೈಟಿ ಕಾಲೇಜ್ ಗೆ ಪ್ರವೇಶ ಪಡೆದಿದ್ದ.
Advertisement
ಈ ಕುರಿತು ಮಾಹಿತಿ ನೀಡಿದರುವ ಕಾಲೇಜು ಪ್ರಾಂಶುಪಾಲರು ಕಾಲೇಜಿಗೆ ಪ್ರವೇಶದ ಪಡೆದ ಪರಶುರಾಮ್ ಬಳಿಕ ತರಗತಿಗಳಿಗೆ ಹಾಜರಾಗಿಲ್ಲ. ಇದರಿಂದ ಆತನ ಓದು ಅಲ್ಲಿಗೆ ಅಂತ್ಯವಾಗಿದೆ ಎಂದು ತಿಳಿಸಿದ್ದು, ಈ ವೇಳ ಪರಶುರಾಮ್ ಯಾವ ಸಂಘಟನೆಗಳ ಜೊತೆಗೂ ಗುರುತಿಸಿಕೊಂಡಿರುವ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.