ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುವ ಸ್ಮಾರಕಗಳಲ್ಲಿ ಐಫೆಲ್ ಟವರ್ (Eiffel Tower) ಕೂಡ ಒಂದು. ಫ್ರಾನ್ಸ್ (France) ದೇಶದ ಪ್ಯಾರಿಸ್‌ನಲ್ಲಿರುವ (Paris) ಈ ಸುಂದರವಾದ ಗೋಪುರಕ್ಕೆ ಇಂಜಿನಿಯರ್ ಗುಸ್ಟಾವ್ ಐಫೆಲ್ ಅವರ ಹೆಸರನ್ನು ಇಡಲಾಗಿದೆ. ಈ ಗೋಪುರವು 330 ಮೀಟರ್ ಎತ್ತರ ಹಾಗೂ 81 ಅಂತಸ್ತುಗಳನ್ನು ಹೊಂದಿದೆ.
ಫ್ರಾನ್ಸ್ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಗೋಪುರವು 18,000 ಕ್ಕೂ ಹೆಚ್ಚು ಲೋಹದ ಭಾಗಗಳನ್ನು ಒಳಗೊಂಡಿದೆ, ಇವುಗಳನ್ನು 2.5 ಮಿಲಿಯನ್ ರಿವೆಟ್‌ಗಳು ಸೇರಿಸುತ್ತವೆ. 20 ವರ್ಷಗಳ ನಂತರ ಅದನ್ನು ಕಿತ್ತುಹಾಕುವ ಯೋಜನೆ ಇತ್ತು. ಆದರೆ ರೇಡಿಯೊ ಆಂಟೆನಾ ಮತ್ತು ವೈರ್‌ಲೆಸ್ ಟೆಲಿಗ್ರಾಫ್ ಟ್ರಾನ್ಸ್‌ಮೀಟರ್ ಅನ್ನು ಗೋಪುರದಲ್ಲಿ ಇರಿಸಿದ್ದರ ಪರಿಣಾಮ ಅದು ಉಳಿದುಕೊಂಡಿತು. ಗೋಪುರವು 1889 ರಿಂದ 1930 ರವರೆಗೆ, ಅಂದರೆ 40 ವರ್ಷಗಳವರೆಗೆ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ರಚನೆಯ ದಾಖಲೆಯನ್ನು ಹೊಂದಿತ್ತು.
Advertisement
Advertisement
ಚಂಡಮಾರುತದ ಸಮಯದಲ್ಲಿ ಈ ಗೋಪುರ ತೂಗಾಡುತ್ತದೆ. ಅಲ್ಲದೇ ಸೂರ್ಯನ ಶಾಖವು ಕಬ್ಬಿಣವನ್ನು ವಿಸ್ತರಿಸಲು ಕಾರಣವಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಗೋಪುರವು ಕೆಲವು ಸೆಂಟಿಮೀಟರ್‌ಗಳಷ್ಟು ಬೆಳೆಯುತ್ತದೆ. ಅಲ್ಲದೇ ಸರಾಸರಿ ಆರು ಇಂಚುಗಳಷ್ಟು ವಾಲುತ್ತದೆ. ಏಕೆಂದರೆ ನೇರ ಬೆಳಕನ್ನು ಎದುರಿಸುತ್ತಿರುವ ಒಂದು ಬದಿಯು ಇತರ ಮೂರು ಬದಿಗಳಿಗಿಂತ ವೇಗವಾಗಿ ಬಿಸಿಯಾಗುವುದು ಇದಕ್ಕೆ ಕಾರಣವಾಗಿದೆ.
Advertisement
ಇದಕ್ಕಾಗಿ 19 ನೇ ಶತಮಾನದಲ್ಲಿ ಕೆಲಸ ಮಾಡಿದ ಫ್ರೆಂಚ್ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಹೆಸರುಗಳನ್ನು ಹಲವಾರು ಪ್ಯಾರಿಸ್ ಬೀದಿಗಳಿಗೆ ಇಡಲಾಗಿದೆ. ಅಲ್ಲದೇ ಅವುಗಳಲ್ಲಿ 72 ಹೆಸರನ್ನು ಐಫೆಲ್ ಟವರ್‌ನಲ್ಲಿ ಕೆತ್ತಲಾಗಿದೆ.
Advertisement
ಪ್ರತಿ ಏಳು ವರ್ಷಗಳಿಗೊಮ್ಮೆ ಸುಮಾರು 60 ಟನ್ ಬಣ್ಣವನ್ನು ಗೋಪುರಕ್ಕೆ ಬಳಿಯಲಾಗುತ್ತದೆ. ಇದು ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಸಹಾಯ ಮಾಡುತ್ತದೆ. 20,000 ಬಲ್ಬ್‌ಗಳನ್ನು ಒಳಗೊಂಡಿರುವ ಈ ಗೋಪುರ ರಾತ್ರಿ ವೇಳೆಯಲ್ಲಿ ಆಕರ್ಷಕವಾಗಿ ಕಾಣುತ್ತದೆ.
ಒಟ್ಟು 1,665 ಮೆಟ್ಟಿಲುಗಳಿದ್ದು ಅದು ಐಫೆಲ್ ಟವರ್‌ನ ಮೇಲ್ಭಾಗಕ್ಕೆ ಹೋಗುತ್ತದೆ. ಪ್ರತಿ ವರ್ಷ ಇದರ ಎಲಿವೇಟರ್ 64,001 ಮೈಲುಗಳನ್ನು (1,03,000 ಕಿಲೋಮೀಟರ್) ಕ್ರಮಿಸುತ್ತದೆ. ಐಫೆಲ್ ಟವರ್ ಅತಿ ಹೆಚ್ಚು ಭೇಟಿ ನೀಡಿದ ಸ್ಮಾರಕವಾಗಿದ್ದು, ಪ್ರತಿ ವರ್ಷ ಸುಮಾರು 70 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.
ಐಫೆಲ್ ಟವರ್‌ನ್ನು ಮಾರ್ಚ್ 31, 1889 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಗೋಪುರವನ್ನು ಮಾರ್ಚ್ 15, 1889 ರಂದು ಸಂಪೂರ್ಣವಾಗಿ ನಿರ್ಮಿಸಲಾಗಿದ್ದರೂ, ಇದನ್ನು ಮಾರ್ಚ್ 31 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.
ಮೊದಲು 28 ಜನವರಿ 1887 ರಂದು ಇದರ ಕೆಲಸ ಪ್ರಾರಂಭವಾಯಿತು. ಮಾರ್ಚ್ 31, 1889 ರಂದು ಗೋಪುರವನ್ನು ಎರಡು ವರ್ಷ, ಎರಡು ತಿಂಗಳು ಮತ್ತು ಐದು ದಿನಗಳಲ್ಲಿ ಪೂರ್ಣಗೊಳಿಸಲಾಯಿತು.
ಆಗಸ್ಟ್ 1944 ರಲ್ಲಿ ಅಡಾಲ್ಫ್ ಹಿಟ್ಲರ್ ನಗರವನ್ನು ನೆಲಸಮಗೊಳಿಸಲು ತನ್ನ ಸೇನೆಗೆ ಆದೇಶಿಸಿದ್ದ. ಟವರ್‌ನ್ನು ಸ್ಫೋಟಿಸಲು ಯೋಜನೆಯನ್ನೂ ರೂಪಿಸಲಾಗಿತ್ತು. ಆದರೆ ಅದೃಷ್ಟವಶಾತ್ ಆ ವೇಳೆಗಾಗಲೇ ಮಿತ್ರಪಕ್ಷದ ಪಡೆಗಳು ನಡೆಸಿದ ದಾಳಿಯಿಂದ ನಾಜಿಗಳನ್ನು ಹಿಮ್ಮೆಟ್ಟಿಸಲಾಯಿತು.
Web Stories