– 18 ಗಂಟೆ ಕೆಲಸ ಮಾಡಲು ತಾಯಿಯೇ ಸ್ಪೂರ್ತಿ
– 100 ವರ್ಷ ಪೂರೈಸಿರುವ ಹಿಂದಿನ ಗುಟ್ಟು
ಒಬ್ಬ ತಾಯಿ ಮಗುವಿಗೆ ಜನ್ಮ ನೀಡುವುದಲ್ಲದೆ, ಅವರ ಮನಸ್ಸು, ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ನನ್ನ ಜೀವನದಲ್ಲಿ ಏನೇ ಒಳ್ಳೆಯದಾದರೂ ಅದರ ಶ್ರೇಯಸ್ಸು ತಾಯಿಗೇ ಸಲ್ಲುತ್ತದೆ. ದೇಶದ ನಾಯಕನಾಗುವಂಹ ವ್ಯಕ್ತಿಗೆ ಜನ್ಮ ನೀಡಿದ ಹೀರಾಬೆನ್ (Heeraben Modi) ಇಂದು ಅಗಲಿದ್ದಾರೆ. ಶತಾಯುಷಿ ತಾಯಿ (Mother) ಬಗ್ಗೆ ಸ್ವತಃ ನರೇಂದ್ರ ಮೋದಿಯವರೇ (Narendra Modi) ಕುತೂಹಲಪಟ್ಟಂತಹ ಹಲವಾರು ಸಂಗತಿಗಳಿವೆ.
Advertisement
ತನ್ನ ಜೀವನದಲ್ಲಿ ಪಟ್ಟಂತಹ ಕಷ್ಟ, ಹೋರಾಟದ ಕಥೆ ಹಾಗೂ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
Advertisement
Advertisement
ಕಠಿಣ ಪರಿಶ್ರಮ: ಮೋದಿ ಅವರು ತಮ್ಮ ಚಿಕ್ಕ ವಯಸ್ಸಿನ ನೆನಪುಗಳನ್ನು ಈ ಹಿಂದೆ ಅವರ 100 ವರ್ಷದ ಹುಟ್ಟುಹಬ್ಬದಂದು ಮೆಲುಕು ಹಾಕಿದ್ದರು. ಈ ಬಗ್ಗೆ ತಿಳಿಸಿರುವ ಅವರು ತಮ್ಮ ತಾಯಿ ಬೆಳಗ್ಗೆ 4 ಗಂಟೆಗೆ ಏಳುತ್ತಿದ್ದರು. ಮನೆಯ ಎಲ್ಲಾ ಕೆಲಸಗಳನ್ನೂ ತಾನೇ ಮಾಡುತ್ತಿದ್ದರು. ಕಾಳುಗಳನ್ನು ರುಬ್ಬುವುದರಿಂದ ಹಿಡಿದು ಅಕ್ಕಿ, ಕಾಳುಗಳನ್ನು ಜರಡಿ ಹಿಡಿಯುವವರೆಗೂ ಎಲ್ಲವನ್ನೂ ಮಾಡುತ್ತಿದ್ದರು. ಆಕೆಗೆ ಯಾರ ಆಸರೆಯೂ ಇರಲಿಲ್ಲ. ಯಾರ ಸಹಾಯವನ್ನೂ ಕೇಳುತ್ತಿರಲಿಲ್ಲ. ಮನೆಯಿಂದ ಕೊಳಕು ಬಟ್ಟೆಗಳನ್ನೆಲ್ಲಾ ಕೊಂಡು ಹೋಗಿ ಕೆರೆಯಲ್ಲಿ ಒಗೆಯುತ್ತಿದ್ದರು. ನಾನೂ ಅವರೊಂದಿಗೆ ಹೋಗಿ ಸಹಾಯ ಮಾಡುವುದರೊಂದಿಗೆ ಆಟವನ್ನೂ ಆಡುತ್ತಿದ್ದೆ ಎಂದಿದ್ದಾರೆ.
Advertisement
ಹನಿ ನೀರನ್ನೂ ವ್ಯರ್ಥ ಮಾಡುತ್ತಿರಲಿಲ್ಲ: ಮನೆಯ ಖರ್ಚಿಗೆಂದು ತಮ್ಮ ತಾಯಿ ಕೆಲವು ಮನೆಗಳಿಗೆ ತೆರಳಿ ಪಾತ್ರೆ ತೊಳೆಯುತ್ತಿದ್ದರು. ಹೆಚ್ಚುವರಿ ಸಂಪಾದಿಸಲು, ಅವರು ಚರಕವನ್ನು ಹಿಡಿದು ನೂಲುತ್ತಿದ್ದರು. ಆಕೆ ಇತರರ ಮೇಲೆ ಅವಲಂಬಿತರಾಗುವುದು ಅಥವಾ ಇತರರಿಗೆ ತನ್ನ ಕೆಲಸವನ್ನು ಮಾಡುವಂತೆ ಎಂದಿಗೂ ಕೇಳುತ್ತಿರಲಿಲ್ಲ.
ಮಳೆಯಿಂದ ನಮ್ಮ ಮಣ್ಣಿನ ಮನೆಯಲ್ಲಿ ಸಮಸ್ಯೆಯಾಗುತ್ತಿತ್ತು. ಮಳೆಗಾಲದಲ್ಲಿ ನಮ್ಮ ಮೇಲ್ಛಾವಣಿ ಸೋರುತ್ತಿದ್ದು, ಮನೆಗೆ ನೀರು ನುಗ್ಗುತ್ತಿತ್ತು. ಮಳೆ ನೀರನ್ನು ಸಂಗ್ರಹಿಸಲು ತಾಯಿ ಪಾತ್ರೆಗಳನ್ನು ಸೋರಿಕೆಯ ಅಡಿಯಲ್ಲಿ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸಹನೆಯ ಪ್ರತೀಕವಾಗಿದ್ದರು. ಮುಂದಿನ ಕೆಲವು ದಿನಗಳ ವರೆಗೆ ಇದೇ ನೀರನ್ನು ಬಳಸುತ್ತಿದ್ದಳು ಎಂದರೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಜಲ ಸಂರಕ್ಷಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೇನಿದೆ!
ಕರವಸ್ತ್ರ ಯಾವಾಗಲೂ ಇಟ್ಟುಕೊಂಡಿರುತ್ತಿದ್ದರು: ವಯಸ್ಸು 100 ಆಗಿದ್ದರೂ ತಮ್ಮ ತಾಯಿ ಯಾವಾಗಲೂ ತಮಗೆ ಕೈಯಾರೆ ತಿಂಡಿಗಳನ್ನು ತಿನ್ನಿಸುತ್ತಿದ್ದರು. ಸ್ವಚ್ಛತೆಗೂ ಆದ್ಯತೆ ನೀಡುತ್ತಿದ್ದರು. ಹಾಸಿಗೆ ಮೇಲೆ ಧೂಳಿನ ಕಣವಿದ್ದರೂ ಸಹಿಸುತ್ತಿರಲಿಲ್ಲ. ನಾನು ಅವರನ್ನು ಗಾಂಧಿನಗರದಲ್ಲಿ ಭೇಟಿಯಾದಾಗಲೆಲ್ಲಾ ಅವರು ತಮ್ಮ ಕೈಯಿಂದಲೇ ನನಗೆ ಸಿಹಿ ತಿನ್ನಿಸುತ್ತಿದ್ದರು. ಚಿಕ್ಕ ಮಕ್ಕಳಿಗೆ ಊಟ ಮಾಡಿಸಿದಂತೆ ಉಣಿಸುತ್ತಿದ್ದರು. ಊಟದ ಬಳಿಕ ತನ್ನ ಕರವಸ್ತ್ರದಿಂದ ಮುಖವನ್ನು ಒರೆಸುತ್ತಿದ್ದರು. ತಮ್ಮ ಬಿಳಿ ಸೀರೆಯೊಂದಿಗೆ ಅವರು ಯಾವಾಗಲೂ ಕರವಸ್ತ್ರವನ್ನು ಇಟ್ಟುಕೊಳ್ಳುತ್ತಿದ್ದರು.
ಖರ್ಚು ವೆಚ್ಚದಲ್ಲಿ ಪ್ರಾಮಾಣಿಕತೆ: ತನ್ನ ಬಳಿ 5 ರೂ. ಇರಲಿ ಅಥವಾ 10 ರೂ. ಇರಲಿ. ಆಕೆಗೆ ಕುಟುಂಬವನ್ನು ಹೇಗೆ ನಡೆಸಬೇಕು ಎಂಬುದು ತಿಳಿದಿತ್ತು. ಮನೆಯವರಾರಾದರೂ ಅನಗತ್ಯ ವಸ್ತು ತಂದಾಗ ಬೈದು ಆ ವಸ್ತುವನ್ನು ವಾಪಸ್ ಕೊಡುವಂತೆ ಹೇಳಿ ಕಳುಹಿಸುತ್ತಿದ್ದರು. ಆಕೆಗೆ ಪ್ರಾಮಾಣಿಕ ಗುಣಗಳಿತ್ತು. ಭವಿಷ್ಯಕ್ಕಾಗಿ ಹಣವನ್ನು ಕೂಡಿಡುತ್ತಿದ್ದರು. ಹಣದ ಕೊರತೆಯುಂಟಾದಾಗಲೂ ಒಂದಲ್ಲಾ ಒಂದು ರೀತಿಯಲ್ಲಿ ಸಂಸಾರ ನಡೆಸುತ್ತಿದ್ದಳು. ಇದನ್ನೂ ಓದಿ: ಎರಡು ಬಾರಿ ಮಾತ್ರ ಮಗನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಹೀರಾಬೆನ್!
ಮನೆಮದ್ದು, ಕಠಿಣ ಪರಿಶ್ರಮದಿಂದಲೇ 100 ವರ್ಷ ಪೂರೈಕೆ: ತಾಯಿಗೆ ಅನೇಕ ಮನೆಮದ್ದುಗಳ ಬಗ್ಗೆ ತಿಳಿದಿತ್ತು. ಅಂತಹ ಪರಿಸ್ಥಿತಿಯಲ್ಲಿ ಜನರು ಅವಳನ್ನು ದೇಸಿ ಮಾ ಎಂದು ಕರೆಯುತ್ತಿದ್ದರು. ಶಾಲೆಗೆ ಹೋಗದಿದ್ದರೂ ಆಕೆ ಹಳ್ಳಿಯ ವೈದ್ಯೆಯಾಗಿದ್ದಳು. ಕಠಿಣ ಪರಿಶ್ರಮ ಮತ್ತು ಮನೆಮದ್ದುಗಳ ಆಧಾರದ ಮೇಲೆ ಅವರು ತಮ್ಮ 100 ವರ್ಷ ಪೂರೈಸಿದರು.
ಅಮ್ಮ ದಿನಕ್ಕೆ 2 ಬಾರಿ ಬಾವಿಯಿಂದ ನೀರು ತುಂಬಿಸುತ್ತಿದ್ದಳು. ಇದರಿಂದ ಅವಳ ಬೆನ್ನು ಗಟ್ಟಿಯಾಗುತ್ತಿತ್ತು. ಪ್ರತಿನಿತ್ಯ ಬಟ್ಟೆ ಒಗೆಯಲು ಕೆರೆಗೆ ಹೋಗುತ್ತಿದ್ದಳು. ಇದಕ್ಕಾಗಿ ಸಾಕಷ್ಟು ಮೆಟ್ಟಿಲುಗಳನ್ನು ಹತ್ತಬೇಕಾಗಿತ್ತು. ಇದರಿಂದ ಅವಳ ಕಾಲುಗಳು ಬಲವಾಗಿತ್ತು.
18 ಗಂಟೆ ಕೆಲಸ ಮಾಡಲು ತಾಯಿಯೇ ಸ್ಪೂರ್ತಿ: ನಮ್ಮ ತಂದೆ ತುಂಬಾ ಶ್ರಮಜೀವಿ. ತಾಯಿಯೂ ದಿನವಿಡೀ ದುಡಿಯುತ್ತಿದ್ದರು ಎಂದು ಮೋದಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಈ ಸ್ಫೂರ್ತಿಯನ್ನು ತಮ್ಮ ತಾಯಿ ಹೀರಾಬೆನ್ ಅವರಿಂದಲೇ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಪ್ರಧಾನಿ, ತಾಯಿಗೆ ಮುದ್ದಿನ ಮಗ- ಮೋದಿ, ಹೀರಾಬೆನ್ ಅದ್ಭುತ ಬಾಂಧವ್ಯ ಹೀಗಿತ್ತು!
ಆಕೆ ಅನಕ್ಷರಸ್ಥೆ. ಆದರೆ ನನ್ನ ತಂದೆ ದಾಮೋದರ್ ಅವರಿಗೆ ಧಾರ್ಮಿಕ ಪುಸ್ತಕಗಳನ್ನು ನೀಡುತ್ತಿದ್ದರು. ಅವರು ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಆಕೆ ಪೂಜೆ ಮಾಡುತ್ತಿದ್ದಳು. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಪ್ರಧಾನಿ ನರೇಂದ್ರ ಮೋದಿಯವರ ಜೀವನದಲ್ಲಿ ಆ ಮಹಿಳೆ ಅವರ ತಾಯಿ ಹೀರಾಬೆನ್. ಜೀವನವಿಡೀ ಕಷ್ಟಪಟ್ಟು ದುಡಿದು, ಸಾಲ ಮಾಡದೆ ಮಕ್ಕಳಿಗೆ ಇಂತಹ ಶಿಕ್ಷಣ ನೀಡಿ, ಸ್ವಾವಲಂಬಿಗಳಾಗುವಂತೆ ಮಾಡಿದರು.