ಯಾದಗಿರಿ: ಅಂತರ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಾದಗಿರಿ (Yadagiri) ಗ್ರಾಮೀಣ ಭಾಗದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ನಿಂಗಪ್ಪ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಇಬ್ಬರು ಪ್ರೀತಿಯಲ್ಲಿ ಬಿದ್ದು ಓಡಾಡುವುದನ್ನ ಯುವತಿಯ ಕುಟುಂಬಸ್ಥರು ಗಮನಿಸಿದ್ದರು. ನಿಂಗಪ್ಪನನ್ನು ಕರೆದು ಯುವತಿಯ ಸಹವಾಸ ಬಿಡುವಂತೆ ಆಕೆಯ ಕುಟುಂಬಸ್ಥರು ತಾಕೀತು ಮಾಡಿದ್ದರು. ಇದಾದ ಬಳಿಕ ಆಕೆಯಿಂದ ನಿಂಗಪ್ಪ ಅಂತರ ಕಾಯ್ದುಕೊಂಡಿದ್ದ. ಇದನ್ನು ಸಹಿಸಲಾಗದೇ ಯುವತಿ, ನೀನು ನನ್ನ ಬಿಟ್ಟರೆ ನಾನು ಸಾಯುತ್ತೇನೆಂದು ಹೇಳಿ ನಿಂಗಪ್ಪನೊಂದಿಗೆ ಓಡಿಹೋಗಿದ್ದಳು.ಇದನ್ನೂ ಓದಿ: ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’
Advertisement
Advertisement
ಓಡಿ ಹೋಗಿ ಗುಜರಾತ್‌ನಲ್ಲಿ ವಾಸವಾಗಿದ್ದರು. ಬಳಿಕ ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡಿ ಯುವತಿಯನ್ನು ಆಕೆ ಮನೆಗೆ ಕಳುಹಿಸಿದ್ದರು. ತದನಂತರ ನಿಂಗಪ್ಪ ಕೂಲಿ ಕೆಲಸಕ್ಕಾಗಿ ಚಿತ್ತಾಪುರಕ್ಕೆ ತೆರಳಿದ. ಆದ ಯುವತಿ ನಿಂಗಪ್ಪನಿಗೆ ಕರೆಮಾಡಿ ಮತ್ತೆ ಆತನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಯುವತಿಯ ಕುಟುಂಬಸ್ಥರು ನಿಂಗಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
Advertisement
ದೊಣ್ಣೆ, ಬಡಿಗೆ, ರಾಡ್‌ನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಯುವತಿಯ ಕುಟುಂಬಸ್ಥರ ವಿರುದ್ಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.ಇದನ್ನೂ ಓದಿ: ಹೊಸ ವರ್ಷಕ್ಕೆ ಪೂರ್ವ ತಯಾರಿ – ಒಂದೇ ದಿನ 101 ಪುರುಷರೊಂದಿಗೆ ಲಿಲಿ ಸೆಕ್ಸ್