ಧಾರವಾಡ: ಬುದ್ಧಿ ಜೀವಿಗಳು ಶರೀರಕ್ಕೆ ಬೇಕಾಗಿರುವ ಅವಶ್ಯಕತೆ ಪೂರೈಸಿಕೊಳ್ಳುವುದೇ ಬದುಕೆಂದು ತಿಳಿದಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹೇಳಿದರು.
ನಗರದಲ್ಲಿ ಕೌಶಲ ಅಭಿವೃದ್ಧಿ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸೋ ಕಾಲ್ಡ್ ಬುದ್ಧಿ ಜೀವಿಗಳು ಬದುಕು ಎಂದರೆ 360 ಡಿಗ್ರಿ ಆಚೇಗೆ ನೋಡುವುದೇ ಇಲ್ಲ. ಅವರಿಗೆ ಶರೀರವೇ ಬದುಕಾಗಿರುತ್ತದೆ. ಸತ್ತ ಹೆಣಕ್ಕೂ ಜೀವ ಇರುವ ಮನುಷ್ಯನಿಗೂ ಇಲ್ಲಿ ವ್ಯತ್ಯಾಸವೇ ಇಲ್ಲದಂತಾಗುತ್ತಿದೆ. ಇದನ್ನು ಅವರು ತಿಳಿದುಕೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜಗತ್ತಿನ ಹಲವು ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೇವಲ ಕೆಲವು ಕಡೆ ಮಾತ್ರ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಅದು ಅವರ ವಿಶೇಷ ಕೌಶಲವಾಗಿದೆ. ಹೀಗಾಗಿ ಜಗತ್ತಿನ ಯಾವ ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ, ಅಲ್ಲಿ ನಾವು ಬೆಳೆದು ಆಳಬೇಕು ಎಂದು ಯುವಕರಿಗೆ ಸಚಿವರು ಕರೆ ನೀಡಿದರು.