– ಜಾತಿ ನಿಂದನೆ, ಗೂಂಡಾ ಆ್ಯಕ್ಟ್‌ನಡಿ ಕ್ರಮಕ್ಕೆ ಆಗ್ರಹ
ಬೆಂಗಳೂರು: ರಾಜ್ಯಪಾಲರ ಬಗ್ಗೆ ಅಪಮಾನಕರ ಹೇಳಿಕೆಗಳನ್ನು ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ (BJP) ದೂರು ನೀಡಿದೆ.
ಇಂದು ಮಧ್ಯಾಹ್ನ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಸಂಸದ ಗೋವಿಂದ ಕಾರಜೋಳ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ದೂರು ದಾಖಲಿಸಿದೆ. ದಲಿತ ವರ್ಗದ ರಾಜ್ಯಪಾಲರ ಬಗ್ಗೆ ಅವಾಚ್ಯ ಶಬ್ಧ ಬಳಸಿ ನಿಂದನೆ, ಫೋಟೋಗೆ ಚಪ್ಪಲಿಯಲ್ಲಿ ಹೊಡೆದಿದ್ದು, ಬಾಂಗ್ಲಾ ಪ್ರಧಾನಿ ಪರಿಸ್ಥಿತಿ ಬರುವ ಬೆದರಿಕೆ ಹೇಳಿಕೆಗಳ ವಿರುದ್ಧ ದೂರು ಕೊಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನವರದ್ದು ಅಂಬೇಡ್ಕರ್‌ರನ್ನ ಅವಮಾನಿಸಿದ ಸಂಸ್ಕೃತಿ, ರಾಜ್ಯಪಾಲರ ಅಪಮಾನ ಸಹಿಸಲ್ಲ: ಗೋವಿಂದ ಕಾರಜೋಳ
ಸಲೀಂ ಅಹಮದ್, ಜಮೀರ್ ಅಹಮದ್, ಐವಾನ್ ಡಿಸೋಜ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಕೆ.ವೈ.ನಂಜೇಗೌಡ ಸೇರಿ ಮತ್ತಿತರ ಜಾತಿ ನಿಂದನೆ ಹಾಗೂ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ದೂರಿನಲ್ಲಿ ಮನವಿ ಮಾಡಲಾಗಿದೆ.
ದೂರಿನ ಬಳಿಕ ಮಾತಾಡಿದ ಸಂಸದ ಕಾರಜೋಳ, ನಿನ್ನೆ ರಾಜ್ಯಪಾಲರ ವಿರುದ್ಧ ಸರ್ಕಾರಿ ಪ್ರೇರಿತ ಪ್ರತಿಭಟನೆ ನಡೆಸಲಾಯಿತು. ರಾಜ್ಯಪಾಲರ ವಿರುದ್ಧ ನಿಂದಿಸಲಾಯ್ತು, ಧಮಕಿ ಹಾಕಲಾಯ್ತು. ಫೋಟೋಗೆ ಚಪ್ಪಲಿಯಲ್ಲಿ ಹೊಡೆದರು. ಐವಾನ್ ಡಿಸೋಜಾ ಉಗ್ರರ ರೀತಿ ಬೆದರಿಕೆ ಹಾಕಿದ್ದಾರೆ. ಅವನಿಗೆ ಪಾಕ್ ಉಗ್ರರ ನಂಟಿದೆ. ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಎಲ್ಲರ ವಿರುದ್ಧ ಕೇಸ್ ದಾಖಲಿಸುವಂತೆ ಡಿಜಿಪಿಗೆ ದೂರು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದೂರಿನಲ್ಲಿ ಕೆಲವರ ಹೆಸರಿದೆ. ಇನ್ನೂ ಯಾರ‍್ಯಾರು ರಾಜ್ಯಾದ್ಯಂತ ಪ್ರತಿಭಟನೆ ವೇಳೆ ಅವಹೇಳನ ಮಾಡಿದ್ದಾರೋ ಅವರೆಲ್ಲರ ವಿರುದ್ಧ ಕ್ರಮ ಆಗಬೇಕು ಅಂತಾ ಮನವಿ ಮಾಡಿದ್ದೇವೆ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡ್ತೇವೆ. ಡಿಜಿಪಿಯವರು ಈ ದೂರನ್ನು ಗಂಭೀರವಾಗಿ ಪರಿಗಣಿಸಬೇಕು. ಅವರೆಲ್ಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.