ತುಳುನಾಡಿನ ದೈವಕ್ಕೆ ಹೆಣ್ಣು ದೈವ ಅಂತ ಅಪಮಾನ ಮಾಡಿ, ವಿವಾದ ಸೃಷ್ಟಿಸಿದ್ದ ರಣವೀರ್ ಸಿಂಗ್ (Ranveer Singh) ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿದೆ.
ಕಾಂತಾರಾ ಚಾಪ್ಟರ್-1ರ ಪಾತ್ರದ ಬಗ್ಗೆ ಹೇಳಿಕೆ ವಿವಾದ ಸಂಬಂಧ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಕೇಸ್ ರದ್ದು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿಂದು (ಮಾ.2) ನಡೆಯಿತು. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಇರಾನ್-ಇಸ್ರೇಲ್ ಯುದ್ಧದಿಂದಾಗಿ ಇಂಗ್ಲೆಂಡ್‌ನಲ್ಲಿಯೇ ಸಿಲುಕಿರೋದಾಗಿ ರಣವೀರ್ ಸಿಂಗ್ ಪರ ವಕೀಲ ಸಜನ್ ಪೂವಯ್ಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಜರಾಗಿ ಹೇಳಿಕೆ ನೀಡಿದರು. ಇದನ್ನೂ ಓದಿ: ಖಮೇನಿ ಹತ್ಯೆಯಾದ ಎರಡು ದಿನಗಳ ಬಳಿಕ ಪತ್ನಿ ಮನ್ಸೌರೆ ಸಾವು
ಎಸ್‌ಪಿಪಿ ಜಗದೀಶ್ ಅವರು ರಣವೀರ್ ಸಿಂಗ್‌ಗೆ ನೋಟಿಸ್ ನೀಡಿದ್ದು, ಅವರು ಸಮಯ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು ಈ ವೇಳೆ, ಹೈಕೋರ್ಟ್ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶ ವಿಸ್ತರಣೆ ಮಾಡಿದ್ದು, ಮಾ.9ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.

