Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್‌ ಚಕ್ರತೀರ್ಥ ಸ್ಪಷ್ಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್‌ ಚಕ್ರತೀರ್ಥ ಸ್ಪಷ್ಟನೆ

Bengaluru City

ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್‌ ಚಕ್ರತೀರ್ಥ ಸ್ಪಷ್ಟನೆ

Public TV
Last updated: May 31, 2022 3:59 pm
Public TV
Share
4 Min Read
School textbook rohith chakrathirtha Open Challenge To baraguru ramachandrappa For Debate
SHARE

ಬೆಂಗಳೂರು: ಕುವೆಂಪು ಬಗ್ಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟೀಕರಣ ನೀಡಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮೂಲಕ ಸ್ಪಷ್ಟೀಕರಣ ನೀಡಿದ ಅವರು, ನಾನು ಕುವೆಂಪು ಅವರಿಗೆ ಅಪಮಾನ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ‌. ಅಲ್ಲದೆ ನಾಡಗೀತೆಗೆ ಅಪಮಾನ ಮಾಡಿದವರ ವಿರುದ್ದ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ಮನವಿ ಮಾಡಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ರಾಷ್ಟ್ರಕವಿ ಕುವೆಂಪು ಅವರ ವಿಚಾರವನ್ನು ಮುಂದಿಟ್ಟುಕೊಂಡು ಒಂದಷ್ಟು ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಅವುಗಳಲ್ಲಿ ಒಂದು, ಕುವೆಂಪು ಅವರು ಬರೆದಿರುವ ನಾಡಗೀತೆಗೆ ನಾನು ಅವಮಾನ ಮಾಡಿದ್ದೇನೆ ಎಂಬುದನ್ನು ಕುರಿತಾದದ್ದು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ಮತ್ತು ಚಿತ್ರಗಳನ್ನು ತೋರಿಸುವ ಹಲವಾರು ಪೋಸ್ಟರುಗಳು, ಚಿತ್ರಗಳು ಓಡಾಡುತ್ತಿವೆ. ನಾನು ಕುವೆಂಪು ಅವರ ಸಾಹಿತ್ಯವನ್ನು ಅತ್ಯಂತ ಪ್ರೀತಿ, ಗೌರವಗಳಿಂದ ಓದಿಕೊಂಡು ಬಂದಿದ್ದು ಯಾವುದೇ ಕಾರಣಕ್ಕೂ ಆ ಮಹಾಕವಿಗೆ ಆಗೌರವ ಸೂಚಿಸುವ ಪ್ರಶ್ನೆಯೇ ಇಲ್ಲ.

kuvempu

2017ರಲ್ಲಿ ಸನ್ಮಾನ್ಯ ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷವು ಆಡಳಿತಾರೂಢವಾಗಿದ್ದಾಗ ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಆರೇಬಿಕ್ ಭಾಷೆ ಕಲಿಸುತ್ತೇವೆ ಎಂಬ ಹೇಳಿಕೆ ಕೊಟ್ಟಾಗ ಅವರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶದ ಒಂದು ಭಾಗವಾಗಿ ಯಾರೋ ಒಬ್ಬರು ನಾಡಗೀತೆಯ ಧಾಟಿಯಲ್ಲಿ ನಾಲ್ಕು ಸಾಲುಗಳನ್ನು ಬರೆದು ಅಲ್ಲಿ ಆಗಿನ ಕಾಲದ ಸರಕಾರದ ನಡೆಯನ್ನು ಪ್ರಶ್ನಿಸಿದ್ದರು. ವಾಟ್ಸಾಪ್ ಮೂಲಕ ಬಂದಿದ್ದ ಆ ಬರಹವನ್ನು ನಾನು ಫೇಸ್‌ಬುಕ್ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಇದು ವಾಟ್ಸಾಪ್‌ನಲ್ಲಿ ಬಂದ ಬರಹ ಎಂಬುದನ್ನು ಆ ಪೋಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದೆ. ಆದರೆ ಕೆಲವೊಂದು ವ್ಯಕ್ತಿಗಳು ನನ್ನ ಪೋಸ್ಟನ್ನು ತಮಗೆ ಬೇಕಾದಂತೆ ಬಳಸಿಕೊಂಡು, ನಾನು ಕುವೆಂಪು ಅವರಿಗೂ ನಾಡಗೀತೆಗೂ ಅವಮಾನ ಮಾಡಿದ್ದೇನೆಂದು ಬಿಂಬಿಸಿದರು. ಜೊತೆಗೆ ಪೊಲೀಸ್ ಠಾಣೆಯಲ್ಲೂ ಪ್ರಕರಣವನ್ನು ದಾಖಲಿಸಿದರು.

ಪೊಲೀಸರು ವಿಚಾರಣೆಗೆ ಕರೆದಾಗ ನಾನು ಅವರಿಗೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆ. ವಾಸ್ತವವನ್ನು ಮನಗಂಡ ಪೊಲೀಸರು, ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ಕೈಬಿಟ್ಟಿದ್ದರು. ಹಾಗಾಗಿ ಇದು ಪೊಲೀಸ್ ಇಲಾಖೆಯಲ್ಲಿ ಮಾತುಕತೆಯ ಮೂಲಕ ಬಗೆಹರಿದಿದ್ದ ಸಮಸ್ಯೆ. ಆದರೆ ಕೆಲವು ವಿರೋಧಿ ಶಕ್ತಿಗಳು ಈಗ ಪಠ್ಯಪುಸ್ತಕಗಳು ಶಾಲೆಗಳಿಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಹಳೆಯ ವಿಚಾರವನ್ನು ಮತ್ತೆ ಕೆದಕಿ ವಿವಾದವಾಗಿಸಲು ಪ್ರಯತ್ನಿಸುತ್ತಿರುವುದು ವಿಷಾದನೀಯ.

protest

‘ಯಾವುದೇ ಕಾರಣಕ್ಕೂ ನಾನು ನಾಡಗೀತೆಯನ್ನು ಅವಮಾನಿಸುವ ಯೋಚನೆ ಮಾಡಿರಲಿಲ್ಲ. ಮಾಡುವುದೂ ಇಲ್ಲ. ಈ ಪ್ರಕರಣವನ್ನು ಹಲವಾರು ಶಕ್ತಿಗಳು ತಮ್ಮ ತಮ್ಮ ಸ್ವಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ಹಲವು ಸುಳ್ಳು ಸಾಲುಗಳನ್ನು, ಚಿತ್ರಗಳನ್ನು ಹಾಕಿ, ಅಲ್ಲೆಲ್ಲ ನಾನು ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದೇನೆಂದು ಪ್ರಚಾರ ಮಾಡಿಕೊಂಡು ಬರಲಾಗುತ್ತಿದೆ. ಆ ಮೂಲಕ ಪ್ರಕರಣವು ರಾಜಕೀಯ ತಿರುವುಗಳನ್ನು ಪಡೆಯಬೇಕೆಂದು ಕೆಲವರು ಬಯಸುತ್ತಿರುವುದೂ ಸ್ಪಷ್ಟವಾಗುತ್ತಿದೆ. ಇದನ್ನೂ ಓದಿ: ಪಠ್ಯದಲ್ಲಿ ಕುವೆಂಪುಗೆ ಅವಮಾನ – ಯತೀಂದ್ರ ಸಿದ್ದರಾಮಯ್ಯ Vs ರೋಹಿತ್‌ ಚಕ್ರತೀರ್ಥ

ಈ ಎಲ್ಲ ಹಿನ್ನೆಲೆಯಲ್ಲಿ ನಾನು ಹೇಳಬಯಸುವುದೇನೆಂದರೆ, ಕುವೆಂಪು ಅವರ ವ್ಯಕ್ತಿತ್ವಕ್ಕಾಗಲೀ ಬರಹಕ್ಕಾಗಲೀ ಯಾವುದೇ ಅವಮಾನ ಮಾಡುವಂಥ ಯಾದ ಉದ್ದೇಶವೂ ನನಗಿಲ್ಲ. ಕುವೆಂಪು ಅವರ ಬರಹಗಳನ್ನು ಶಾಲಾದಿನಗಳಿಂದಲೂ ಓದಿಕೊಂಡು ಬಂದವನು ನಾನು, ಅವರ ಶ್ರೀರಾಮಾಯಣ ದರ್ಶನಮ್ ಮಹಾಕಾವ್ಯದ ಕೆಲವು ವಿಶಿಷ್ಟ ಪಾತ್ರಗಳ ಬಗ್ಗೆ ಉಪನ್ಯಾಸಗಳನ್ನು ಮಾಡಿದವನು, ಬರಹಗಳನ್ನು ಬರೆದವನು ನಾನು, ವರಕವಿ ದ. ರಾ. ಬೇಂದ್ರೆ ಮತ್ತು ರಾಷ್ಟ್ರಕವಿ ಕುವೆಂಪು – ಈ ಇಬ್ಬರು ಕನ್ನಡ ನೆಲದ ಗಂಗೆ-ಕಾವೇರಿಯರು ಎಂದು ಶೀರ್ಷಿಕೆ ಕೊಟ್ಟು ಅಂಕಣವನ್ನು ಬರೆದವನು ನಾನು, ನನ್ನ ಕನ್ನಡ ನೆಲದಲ್ಲಿ, ನನ್ನ ಕನ್ನಡ ಭಾಷೆಯ ಅತ್ಯುತ್ತಮ ಸಾಹಿತಿಯೊಬ್ಬರ ಬಗ್ಗೆ ಕನ್ನಡ ಪ್ರೀತಿಯುಳ್ಳವನಾದ ನಾನು ಸಮರ್ಥಿಸಿಕೊಂಡು ಮಾತಾಡಬೇಕಾದ ಪರಿಸ್ಥಿತಿ ಇದೆ ಎನ್ನುವುದು ನಿಜಕ್ಕೂ ದುರಂತ. ಕುವೆಂಪು ಅವರ ಮೇಲೆ ಅಪಾರ ಗೌರವವಿದ್ದುದಕ್ಕಾಗಿಯೇ ನಮ್ಮ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅವರ ಅತ್ಯುತ್ತಮ ಶಿಶುಸಾಹಿತ್ಯವಾದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ” ಯನ್ನು ಪಾಠವಾಗಿ ಅಳವಡಿಸಿದೆ. ಅವರ ಸಾಹಿತ್ಯವು 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದಲೇ ಕುವೆಂಪು ಅವರ ಸಾಹಿತ್ಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಕೆಲಸವನ್ನು ಮಾಡಲಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು

kalaburagi school 2

ಈ ವಿಚಾರಗಳನ್ನು ಗಮನಿಸದೆ ಏಕಾಏಕಿಯಾಗಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿ, ತೇಜೋವಧೆ ಮಾಡುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ಬೇಸರ ತರುವ ಸಂಗತಿ ನನ್ನನ್ನು ಕುವೆಂಪು ವಿರೋಧಿ ಎಂಬ ರೀತಿಯಲ್ಲಿ ನಾಡಿನಾದ್ಯಂತ ಬಿಂಬಿಸಲು ನೋಡುತ್ತಿರುವುದು ನನಗಂತೂ ಮನಸ್ಸಿಗೆ ಘಾಸಿಯನ್ನು ಮಾಡಿದೆ. ನನ್ನ ಕನ್ನಡಪ್ರೀತಿ, ಕುವೆಂಪು ಪ್ರೀತಿ ಪ್ರಶ್ನಾತೀತವಾಗಿದೆ, ಯಾರೋ ಬರೆದ ಸಾಲುಗಳನ್ನು, ಅವು ಬೇರೆಯವರದು ಎಂದು ನಾನೇ ಸ್ವತಃ ಉಲ್ಲೇಖಿಸಿದ್ದ ಹೊರತಾಗಿಯೂ, ನನ್ನದೇ ಎಂಬಂತೆ ಬಿಂಬಿಸಿ ನನ್ನ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು ಮಾಡುತ್ತಿರುವವರ ಬಗ್ಗೆ ನನಗೆ ಅಪಾರ ದುಃಖ, ಬೇಸರಗಳಿವೆ.  ರಾಜಕೀಯ ಹಿತಾಸಕ್ತಿಗಳಿಗಾಗಿ ಹೀಗೆ ಓರ್ವ ಕನ್ನಡಿಗನನ್ನು, ಕನ್ನಡದ ಸಾಹಿತಿಯನ್ನು, ಕನ್ನಡಪ್ರೀತಿಯುಳ್ಳ ಭಾರತೀಯನನ್ನು ಹೀಗೆ ದಯವಿಟ್ಟು ಯಾರೂ ತೇಜೋವಧೆ ಮಾಡಿ ಹಣಿಯಲು ನೋಡಬಾರದೆಂದೇ ನನ್ನ ಪ್ರಾರ್ಥನೆ. ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿಗಳಾದ ಸ್ವಾಮಿ ನಿರ್ಮಲಾನಂದರು ಹೇಳಿರುವಂತೆ ಕುವೆಂಪು ಅವರು ಬರೆದಿರುವ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಲಿ. ಅವರನ್ನು ಪತ್ತೆಹಚ್ಚುವ ಕೆಲಸವನ್ನು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸುತ್ತೇನೆ.

TAGGED:kannadaKuvempurohith chakrathirthaಕನ್ನಡಕುವೆಂಪುನಾಡಗೀತೆಬೆಂಗಳೂರುರೋಹಿತ್‌ ಚಕ್ರತೀರ್ಥ
Share This Article
Facebook Whatsapp Whatsapp Telegram

Cinema news

Varanasi movie
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ರಿಲೀಸ್‌ ಡೇಟ್‌ ಔಟ್‌
Cinema Latest South cinema Top Stories
Bengaluru 17th Film Festival
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ
Bengaluru City Cinema Districts Karnataka Latest Sandalwood Top Stories
PRAJWAL DEVARAJ 2
ಸಹೋದರನ ಚಿತ್ರಕ್ಕೆ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್ – ಚಿತ್ರದ ಫಸ್ಟ್ ಲುಕ್ ಲಾಂಚ್
Cinema Latest Sandalwood Top Stories
actor mayur patel car accident
ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR
Cinema Crime Latest Main Post Sandalwood

You Might Also Like

PT Usha VSrinivasan
Latest

IOA ಅಧ್ಯಕ್ಷೆ ಪಿ.ಟಿ ಉಷಾ ಪತಿ ಶ್ರೀನಿವಾಸನ್ ನಿಧನ

Public TV
By Public TV
1 minute ago
tripura security forces demolish ganja plantations worth rs 27 crore in major anti narcotics crackdown
Crime

65 ಎಕರೆಯಲ್ಲಿ ಬೆಳೆದಿದ್ದ 1.80 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಿದ ಭದ್ರತಾ ಪಡೆ

Public TV
By Public TV
17 minutes ago
Bengaluru police crack down on one way violations nearly 11498 cases booked in four days
Bengaluru City

ಬೆಂಗಳೂರಿನಲ್ಲಿ ಒನ್‌ ವೇ ಸಂಚಾರದ ವಿರುದ್ಧ ಆಪರೇಷನ್‌ – ಬರೋಬ್ಬರಿ 23 ಸಾವಿರ ಕೇಸ್ ದಾಖಲು

Public TV
By Public TV
1 hour ago
inspector govindaraj
Bengaluru City

ಚೀಟಿ ವ್ಯವಹಾರದಲ್ಲಿ ವಂಚನೆ; ಕೇಸ್‌ನಿಂದ ಕೈಬಿಡಲು 5 ಲಕ್ಷಕ್ಕೆ ಡೀಲ್ ಮಾಡಿದ್ದ ಇನ್‌ಸ್ಪೆಕ್ಟರ್ ‘ಲೋಕಾ’ ಬಲೆಗೆ

Public TV
By Public TV
2 hours ago
Mohandas Pai Ramalinga Reddy
Districts

ಬಸ್‌ ವ್ಯವಸ್ಥೆ ಸರಿಯಿಲ್ಲ.. ನಿಮ್ಮ ಜೊತೆ ಚರ್ಚಿಸಲು BMTC ಎಂಡಿ ಸಾಕು – ಮೋಹನ್‌ದಾಸ್‌ ಪೈ Vs ರಾಮಲಿಂಗಾರೆಡ್ಡಿ

Public TV
By Public TV
2 hours ago
Pakistan Zindabad Naseer Hussain
Bengaluru City

ಪಾಕಿಸ್ತಾನ ಜಿಂದಾಬಾದ್ ಕೂಗಿದವರಿಗೆ ಇಲ್ಲ ಶಿಕ್ಷೆ – 3 ವರ್ಷಗಳಲ್ಲಿ ಒಂದು ಕೇಸ್‌ಗೂ ಶಿಕ್ಷೆ ಕೊಡಿಸದ ಪೊಲೀಸ್ ಇಲಾಖೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?