ನೆಲಮಂಗಲ: ಎರಡು ದಿನದ ಹಿಂದೆ ಮಾಜಿ ಸೈನಿಕನಿಗೆ ಟೋಲ್ ಸಿಬ್ಬಂದಿ ಅಪಮಾನ ಮಾಡಿದ್ದನ್ನು ಖಂಡಿಸಿ ಮಾಜಿ ಸೈನಿಕ ಸಂಘದವರು ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿಯ ದೇವಿಹಳ್ಳಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್
Advertisement
ನೆಲಮಂಗಲ – ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಕಂಪೆನಿ ಮುಂದೆ ಮಾಜಿ ಸೈನಿಕರು ರಾಷ್ಟ್ರಧ್ವಜ ಹಿಡಿದು ಟೋಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮಾಜಿ ಸೈನಿಕನಿಗೆ ಅಪಮಾನ ಮಾಡಿದ ಟೋಲ್ ಸಿಬ್ಬಂದಿಯನ್ನು ವಜಾ ಮಾಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.
Advertisement
Advertisement
ಟೋಲ್ ತಡೆಯಲು ಮುಂದಾದಾಗ ಪೆÇಲೀಸರು ಮತ್ತು ಮಾಜಿ ಸೈನಿಕರ ನಡುವೆ ವಾಗ್ವಾದ ನಡೆಯಿತು. ರಸ್ತೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನು ವಿರೋಧಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಟೋಲ್ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಡಿವೈಎಸ್ ಪಿ ಜಗದೀಶ್, ಸಿಪಿಐ ಹರೀಶ್ ಹಾಗೂ ಪಿಎಸ್‍ಐ ವಸಂತ್ ಪರಿಸ್ಥಿತಿಯನ್ನು ತಿಳಿಗೊಳಿಸಿ ಮನವಿಯನ್ನು ಸ್ವೀಕರಿಸಿದರು. ಇದನ್ನೂ ಓದಿ:ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!
Advertisement
ಈ ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಅಧ್ಯಕ್ಷ ಡಾ.ಶಿವಣ್ಣ, ಶ್ರೀನಿವಾಸ್, ಜಗನ್ನಾಥ್, ಲಿಂಗಣ್ಣ ಸೇರಿದಂತೆ 30ಕ್ಕೂ ಹೆಚ್ಚು ನಿವೃತ್ತ ಸೈನಿಕರು ಭಾಗಿಯಾಗಿದ್ದರು.