ಕೊಪ್ಪಳ/ಬಳ್ಳಾರಿ: ಉಪಚುನಾವಣೆ ಬಳಿಕ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದು ಶಾಸಕ ಜನಾರ್ದನರೆಡ್ಡಿ (G. Janardhana Reddy) ಹೇಳಿದರು.
ಸಂಡೂರಿನಲ್ಲಿ (Sanduru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯತ್ತಿಲ್ಲ. ಸಿಎಂ ಎ1 ಆರೋಪಿಯಾಗಿದ್ದು ಈ ಪ್ರಕರಣ ಸಿಬಿಐಗೆ ವಹಿಸಬೇಕು. ಸಿಎಂ ಜೈಲಿಗೆ ಹೋಗುವುದು ಗ್ಯಾರಂಟಿಯಾಗಿದೆ. ಉಪಚುನಾವಣೆ ಆದ ಮೇಲೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. 25 ಸಾವಿರ ಕೋಟಿ ರೂ. ಗಣಿಗಾರಿಕೆ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಅದನ್ನು ಬಳಕೆ ಮಾಡಲು ಅವರಿಂದ ಆಗುತ್ತಿಲ್ಲ. ಅಭಿವೃದ್ಧಿ ಬದಲು ಆ ದುಡ್ಡು ಹೊಡೆಯಲು ಸಂಚು ರೂಪಿಸಿದ್ದಾರೆ ಎಂದರು.ಇದನ್ನೂ ಓದಿ: ಡಿಕೆಶಿ ರೀತಿ ನಾನು ಲೂಟಿ ಮಾಡಿದ್ರೆ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡ್ತಿದ್ದೆ – ಹೆಚ್‌ಡಿಕೆ
ಕರ್ನಾಟಕದ ಮುಖ್ಯಮಂತ್ರಿಯಾಗಿ ಬಳ್ಳಾರಿ, ಸಂಡೂರು ಜಿಲ್ಲೆಗೆ ಅವರ ಕೊಡುಗೆ ಏನು ಇಲ್ಲ. ಕುಡಿಯುವ ನೀರು, ಕೆರೆಗಳನ್ನು ನಿರ್ಮಾಣ ಮಾಡಿ, ತುಂಗಭದ್ರಾ ನೀರು ಹರಿಸಿ ಮನೆ ಮನೆಗೆ ನೀರು ಕೊಟ್ಟಿದ್ದೀವಿ. ಬಳ್ಳಾರಿ ನಗರ ಮೊದಲು ಹೇಗಿತ್ತು? ಈಗ ಹೇಗಾಗಿದೆ? ನಾವೆಲ್ಲ ಅಭಿವೃದ್ಧಿ ಮಾಡಿದ್ದೇವೆ. ಸಂಡೂರಿನಲ್ಲಿ ನಾವು ಗೆಲ್ಲದೇ ಇದ್ದರೂ 250 ಕೋಟಿ ರೂ. ರಸ್ತೆಗೆ ನೀಡಿದ್ದೇವೆ. ರೆಡ್ಡಿ ಬಗ್ಗೆ ಮಾತನಾಡದೇ ಇರಲು ಆಗುವುದಿಲ್ಲ, ಅಭಿವೃದ್ಧಿ ಕೆಲಸ ಏನೂ ಮಾಡಿಲ್ಲ ಎನ್ನುವ ಕಾರಣಕ್ಕೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಒಬ್ಬರ ಜೇಬಿಗೆ ಕತ್ತರಿ ಹಾಕಿಲ್ಲ, ಮೋಸ ಮಾಡಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ (CM Siddaramaiah) ಅಹಂಕಾರದ ಮನುಷ್ಯ, ನಾನು 1 ಲಕ್ಷ ಕೋಟಿ ರೂ. ಲೂಟಿ ಮಾಡಿದ್ದೇನೆ ಎಂದು ಆರೋಪ ಮಾಡುತ್ತಾರೆ. ಸಿಎಂ ಹುಚ್ಚರಾಗಿದ್ದಾರೆ ಅವರ ಯುಪಿಎ ಸರ್ಕಾರ ಇದ್ದಾಗ ಏನು ಕಿತ್ತುಕೊಳ್ಳಲು ಆಗಲಿಲ್ಲ. ಈಗ ಏನು ಮಾತಾಡುತ್ತೀರಾ? ಅವರಿಗೆ ನೆಮ್ಮದಿ ಕದಡಿದೆ. ರಾತ್ರಿ ಸರಿಯಾಗಿ ನಿದ್ದೆಯೂ ಮಾಡಲ್ಲ. ಯಾವಾಗ ಅರೆಸ್ಟ್ ಆಗುತ್ತೀನೋ ಎನ್ನುವ ಭೀತಿಯಲ್ಲಿ ಬದುಕುತ್ತಿದ್ದಾರೆ. ನಾನು ಬಳ್ಳಾರಿಯಲ್ಲಿ ನೆಮ್ಮದಿಯಿಂದ ನನ್ನ ಜನಗಳ ಜೊತೆ ಇದ್ದೇನೆ. ಅಖಂಡ ಬಳ್ಳಾರಿಯಲ್ಲಿ ನನಗೆ ಜನರ ಬೆಂಬಲ ಇದೆ ಎಂದರು.ಇದನ್ನೂ ಓದಿ: Citadel Honey Bunny: ವರುಣ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ ಸಮಂತಾ- ದಂಗಾದ ಫ್ಯಾನ್ಸ್