ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್

Public TV
2 Min Read
Zameer Ahmed

ದಾವಣಗೆರೆ: ಮೈಸೂರು ಸ್ಯಾಂಡಲ್ ಸೋಪ್‌ಗೆ (Mysore Sandal Soap) ನಟಿ ತಮನ್ನಾ ಭಾಟಿಯಾ (Tamannaah Bhatia) ರಾಯಭಾರಿಯಾಗಿ ಆಯ್ಕೆ ಸರಿಯಿಲ್ಲ. ನಮ್ಮ ರಾಜ್ಯದವರನ್ನೇ ಮಾಡಬೇಕು ಎಂದು ಸಾಕಷ್ಟು ಜನರ ಅಭಿಪ್ರಾಯ. ನನ್ನ ಅಭಿಪ್ರಾಯ ಕೂಡ ಅದೇ ಇದೆ ಎಂದು ದಾವಣಗೆರೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed Khan) ಬೇಸರ ವ್ಯಕ್ತಪಡಿಸಿದರು.

ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಲು ನಮ್ಮ ರಾಜ್ಯದಲ್ಲೇ ಬಹಳಷ್ಟು ಜನ ನಟಿಯರು ಇದ್ದರು, ಅವರಲ್ಲೇ ಒಬ್ಬರನ್ನು ರಾಯಭಾರಿಯಾಗಿ ಮಾಡಬಹುದಿತ್ತು ಎಂದರು. ಅಲ್ಲದೇ ತಮನ್ನಾರನ್ನು ಆಯ್ಕೆ ಮಾಡಿದ್ದು ಜಮೀರ್ ಎಂಬ ಬಿವೈ ವಿಜಯೇಂದ್ರ ಆರೋಪಕ್ಕೆ, ವಿಜಯೇಂದ್ರ ನಮ್ಮ ಜೊತೆ ಬಂದಿದ್ರಾ ಆಯ್ಕೆ ಮಾಡೋಕೆ ಎಂದು ಗರಂ ಆದರು. ಇದನ್ನೂ ಓದಿ: ರಾಜ್ಯದ ಶಕ್ತಿಸೌಧ ಇನ್ಮುಂದೆ ಜನರ ವೀಕ್ಷಣೆಗೆ ಮುಕ್ತ – ವಿಧಾನಸೌಧ ಗೈಡೆಡ್ ಟೂರ್‌ಗೆ ಇಂದು ಚಾಲನೆ

mysore sandal soap tamannaah bhatia

ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದರು. ಡಿಸೆಂಬರ್‌ನಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಬಿಜೆಪಿಗರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ಹೈಕಮಾಂಡ್‌ನ ಶಿಸ್ತಿನ ಸಿಪಾಯಿಗಳು. ನಮ್ಮ ಹೈಕಮಾಂಡ್ ಪಕ್ಷದವರು ನಿರ್ಧಾರ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗುತ್ತಾರೆ. ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು. ಇದನ್ನೂ ಓದಿ: ಚಿಕ್ಕಮಗಳೂರು | ಭಾರೀ ಮಳೆಗೆ ಆಟೋ ಮೇಲೆ ಮುರಿದು ಬಿದ್ದ ಮರ – ಚಾಲಕ ದುರ್ಮರಣ

ಡಿಕೆಶಿ, ವಿಜಯೇಂದ್ರ ದೆಹಲಿಯಲ್ಲಿ ಮೀಟಿಂಗ್ ಮಾಡಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ಬಗ್ಗೆ ವಿಜಯೇಂದ್ರರವರಿಗೆ ಏಕೆ ಬೇಕು. ಅವರ ಪಕ್ಷದಲ್ಲಿರುವ ಸಮಸ್ಯೆಯನ್ನು ಬಗೆಹರಿಸಲಿ. ಯತ್ನಾಳ್‌ರನ್ನು ಮೊದಲು ಸಮಾಧಾನಪಡಿಸಿ ಸುಮ್ಮನಾಗಿಸಿ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ: ಯುಟಿ ಖಾದರ್

ಕೋವಿಡ್ ಮುನ್ನೆಚ್ಚರಿಕೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏರ್‌ಪೋರ್ಟ್‌ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದೇವೆ. ಇದರಿಂದ ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲ, ಜಾಗೃತವಾಗಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಯುವಕ ನಾಪತ್ತೆ

Share This Article