ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಷವರ್ಮಾ ಹೆಚ್ಚಿನವರು ಸವಿದಿರುತ್ತಾರೆ. ಮಕ್ಕಳು ಮಾತ್ರವಲ್ಲದೇ ಯುವಕರಿಗೂ ಷವರ್ಮಾ ಅಚ್ಚುಮೆಚ್ಚು. ಆದರೆ ಈ ಬಾರಿ ಷವರ್ಮಾದ ರುಚಿಯನ್ನು ನೀವು ಮನೆಯಲ್ಲೇ ಟ್ರೈ ಮಾಡಿ ನೋಡಿ. ನಾವಿಂದು ಹೇಳಿಕೊಡುತ್ತಿರೋ ಚಿಕನ್ ಷವರ್ಮಾ ಸಲಾಡ್ ರೆಸಿಪಿ ಖಂಡಿತಾ ರೆಸ್ಟೊರೆಂಟ್‌ನ ಷವರ್ಮಾವನ್ನು ನೆನಪಿಸುತ್ತದೆ.
Advertisement
ಬೇಕಾಗುವ ಪದಾರ್ಥಗಳು:
ಮ್ಯಾರಿನೇಷನ್‌ಗೆ:
ಮೂಳೆ, ಚರ್ಮರಹಿತ ಕೋಳಿ ತೊಡೆ – 1 ಕೆಜಿ
ಎಣ್ಣೆ – ಅರ್ಧ ಕಪ್
ಕೊಚ್ಚಿದ ಬೆಳ್ಳುಳ್ಳಿ – 3
ನಿಂಬೆ ಹಣ್ಣು – 2
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಉಪ್ಪು – 2 ಟೀಸ್ಪೂನ್
ಕರಿಮೆಣಸಿನಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಸಲಾಡ್ ತಯಾರಿಸಲು:
ಅರ್ಧಕ್ಕೆ ಕತ್ತರಿಸಿದ ಚೆರಿ ಟೊಮೆಟೊ – ಒಂದೂವರೆ ಕಪ್
ಹೆಚ್ಚಿದ ಸೌತೆಕಾಯಿ – 1
ಕತ್ತರಿಸಿದ ಈರುಳ್ಳಿ – 1
ಹೆಚ್ಚಿದ ಎಲೆಕೋಸು – ಅರ್ಧ
ಸಣ್ಣಗೆ ಹೆಚ್ಚಿ ಪುದೀನಾ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಮೆಯೋನೀಸ್/ಡ್ರೆಸ್ಸಿಂಗ್ – ಅರ್ಧ ಕಪ್ ಇದನ್ನೂ ಓದಿ: ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಚಿಕನ್ ಅನ್ನು ಹೊರತುಪಡಿಸಿ ಮ್ಯಾರಿನೇಷನ್‌ಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಒಂದು ಝಿಪ್ಪರ್ ಪ್ಲಾಸ್ಟಿಕ್ ಚೀಲದಲ್ಲಿ ಚಿಕನ್ ಅನ್ನು ಹಾಕಿ ಅದಕ್ಕೆ ಮ್ಯಾರಿನೇಷನ್ ಮಿಶ್ರಣವನ್ನು ಸುರಿದು ಚೆನ್ನಾಗಿ ಉಜ್ಜಿಕೊಳ್ಳಿ. (ನಿಮ್ಮ ಬಳಿ ಝಿಪ್ಪರ್ ಬ್ಯಾಗ್ ಇಲ್ಲವೆಂದರೆ ಅದೇ ಪಾತ್ರೆಯಲ್ಲಿ ಚಿಕನ್ ಹಾಕಿ ಮ್ಯಾರಿನೇಷನ್ ಮಾಡಬಹುದು)
* ಬಳಿಕ ಚೀಲದಿಂದ ಸಂಪೂರ್ಣ ಗಾಳಿಯನ್ನು ಹೊರಹಾಕಿ ಝಿಪ್ಪರ್ ಅನ್ನು ಮುಚ್ಚಿ, 4 ಗಂಟೆಗಳ ಕಾಲ ಅದನ್ನು ಫ್ರಿಜ್‌ನಲ್ಲಿಡಿ. (ಇಡೀ ರಾತ್ರಿ ಬಿಡಬಹುದು)
* ಈಗ ಓವನ್ ಅನ್ನು 425 ಡಿಗ್ರಿ ಪ್ಯಾರಾಹೀಟ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಬೇಕಿಂಗ್ ಶೀಟ್‌ಗೆ ಫಾಯಿಲ್ ಅನ್ನು ಜೋಡಿಸಿ, ಅದರ ಮೇಲೆ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಹಾಕಿಕೊಳ್ಳಿ.
* ಈಗ ಚಿಕನ್ ಅನ್ನು ಸುಮಾರು 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
* ಈಗ ಸಲಾಡ್ ಬೇಸ್ ಅಥವಾ ತಟ್ಟೆಯಲ್ಲಿ ಚೆರಿ ಟೊಮೆಟೊ, ಸೌತೆಕಾಯಿ, ಈರುಳ್ಳಿ, ಎಲೆಕೋಸು ಹಾಕಿ, ಅದರ ಮೇಲೆ ಚಿಕನ್ ತುಂಡುಗಳನ್ನು ಇರಿಸಿ.
* ಮೆಯೋನೀಸ್ ಅಥವಾ ನಿಮ್ಮಿಷ್ಟದ ಡ್ರೆಸ್ಸಿಂಗ್ ಅನ್ನು ಅದರ ಮೇಲೆ ಸುರಿಯಿರಿ.
* ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಷವರ್ಮಾ ಸಲಾಡ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ