ಲಕ್ನೋ: ಜನರನ್ನು ಹೆದರಿಸಲು ಮತ್ತು ಕೊಲ್ಲಲು ಈ ಮುನ್ನ ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ದೇಶವನ್ನು ರಕ್ಷಿಸಲು ಶೆಲ್ಗಳು ಮತ್ತು ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಹಿಂದೆ, ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು. ಅದನ್ನು ಜನರನ್ನು ಹೆದರಿಸಲು ಅಥವಾ ಕೊಲ್ಲಲು ಬಳಸಲಾಗುತ್ತಿತ್ತು. ಇಂದು ಇಲ್ಲಿ ಶೆಲ್ಗಳು ಮತ್ತು ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇವುಗಳನ್ನು ಭಾರತವನ್ನು ರಕ್ಷಿಸಲು ಬಳಸಲಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬದಲಾವಣೆಯಾಗಿದೆ. ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ನಾನು ಯುಪಿಯಲ್ಲಿ ಸುಮಾರು 150 (ಅಸೆಂಬ್ಲಿ) ಸ್ಥಾನಗಳಿಗೆ ಹೋಗಿದ್ದೇನೆ ಮತ್ತು ಪ್ರತಿ ಸ್ಥಳದಲ್ಲೂ ಚುನಾವಣಾ ಮೂಡ್ ನೋಡಿದ್ದೇನೆ. ಮೊದಲ ಐದು ಹಂತದ ಚುನಾವಣೆಗಳಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ನಿರ್ನಾಮವಾಗಲಿದ್ದು, ಬಿಜೆಪಿ ಸರ್ಕಾರ ರಚನೆಗೆ ಜನ ಬಯಸುತ್ತಿದ್ದಾರೆ. ಈಗ, 300 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ನೀವು ಮತ ಹಾಕಬೇಕು ಎಂದರು. ಇದನ್ನು ಓದಿ: ಪುಟಿನ್ ಜೊತೆ 2ನೇ ಬಾರಿ ಮೋದಿ ಮಾತುಕತೆ
Advertisement
Advertisement
ಉತ್ತರಪ್ರದೇಶದಲ್ಲಿ ಇನ್ನೂ ಒಂದಿಬ್ಬರು ‘ಬಾಹುಬಲಿಗಳು’ ಉಳಿದಿದ್ದಾರೆ. ಅವರನ್ನು ಮಾರ್ಚ್ 10ರ ನಂತರ ಜೈಲಿಗೆ ಕಳುಹಿಸಲಾಗುತ್ತದೆ. ಇನ್ನೂ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವವರೆಗೂ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಕೈಗಾರಿಕಾ ಹೂಡಿಕೆಗಳು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಇದನ್ನು ಓದಿ: ಕಾರು ಡ್ರೈವಿಂಗ್ ಮಾಡ್ಕೊಂಡೆ ಆಸ್ಪತ್ರೆಗೆ – ಹೆಣ್ಣು ಮಗುವಿನ ತಾಯಿಯಾದ ದಿಶಾ ಮದನ್
ಇದೇ ವೇಳೆ ರಾಜ್ಯದಲ್ಲಿ ಮುಂಬರಲಿರುವ ರಕ್ಷಣಾ ಕೈಗಾರಿಕಾ ಕಾರಿಡಾರ್ ಕುರಿತಂತೆ ಮಾತನಾಡಿದರು. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮಾಡಿದ ವಿವಿಧ ಸಾಧನೆಗಳನ್ನು ತಿಳಿಸಿದರು. ಚಂದೌಲಿ ಏಳನೇ ಹಂತದಲ್ಲಿ ಮಾರ್ಚ್ 7 ರಂದು ಚುನಾವಣೆ ನಡೆಯಲಿದೆ.