ತಾಯಿಯಂದಿರಿಗೆ ಬೆಳಗ್ಗೆಯಾದರೆ ಏನು ತಿಂಡಿ ಮಾಡಬೇಕು ಎಂಬ ಯೋಚನೆ ಬಂದೆ ಬರುತ್ತೆ. ಅದಕ್ಕೆ ಸರಳ ಮತ್ತು ಆರೋಗ್ಯಕರವಾದ ಮಸಾಲ ಪಡ್ಡು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ.
Advertisement
ಬೇಕಾಗಿರುವ ಸಾಮಾಗ್ರಿಗಳು:
* ಗೋಧಿ ನುಚ್ಚು – 250 ಗ್ರಾಂ
* ಕತ್ತರಿಸಿದ ಈರುಳ್ಳಿ – 1 ಕಪ್
* ಕತ್ತರಿಸಿದ ಸಬ್ಸಿಗೆ ಸೊಪ್ಪು – 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
Advertisement
* ಹಸಿ ಮೆಣಸಿನಕಾಯಿ – 4
* ನೆನೆಸಿಟ್ಟ ಉದ್ದಿನ ಬೆಳೆ – 1 ಕಪ್
* ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು – 1/2 ಕಪ್
* ಎಣ್ಣೆ
Advertisement
Advertisement
ಮಾಡುವ ವಿಧಾನ:
* ಗೋಧಿ ನುಚ್ಚನ್ನು ನೀರಿಗೆ ಹಾಕಿ 2 ರಿಂದ 4 ಬಾರಿ ಚೆನ್ನಾಗಿ ತೋಳೆದುಕೊಳ್ಳಬೇಕು. ನಂತರ ಅದಕ್ಕೆ ನೀರು ಹಾಕಿ 20 ನಿಮಿಷ ನೆನೆಸಬೇಕು.
* ನೆನೆಸಿಟ್ಟ ಉದ್ದಿನ ಬೆಳೆಯನ್ನು ರುಬ್ಬಿಕೊಳ್ಳಿ. ಇದಕ್ಕೆ ಗೋಧಿ ನುಚ್ಚಿನ ನೀರನ್ನು ಸಂಪೂರ್ಣವಾಗಿ ತೆಗೆದು ಅದನ್ನು ಉದ್ದಿನ ಹಿಟ್ಟಿಗೆ ಸೇರಿಸಿ ಅದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ. ತುಂಬಾ ಗಟ್ಟಿಯಿದೆ ಎಂದು ಅನಿಸಿದರೆ ಅದಕ್ಕೆ ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಿ. ಈ ಮಿಶ್ರಣವನ್ನು 5 ರಿಂದ 8 ಗಂಟೆಗಳ ಕಾಲ ಬಿಡಿ.
* ನಂತರ ಈ ಮಿಶ್ರಣಕ್ಕೆ ಕೊತ್ತಂಬರಿ, ಕರಿಬೇವು, ಸಬ್ಸಿಗೆ ಸೊಪ್ಪು ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಪಡ್ಡು ಹೆಂಚನ್ನು 10 ನಿಮಿಷ ಕಾಯಿಸಿ ಅದಕ್ಕೆ ಎಣ್ಣೆಯನ್ನು ಸವರಿ. ಹೆಂಚು ಕಾದ ನಂತರ ಅದಕ್ಕೆ ಪಡ್ಡು ಮಿಶ್ರಣವನ್ನು ಹಾಕಿ, ಅದರ ಮೇಲೆ ಮುಚ್ಚಳವನ್ನು ಮುಚ್ಚಿಡಿ.
* ಒಂದು ಕಡೆ ಬೆದ್ದ ನಂತರ ಮತ್ತೊಂದು ಕಡೆ ಪಡ್ಡನ್ನು ಬೇಯಿಸಿ. ಎರಡು ಕಡೆ ಗರಿಗರಿಯಾಗುವವರೆಗೂ ಬೇಯಿಸಿಕೊಳ್ಳಿ.