ಅತಿ ಹೆಚ್ಚು ಆರೋಗ್ಯಕರ ಅಂಶಗಳುಳ್ಳ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಯಾವಾಗಲೂ ಹಸಿಯಾಗಿ ತಿನ್ನುವ ಬದಲು ಇದನ್ನು ಒಂದಿಲ್ಲೊಂದು ಅಡುಗೆಗಳಲ್ಲಿ ಬಳಸಿದರೆ ಒಳ್ಳೆಯದಲ್ವಾ? ನಾವಿಂದು ಫಟಾಫಟ್ ಅಂತ ಮಾಡಬಹುದಾದ ನೆಲ್ಲಿಕಾಯಿಯ ಉಪ್ಪಿನಕಾಯಿ (Gooseberry Pickle) ರೆಸಿಪಿ ಹೇಳಿಕೊಡುತ್ತೇವೆ. ಇದನ್ನು ಆಗಾಗ ಅಡುಗೆಗಳಲ್ಲಿ ಬಳಸುವುದಕ್ಕಿಂತಲೂ ನಿಯಮಿತವಾಗಿ ಇದನ್ನು ಉಪ್ಪಿನಕಾಯಿಯಾಗಿ ಸವಿಯುವುದು ಸುಲಭದ ಕೆಲಸ ಅಲ್ವಾ? ಇದನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ನೆಲ್ಲಿಕಾಯಿ – 400 ಗ್ರಾಂ
ಒಣ ಕೆಂಪು ಮೆಣಸಿನಕಾಯಿ – 20
ಸಾಸಿವೆ – 3 ಟೀಸ್ಪೂನ್
ಜೀರಿಗೆ – 2 ಟೀಸ್ಪೂನ್
ಮೆಂತ್ಯ – ಅರ್ಧ ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಸಾಸಿವೆ ಎಣ್ಣೆ – 4 ಟೀಸ್ಪೂನ್
ಉಪ್ಪು – 4-5 ಟೀಸ್ಪೂನ್ ಇದನ್ನೂ ಓದಿ: ಬಾಳೆ ಹೂವಿನ ಪಲ್ಯ – ತುಂಬಾ ರುಚಿಕರ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ನೆಲ್ಲಿಕಾಯಿಗಳನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಗೆ ಹಾಕಿ.
* ನೆಲ್ಲಿಕಾಯಿಗಳು ಮುಳುಗುವಷ್ಟು ನೀರನ್ನು ಹಾಕಿ, ಉಪ್ಪು ಸೇರಿಸಿ, ಮಧ್ಯಮ ಉರಿಯಲ್ಲಿ 6-7 ನಿಮಿಷಗಳ ಕಾಲ ಕುದಿಸಿ.
* ಈಗ ಉರಿಯನ್ನು ಆಫ್ ಮಾಡಿ, ನೆಲ್ಲಿಕಾಯಿಗಳನ್ನು ನೀರಿನಿಂದ ತೆಗೆದು, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಬೀಜಗಳನ್ನು ಬೇರ್ಪಡಿಸಿ. (ಬೀಜವನ್ನು ಉಪ್ಪಿನಕಾಯಿಯಲ್ಲಿ ಬಳಸುವುದಿಲ್ಲ)
* ಈಗ ಒಣ ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಮೆಂತ್ಯ ಹಾಗೂ ಅರಿಶಿನ ಪುಡಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
* ಈಗ ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಬಳಿಕ ಪುಡಿ ಮಾಡಿದ ಮಸಾಲೆಯನ್ನು ಸೇರಿಸಿ 1-2 ನಿಮಿಷ ಹುರಿಯಿರಿ.
* ಬೇಯಿಸಿದ ನೆಲ್ಲಿಕಾಯಿಯ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಾಗಿದ್ದು, ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಶೇಖರಿಸಿ. ನಿಮಗೆ ಬೇಕೆನಿಸಿದಾಗಿ ಬಿಸಿಬಿಸಿಯಾದ ಅನ್ನದೊಂದಿಗೆ ಇದನ್ನು ಸವಿಯಿರಿ. ಇದನ್ನೂ ಓದಿ: ಮಂಡಕ್ಕಿ ಒಗ್ಗರಣೆ ಒಮ್ಮೆ ಟ್ರೈ ಮಾಡಿ ನೋಡಿ