ಚಿಕ್ಕಬಳ್ಳಾಪುರ: ಬಿಜೆಪಿಯವರು (BJP) ಪ್ರತಿಷ್ಠಾಪನೆ ಮಾಡಿದ್ದ ಗಣೇಶನ (Ganesha) ವಿಸರ್ಜನೆ ವೇಳೆ ಮೆರವಣಿಗೆ ಕಾಂಗ್ರೆಸ್‌ನವರ (Congress) ಗಣೇಶ ಪ್ರತಿಷ್ಠಾಪನಾ ಸ್ಥಳಕ್ಕೆ ಬಂದಾಗ ಪರಸ್ಪರ ವಾಗ್ವಾದ ನಡೆದು ಗುಂಪು ಘರ್ಷಣೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆರೇಸಂದ್ರ (Peresandra) ಕ್ರಾಸ್ ಬಳಿಯ ಕಮ್ಮಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಕಮ್ಮಗಾನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ನವರು ಹಾಗೂ ಬಿಜೆಪಿಯವರು ಪ್ರತ್ಯೇಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದರು. ನಿನ್ನೆ ತಡರಾತ್ರಿ ಬಿಜೆಪಿಯವರು ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಿದ್ದು, ಈ ವೇಳೆ ಕಾಂಗ್ರೆಸ್‌ನವರು ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಬಳಿ ಬಂದಾಗ ಎರಡು ಕಡೆಯವರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆಸಿ ವಾಗ್ವಾದ ಜೋರಾಗಿ ಹೊಡೆದಾಟ ಬಡಿದಾಟ ಮಾಡಿಕೊಂಡು, ದೊಡ್ಡ ಮಟ್ಟದ ಗುಂಪು ಘರ್ಷಣೆಯಾಗಿದೆ. ಘಟನೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿವೆ.
Advertisement
Advertisement
ಸ್ಥಳಕ್ಕೆ ಪೇರೇಸಂದ್ರ ಪೊಲೀಸರು ಆಗಮಿಸಿ ಗಲಾಟೆ ತಹಬದಿಗೆ ತರಲು ಪ್ರಯತ್ನಿಸಿದರೂ ಮಾತು ಕೇಳದಿದ್ದಾಗ ಲಾಠಿ ರುಚಿ ತೋರಿಸಿ ಎರಡು ಕಡೆಯವರನ್ನು ಚದುರಿಸಿ ಗಲಾಟೆ ಕಂಟ್ರೋಲ್ ಮಾಡಿದ್ದಾರೆ. ಈ ಸಂಬಂಧ ಎರಡು ಕಡೆಯವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತಡರಾತ್ರಿಯೇ ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ಬಗ್ಗೆ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರು ಪ್ರತ್ಯೇಕ ದೂರು ನೀಡಿದ್ದಾರೆ. ಇದನ್ನೂ ಓದಿ: ಗಣಪತಿ ವಿಸರ್ಜನೆಯಲ್ಲಿ ಪೊಲೀಸರು ಬ್ಯುಸಿ – 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ
Advertisement
ಬಿಜೆಪಿಯವರು ತಡರಾತ್ರಿಯೇ ಗಣೇಶನ ವಿಸರ್ಜನೆ ಮಾಡಿದ್ದಾರೆ. ಕಾಂಗ್ರೆಸ್‌ನವರ ಗಣೇಶ ಹಾಗೇ ಇದ್ದು ಪೂಜೆ ಮಾಡೋದನ್ನೇ ನಿಲ್ಲಿಸಲಾಗಿದೆ. ಗಲಾಟೆ ನಂತರ ಎಲ್ಲರೂ ನಾಪತ್ತೆಯಾಗಿದ್ದು ಗಣೇಶನ ಬಳಿ ಯಾರೂ ಬಂದಿಲ್ಲ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಹಾಲಿ, ಮಾಜಿ ಶಾಸಕರ ಬೆಂಬಲಿಗರ ಪ್ರತಿಷ್ಠೆಯಿಂದ ಗಲಾಟೆಗೆ ಕಾರಣವಾಗಿದ್ದು, ಗ್ರಾಮದಲ್ಲಿನ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಉಂಟಾಗಿರೋ ವೈಮನಸ್ಸು ಹಳೆ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಶಾಕ್ – ತ.ನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ
Web Stories