ಕೊಪ್ಪಳ: ಜಿಲ್ಲೆಯ ಮುನಿರಾಬಾದ್ (Munirabad) ಬಳಿಯ ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್ ಅಳವಡಿಕೆ ಕೆಲಸ ಭರದಿಂದ ಸಾಗಿದ್ದು, 15ಕ್ಕೂ ಹೆಚ್ಚು ಗೇಟ್‌ಗಳ ಅಳವಡಿಕೆ ಕಾರ್ಯ ಸಂಪೂರ್ಣ ಮುಗಿದಿದೆ.
ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಜಿಲ್ಲೆಗಳ ಜೀವನಾಡಿಯಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳ 14 ಲಕ್ಷ ಎಕರೆ ಪ್ರದೇಶಕ್ಕೆ ತುಂಗಭದ್ರಾ ಜಲಾಶಯ ನೀರುಣಿಸುತ್ತಿದೆ. ಸದ್ಯ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಅಳವಡಿಸುವ ಕೆಲಸ ನಡೆಯುತ್ತಿದ್ದು, 3 ಕ್ರಸ್ಟ್ ಗೇಟ್‌ಗಳ ಟ್ರಯಲ್ ಅಂಡ್ ರನ್ ಕೂಡ ಸಕ್ಸಸ್ ಆಗಿದೆ. ಉಳಿದ 12 ಗೇಟ್‌ಗಳ ಟ್ರೈಯಲ್ ಮಾಡಿ, ಏರಿಸಿ, ಇಳಿಸೋ ಕಾರ್ಯ ಬಾಕಿ ಉಳಿದಿದೆ. 18ನೇ ಗೇಟ್ ಟ್ರಯಲ್ ಅಂಡ್ ರನ್ ಮತ್ತು ಅಳವಡಿಕೆ ಯಶಸ್ವಿಯಾಗಿದೆ.ಇದನ್ನೂ ಓದಿ: LPG ಕೊರತೆಯಿಂದ ಮುಂಬೈನ ಶೇ.20ರಷ್ಟು ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್
25 ಹಳೆಯ ಕ್ರಸ್ಟ್ ಗೇಟ್‌ಗಳ ತೆರವು ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಇನ್ನೂ 2 ಕ್ರಸ್ಟ್ ಗೇಟ್‌ಗಳ ತೆರವು ಕಾರ್ಯಾಚರಣೆ ಜೋರಾಗಿ ನಡೆದಿದೆ. ಈಗಾಗಲೇ 25 ಹೊಸ ಕ್ರಸ್ಟ್‌ಗೇಟ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು, ಮತ್ತೆ ಎರಡು ಗೇಟ್‌ಗಳು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೊಸಪೇಟೆ ಮತ್ತು ಗದಗನಲ್ಲಿ ತಲಾ ಒಂದೊಂದು ಗೇಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 3 ಹೊಸ ಗೇಟ್‌ಗಳ ಎಲೆಕ್ಟ್ರಿಕ್ ಕೆಲಸವೂ ಪೂರ್ಣಗೊಂಡಿದೆ.

