Connect with us

Cinema

ಪ್ರಿಯಾಂಕಾ, ಕೊಹ್ಲಿಯ ಒಂದು ಇನ್‍ಸ್ಟಾ ಪೋಸ್ಟ್‌ಗೆ ಸಿಗುತ್ತೆ ಕೋಟಿ ಕೋಟಿ ರೂಪಾಯಿ

Published

on

ನವದೆಹಲಿ: ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಿಂದ ಹಣವನ್ನು ಸಂಪಾದಿಸುತ್ತಾರೆ ಎನ್ನುವ ವಿಚಾರ ನೀವು ಓದಿರಬಹುದು. ಆದರೆ ಈಗ ಈ ಸೆಲೆಬ್ರಿಟಿಗಳು ಒಂದು ಇನ್‍ಸ್ಟಾಗ್ರಾಮ್ ಪೋಸ್ಟ್ ನಿಂದ ಎಷ್ಟು ಹಣವನ್ನು ಸಂಪಾದಿಸಬಹುದು ಎನ್ನುವ ವಿಚಾರವನ್ನು ಇಂಗ್ಲೆಂಡಿನ ಸಂಸ್ಥೆಯೊಂದು ಪ್ರಕಟಿಸಿದೆ.

ಇನ್ ಸ್ಟಾಗ್ರಾಮ್ ಟೂಲ್ ಹೂಪರ್ ‘ಇನ್ ಸ್ಟಾಗ್ರಾಮ್ ಶ್ರೀಮಂತರ ಪಟ್ಟಿ 2019’ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.

ಅಮೆರಿಕದ ಗಾಯಕ ನಿಕ್ ಜೋನ್ಸ್ ಅವರನ್ನು ಮದುವೆಯಾಗಿರುವ ಪ್ರಿಯಾಂಕಾ ಈ ಪಟ್ಟಿಯಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾವನ್ನು ಪಡೆದಿದ್ದರೆ ವಿರಾಟ್ ಕೊಹ್ಲಿ ಏಷ್ಯಾದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ಪ್ರಿಯಾಂಕಾ ಅವರ ಇನ್ ಸ್ಟಾಗ್ರಾಮ್ ಖಾತೆಯನ್ನು ಒಟ್ಟು 4.30 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದು ಒಂದು ಪೋಸ್ಟ್ ನಿಂದ 2.71 ಲಕ್ಷ ಡಾಲರ್(ಅಂದಾಜು 1.87 ಕೋಟಿ ರೂ.) ಪಡೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಖಾತೆಯನ್ನು 3.61 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದು 1.96 ಲಕ್ಷ ಡಾಲರ್(ಅಂದಾಜು 1.35 ಕೋಟಿ ರೂ.) ಪಡೆಯುತ್ತಿದ್ದಾರೆ. ಟಾಪ್ 100 ಪಟ್ಟಿಯಲ್ಲಿ ಪ್ರಿಯಾಂಕಾಗೆ 19ನೇ ಸ್ಥಾನ ಸಿಕ್ಕಿದರೆ, ಕೊಹ್ಲಿಗೆ 23ನೇ ಸ್ಥಾನ ಸಿಕ್ಕಿದೆ.

ಟಾಪ್ 100 ಪಟ್ಟಿಯಲ್ಲಿ ಅಮೆರಿಕದ 21 ವರ್ಷ ವಯಸ್ಸಿನ ಉದ್ಯಮಿ, ಮಾಡೆಲ್ ಕೈಲಿ ಜೆನ್ನರ್ ಮೊದಲ ಸ್ಥಾನ ಪಡೆದಿದ್ದಾರೆ. ಕೈಲಿ ಜೆನ್ನರ್ ಅವರನ್ನು 13,92,26,67 ಮಂದಿ ಫಾಲೋ ಮಾಡುತ್ತಿದ್ದು ಒಂದು ಪೋಸ್ಟ್‌ಗೆ  12.66 ಲಕ್ಷ ಡಾಲರ್(ಅಂದಾಜು 8.74 ಕೋಟಿ ರೂ.) ಪಡೆಯುತ್ತಿದ್ದಾರೆ.

ಪೋರ್ಚುಗಲ್ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ಟಾಪ್ 100 ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು ಕ್ರೀಡಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 17.28 ಕೋಟಿ ಫಾಲೋವರ್ಸ್ ಹೊಂದಿರುವ ರೊನಾಲ್ಡೊ ಒಂದು ಪೋಸ್ಟಿಗೆ 9.75 ಲಕ್ಷ ಡಾಲರ್(ಅಂದಾಜು 6.73 ಕೋಟಿ ರೂ.) ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *