ವಾಷಿಂಗ್ಟನ್: ಮೆಟಾ ಮಾಲೀಕತ್ವದ ಫೋಟೋ ಹಂಚಿಕೆ ಪ್ಲಾಟ್‍ಫಾರ್ಮ್ ಇನ್‍ಸ್ಟಾಗ್ರಾಮ್‍ನ ಸ್ವತಂತ್ರ ಅಪ್ಲಿಕೇಶನ್ ಐಜಿಟಿವಿ(ಇನ್‍ಸ್ಟಾಗ್ರಾಮ್ ಟಿವಿ)ಯನ್ನು ಮುಚ್ಚಲಿದೆ ಎಂದು ತಿಳಿಸಿದೆ.
ಇನ್‍ಸ್ಟಾಗ್ರಾಮ್‍ನಲ್ಲಿ ದಿರ್ಘಾವಧಿಯ ವೀಡಿಯೋ ಹಂಚಿಕೊಳ್ಳಲು ಐಜಿಟಿವಿಯನ್ನು ಬಳಸಲಾಗುತ್ತಿತ್ತು. ಆದರೆ ಇದೀಗ ಇನ್‍ಸ್ಟಾಗ್ರಾಮ್ ಐಜಿಟಿವಿಯನ್ನು ಮುಚ್ಚಿ, ಬದಲಿಗೆ ಎಲ್ಲಾ ವೀಡಿಯೋಗಳನ್ನು ಮುಖ್ಯ ಇನ್‍ಸ್ಟಾಗ್ರಾಮ್‍ನಲ್ಲಿಯೇ ಇರಿಸಿಕೊಳ್ಳಲು ಯೋಜಿಸುತ್ತಿದೆ.
Advertisement
ಐಜಿಟಿವಿ ಅಪ್ಲಿಕೇಶನ್‍ನ ಪ್ರತ್ಯೇಕ ಬಟನ್ ಅನ್ನು 2018ರಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ನೀಡಲಾಗಿತ್ತು. ಇದನ್ನು ಯೂಟ್ಯೂಬ್‍ಗೆ ಪ್ರತಿಸ್ಪರ್ಧೆ ನೀಡುವ ಉದ್ದೇಶದಿಂದ ಇನ್‍ಸ್ಟಾಗ್ರಾಮ್‍ನಲ್ಲಿ ಅಳವಡಿಸಲಾಗಿತ್ತು. ಆದರೆ ಐಜಿಟಿವಿ ಬಳಕೆದಾರರು ಅತ್ಯಂತ ಕಡಿಮೆಯಿದ್ದ ಕಾರಣ ಇನ್‍ಸ್ಟಾಗ್ರಾಮ್ ಐಜಿಟಿವಿಯ ಬಟನ್ ಅನ್ನು 2020ರಲ್ಲಿಯೇ ಕಿತ್ತು ಹಾಕಿದೆ. ಬಳಿಕ ಐಜಿಟಿವಿಗೆ ಇನ್‍ಸ್ಟಾಗ್ರಾಮ್ ಟಿವಿ ಎಂದು ಮರುನಾಮಕರಣ ಮಾಡಲಾಗಿತ್ತು. ಇದನ್ನೂ ಓದಿ: ಖಾರ್ಕಿವ್ ಶೆಲ್ ದಾಳಿ ಯುದ್ಧಾಪರಾಧ: ಉಕ್ರೇನ್ ಅಧ್ಯಕ್ಷ
Advertisement
Advertisement
ಇನ್‍ಸ್ಟಾಗ್ರಾಮ್ ಬಳಕೆದಾರರಿಗೆ ವೀಡಿಯೋವನ್ನು ಸರಳವಾಗಿ ಹಂಚಿಕೊಳ್ಳುವಂತೆ ಮಾಡಲು ಐಜಿಟಿವಿಯನ್ನು ತೆಗೆದು ಹಾಕುತ್ತಿದೆ ಹಾಗೂ ರೀಲ್‍ಗಳಲ್ಲಿ ಜಾಹಿರಾತುಗಳನ್ನು ತರುವ ಹೊಸ ಫೀಚರ್‍ಗಳನ್ನು ಪರೀಕ್ಷಿಸುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪಾಕ್ ಕ್ರಿಕೆಟ್ ಲೀಗ್‍ಗಿಂತ ಐಪಿಎಲ್ ದುಬಾರಿ – ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ
Advertisement
ಐಜಿಟಿವಿ ಶೀಘ್ರವೇ ಇನ್‍ಸ್ಟಾಗ್ರಾಮ್‍ನಿಂದ ಮರೆಯಾಗುವುದು ದೃಢವಾಗಿದೆ. ಇದೇ ತಿಂಗಳಿನ ಮಧ್ಯಭಾಗದಲ್ಲಿ ಅಪ್ಲಿಕೇಶನ್ ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇದೆ.