ಬೆಂಗಳೂರು: 17 ವರ್ಷದ ಹುಡುಗನೊಬ್ಬ ನಕಲಿ ಖಾತೆಯೊಂದರ ಮೋಸಕ್ಕೆ ಸಿಲುಕಿ ತನ್ನ ಮನೆಯಿಂದ ಮೌಲ್ಯವಾದ ವಸ್ತುಗಳನ್ನು ಕದ್ದು ಬರೋಬ್ಬರಿ 6.4 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಆರೋಪಿ ಹುಡುಗನಿಗೆ ಎರಡು ತಿಂಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದು, ಈ ಬಗ್ಗೆ ತಿಳಿದು ಪೋಷಕರು ಆರೋಪಿಯ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಏನಿದು ಪ್ರಕರಣ?
ಆರೋಪಿ ಇನ್ ಸ್ಟಾಗ್ರಂನಲ್ಲಿ ಹುಡುಗಿಯ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ಬಳಿಕ ಈ ಹುಡುಗನನ್ನು ಪರಿಚಯ ಮಾಡಿಕೊಂಡಿದ್ದಾನೆ. ದಿನ ಕಳೆದಂತೆ ಇಬ್ಬರು ಇನ್ ಸ್ಟಾಗ್ರಾಂನಲ್ಲಿ ಚಾಟಿಂಗ್ ಶುರು ಮಾಡಿದ್ದು, ಸ್ನೇಹಿತರಾಗಿದ್ದಾರೆ. ಬಳಿಕ ನಕಲಿ ಖಾತೆಯ ಮೂಕಲವೇ ಆರೋಪಿ ಹುಡುಗನ ನಗ್ನ ಫೋಟೋವನ್ನು ಕಳುಹಿಸುವಂತೆ ಕೇಳಿದ್ದಾನೆ. ಹುಡುಗ ಕೂಡ ಆಕೆಯನ್ನು ಹುಡುಗಿ ಎಂದು ನಂಬಿಕೊಂಡು ಇನ್ ಸ್ಟಾಗ್ರಾಂನಲ್ಲಿ ತನ್ನ ಬೆತ್ತಲೆ ಫೋಟೋವನ್ನು ಹಂಚಿಕೊಂಡಿದ್ದಾನೆ.
Advertisement
Advertisement
ಹುಡುಗನ ನಗ್ನ ಫೋಟೋ ಸಿಗುತ್ತಿದ್ದಂತೆ ಆರೋಪಿ ಇನ್ನೊಂದು ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದು ಹುಡುಗನಿಗೆ ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಆರೋಪಿ ಬರೋಬ್ಬರಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಹಣ ಕೊಡಲಿಲ್ಲ ಎಂದರೆ ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೋ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕೊನೆಗೆ ಹುಡುಗ ಹೆದರಿಕೊಂಡು ಮನೆಯಲ್ಲಿದ್ದ ಮೌಲ್ಯವಾದ ವಸ್ತುಗಳನ್ನು ಕದಿಯಲು ಶುರು ಮಾಡಿದ್ದಾನೆ. ನಂತರ ಹುಡುಗ ತನ್ನ ತಂದೆಗೆ ನಡೆದ ಎಲ್ಲ ಘಟನೆಯನ್ನು ವಿವರಿಸಿದ್ದು, ತಕ್ಷಣ ತಂದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
6.4 ಲಕ್ಷ ನಗದು ಹಾಗೂ 17 ಬೆಳ್ಳಿ ವಸ್ತುಗಳನ್ನು ಮನೆಯಿಂದ ಮಗ ಕದ್ದಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಸೂಚನೆ: ನಿಮಗೆ ಸಾಮಾಜಿಕ ಜಾಲತಾಣಗಲ್ಲಿ ಯಾರಾದರೂ ಬೆದರಿಕೆ ಹಾಕಿದರೆ ತಕ್ಷಣ ಕಾನೂನು ಜಾರಿ ಇಲಾಖೆ(ಎಲ್‍ಇಡಿ)ಗೆ ಮಾಹಿತಿ ತಿಳಿಸಬಹುದು. ಅಷ್ಟೇ ಅಲ್ಲದೇ ಇಂತಹ ಘಟನೆಗಳು ನಡೆದರೆ ಸೈಬರ್ ಕ್ರೈಂಗೆ ದೂರು ನೀಡಬಹುದು.