ಎರಡನೇ ಬಾರಿ ಸರ್ವರ್ ಡೌನ್ – ಸಮಸ್ಯೆ ಬಗೆಹರಿಸಿ ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಇನ್‍ಸ್ಟಾಗ್ರಾಮ್‍

Public TV
2 Min Read
Instagram

ಬೆಂಗಳೂರು: ಪ್ರಸಿದ್ಧ ಫೋಟೋ ಶೇರಿಂಗ್ ಆ್ಯಪ್ ಇನ್‍ಸ್ಟಾಗ್ರಾಮ್‍ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಫೇಸ್‍ಬುಕ್  ತಿಳಿಸಿದೆ.

ಎಲ್ಲವನ್ನು ಸರಿಪಡಿಸಲಾಗಿದೆ ಮತ್ತು ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ: ಇಶನ್‌ ಕಿಶನ್‌, ಸೂರ್ಯಕುಮಾರ್‌ ಸ್ಫೋಟಕ ಆಟ – ಮುಂಬೈಗೆ 42 ರನ್‌ ಜಯ

instagram

ಸೋಮವಾರ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಇನ್‍ಸ್ಟಾಗ್ರಾಮ್ ಮತ್ತು ಫೇಸ್‍ಬುಕ್ ಸೇವೆಗಳು ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಒಂದು ವಾರದೊಳಗೆಯೇ ಕೆಲವು ಬಳಕೆದಾರರು ಇನ್‍ಸ್ಟಾಗ್ರಾಮ್ ಉಪಯೋಗಿಸಲಾಗದೇ ಸಮಸ್ಯೆಯನ್ನು ಎದುರಿಸುತ್ತಿದ್ದರು. 10,400 ಬಳಕೆದಾರರು ಅಪ್ಲಿಕೇಶನ್‍ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಅಲ್ಲದೇ ಕೆಲವರು ಸರ್ವರ್ ಸಂಪರ್ಕಿಸಿದ್ದಾರೆ.

FB, Instagram, Whatsapp

ಭಾರತದಲ್ಲಿ ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಎರಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವು ಬಳಕೆದಾರರು ಈ ಫ್ಲಾಟ್‍ಫಾರ್ಮ್‍ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಲು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದನ್ನೂ ಓದಿ: WhatsApp, Facebook, ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ – ಮೆಸೇಜ್‌ ಹೋಗ್ತಿಲ್ಲ, ಬರ್ತಿಲ್ಲ..!

ಈ ಕುರಿತಂತೆ ಟ್ವಿಟ್ಟರ್‌ನಲ್ಲಿ ನಮ್ಮ ಅಪ್ಲಿಕೇಶನ್‍ಗಳನ್ನು ಉಪಯೋಗಿಸಲು ಕೆಲವು ಜನರಿಗೆ ತೊಂದರೆಯಾಗುತ್ತಿದೆ ಎಂದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗನೆ ಸಾಮಾನ್ಯ ಸ್ಥಿತಿಗೆ ಮರಳಲು ನಾವು ಕೆಲಸಮಾಡುತ್ತಿದ್ದೇವೆ ಮತ್ತು ಯಾವುದೇ ಸಮಸ್ಯೆಯುಂಟಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ಸೋಮವಾರ ಭಾರತೀಯ ಕಾಲಮಾನ ರಾತ್ರಿ 9 ಗಂಟೆಯ ಬಳಿಕ ವಾಟ್ಸಪ್, ಇನ್‍ಸ್ಟಾಗ್ರಾಮ್ ಮತ್ತು ಫೇಸ್‍ಬುಕ್ ಸೇವೆಗಳಲ್ಲಿ ವ್ಯತ್ಯಯ ಕಂಡು ಬಂದಿತ್ತು. ವಿಶ್ವದ ಎಲ್ಲ ಕಡೆಯ ಬಳಕೆದಾರರಿಗೂ ಈ ತಾಂತ್ರಿಕ ಸಮಸ್ಯೆಯ ಬಿಸಿ ತಟ್ಟಿತ್ತು. ಇದರಿಂದಾಗಿ ವಾಟ್ಸಪ್‍ನಿಂದ ಯಾವುದೇ ಮೆಸೇಜ್ ಸೆಂಡ್ ಆಗುತ್ತಿಲ್ಲ ಜೊತೆಗೆ ಬೇರೆಯವರು ಕಳಿಸಿದ ಮೆಸೇಜ್ ಕೂಡಾ ರಿಸೀವ್ ಆಗುತ್ತಿಲ್ಲ. ಇನ್‍ಸ್ಟಾಗ್ರಾಂನಲ್ಲಿ couldn’t refresh the feed ಎಂಬ ಸಂದೇಶ ಬಳಕೆದಾರರಿಗೆ ಕಾಣಿಸುತ್ತಿತ್ತು. Facebook ಪೇಜ್ ಲೋಡ್ ಆಗುತ್ತಿರಲಿಲ್ಲ.

facebook and whatsapp

ಫೇಸ್‍ಬುಕ್ ಸಂಸ್ಥೆ ತನ್ನ Twitter ಖಾತೆಯ ಮೂಲಕ ಸೇವೆ ವ್ಯತ್ಯಯವಾಗಿದ್ದನ್ನು ಖಚಿತಪಡಿಸಿತು. ಅಲ್ಲದೇ ಬಳಕೆದಾರರ ಕ್ಷಮೆ ಯಾಚಿಸಿತು. ‘ನಮ್ಮ App & Productಗಳ ಸೇವೆ ಪಡೆಯಲು ಕೆಲವು ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ನಾವು ಸಾಧ್ಯವಾದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಕೆಲಸದಲ್ಲಿ ನಿರತವಾಗಿದ್ದೇವೆ. ನಿಮಗಾಗುತ್ತಿರುವ ತೊಂದರೆಗೆ ನಾವು ಕ್ಷಮೆ ಯಾಚಿಸುತ್ತೇವೆ’ ಎಂದು Facebook ಅಧಿಕೃತವಾಗಿ ಟ್ವೀಟ್ ಮಾಡಿತು.

Share This Article
Leave a Comment

Leave a Reply

Your email address will not be published. Required fields are marked *