ನಟ ಜಯಂ ರವಿ (Ravi Mohan) ಹಾಗೂ ಆರತಿಯವರ (Aarthi Ravi) ವಿಚ್ಛೇದನದ ವಿಚಾರ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಇದರ ನಡುವೆಯೇ, ಗಾಯಕಿ ಕೆನಿಶಾಗೆ (Kenisha) ಸೋಶಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬಂದಿದ್ದು, ಈ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.
ಇದೆಲ್ಲ ಬೆಳವಣಿಗೆಯ ನಡುವೆ, ಕೆನಿಶಾ ತಮ್ಮ ಇನ್ಸ್ಟಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಜಯಂ ರವಿ ತನ್ನಿಂದ ದೂರ ಆಗಲು ಮೂರನೇ ವ್ಯಕ್ತಿ ಕಾರಣ ಎಂದು ಆರತಿ ಹೇಳಿಕೊಂಡಿದ್ದಾರೆ. ಇದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ನನ್ನ ವಿರುದ್ಧ ಶಾಪಗಳು, ದ್ವೇಷಕಾರುವ ಪೋಸ್ಟ್‌ಗಳು, ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತಿಂಗಳಿಗೆ 40 ಲಕ್ಷ ಕೊಡಿ – ರವಿ ಮೋಹನ್ ಬಳಿ ಭಾರೀ ಜೀವನಾಂಶ ಕೇಳಿದ ಆರತಿ!
ಆರತಿ ಹಾಗೂ ಜಯಂ ನಡುವಿನ ಸಮಸ್ಯೆಗೆ ನಾನೇ ಕಾರಣ ಎಂದು ನಿಮಗೆ ಖಚಿತವಾಗಿದ್ದರೆ, ನನ್ನನ್ನು ಕೋರ್ಟ್ ಮುಂದೆ ನಿಲ್ಲಿಸಿ. ಅದು ಬಿಟ್ಟು ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದ್ವೇಷಕಾರುವ ಪೋಸ್ಟ್‌ಗಳನ್ನು ಹಾಕುವುದನ್ನು ನಿಲ್ಲಿಸಿ. ನೀವೆಲ್ಲ ಕರ್ಮದ ಬಗ್ಗೆ ಮಾತಾಡಿದ್ದೀರಿ, ನನ್ನನ್ನು ಟೀಕಿಸುತ್ತಿದ್ದೀರಿ. ನನ್ನ ಪರಿಸ್ಥಿತಿಯ ಬಗ್ಗೆ ನೀವೇನಾದರೂ ಯೋಚಿಸಿದ್ದೀರಾ? ಮಾಧ್ಯಮಗಳು ಏನೆನೋ ಬಿತ್ತರಿಸುತ್ತಿವೆ. ಇದನ್ನೆಲ್ಲ ದಯವಿಟ್ಟು ನಿಲ್ಲಿಸಿ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಜಯಂ ರವಿ ಹಾಗೂ ಆರತಿ 2009ರಲ್ಲಿ ವಿವಾಹವಾಗಿ, 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗಿದ್ದಾರೆ. ಇಬ್ಬರು ಬೇರ್ಪಡುತ್ತಿರುವುದಾಗಿ ಜಯಂ ರವಿ ಕಳೆದ ವರ್ಷ ಘೋಷಿಸಿದ್ದರು. ಆಗಿನಿಂದಲೂ ಆರತಿ ಅವರು ಈ ಘೋಷಣೆಗೆ ವಿರುದ್ಧವಾಗಿದ್ದಾರೆ. ರವಿ ಅವರು ಏಕಪಕ್ಷೀಯವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ. ಈಗಲೂ ನನ್ನ ಪತಿ ರವಿ ಎಂದೇ ಆರತಿ ಹೇಳಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ನ್ಯಾಯಾಲಯದಲ್ಲಿ 40 ಲಕ್ಷ ರೂ. ಜೀವನಾಂಶ ಬೇಕು ಎಂದು ಆರತಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಆರತಿ ತುಂಬಾ ಭಾವುಕರಾಗಿ, 18 ವರ್ಷಗಳ ಕಾಲ ನನ್ನೊಂದಿಗಿದ್ದ ರವಿ ಈಗ ದೂರ ಸರಿದಿದ್ದಾರೆ. ಮಕ್ಕಳ ಜವಾಬ್ದಾರಿ ನನ್ನ ಹೆಗಲ ಮೇಲಿದೆ ಎಂದು ಹೇಳಿಕೊಂಡಿದ್ದರು. ಆರತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜಯಂ ರವಿ, ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನನಗೆ ಆಕೆ ಕಿರುಕುಳ ನೀಡಿದ್ದಳು. ನನಗೆ ನನ್ನದೇಯಾದ ಸ್ವಾತಂತ್ರ್ಯ ಇರಲಿಲ್ಲ. ಅಪ್ಪ-ಅಮ್ಮನನ್ನು ನೋಡಲು ಸಹ ಬಿಡುತ್ತಿರಲಿಲ್ಲ. ಇದರಲ್ಲಿ ಆರತಿ ತಾಯಿಯ ಪಾತ್ರವೂ ಇದೆ. ನನ್ನ ಕಷ್ಟದ ಸಮಯದಲ್ಲಿ ಕೆನಿಶಾ ಬೆಳಕಾಗಿ ಬಂದಳು ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಆರತಿ ನನ್ನನ್ನು ಗಂಡನಾಗಿ ಅಲ್ಲ, ಚಿನ್ನದ ಮೊಟ್ಟೆಯಿಡುವ ಕೋಳಿಯಂತೆ ನಡೆಸಿಕೊಂಡಳು: ರವಿ ಮೋಹನ್