ಮೈಸೂರು: ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯಲು ಬ್ಯಾಂಕಿಗೆ ಅಲೆದಾಡಿದ ಮಹಿಳೆಯೊಬ್ಬರು ಆರ್ಥಿಕ ನೆರವು ದೊರೆಯದಿದ್ದಾಗ ಬ್ಯಾಂಕಿನ ಮುಂಭಾಗ ಫಿಲ್ಮಿ ಮಾದರಿಯಲ್ಲಿ ಪ್ರತಿಭಟಿಸಿ ನ್ಯಾಯ ಗಿಟ್ಟಿಸಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಹಿಳೆಯ ಹೋರಾಟದಿಂದ ಎಚ್ಚೆತ್ತ ಬ್ಯಾಂಕಿನ ಅಧಿಕಾರಿಗಳು ಆ ಮಹಿಳೆಗೆ ಸಾಲ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. ಮೈಸೂರಿನ ನೀಲಿ ಕಲಾ ಕ್ರಿಯೇಷನ್ಸ್‌ನ ಸಂಸ್ಥಾಪಕಿ, ಮಣ್ಣಿನ ಆಭರಣಗಳ ವಿನ್ಯಾಸಕಿ ಹಾಗೂ ಶಿಕ್ಷಕಿಯಾದ ಜೆ.ಮಂಜುಳಾ ಬ್ಯಾಂಕಿನಿಂದ ಸಾಲ ಪಡೆಯಲು ಪ್ರತಿಭಟಿಸಿದರು. ಇದನ್ನೂ ಓದಿ: ರಾಮ, ಕೃಷ್ಣರಂತೆ ಪ್ರಧಾನಿ ಮೋದಿ ದೇವರ ಅವತಾರದಲ್ಲಿದ್ದಾರೆ: ಕಮಲ್ ಪಟೇಲ್
Advertisement
Advertisement
ಮೈಸೂರಿನ ಬಂಬೂ ಬಜಾರಿನಲ್ಲಿರುವ ಎಸ್‍ಬಿಐ ಶಾಖೆಯಲ್ಲಿ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಿದ್ದರು. ಸಾಲ ಕೊಡದೇ ತಿಂಗಳು ಗಟ್ಟಲೆ ಅಲೆಸಿ ನಂತರ ಸಾಲ ಕೊಡಲ್ಲ ಎಂದು ಹೇಳಿದ್ದರು. ತಾವು ಅನುಭವಿಸಿದ ಕಿರಿಕಿರಿಯನ್ನು ತಮ್ಮ ಫೇಸ್‍ಬುಕ್ ಪುಟದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು. ನಂತರ ಆಕ್ಟ್ 1978 ಚಿತ್ರದ ಪ್ರೇರಣೆಯಿಂದ ಬ್ಯಾಂಕಿನ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತರು. ಇದಾದ ಕೆಲವೇ ಸಮಯದಲ್ಲಿ, ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಲೋನ್ ಜಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಬ್ಯಾಂಕಿನ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಖುದ್ದು ಮಂಜುಳಾ ಅವರೇ ಫೇಸ್‍ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Punjab Election- ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್