Connect with us

Districts

ಬಿಜೆಪಿ ಕಾರ್ಯಕರ್ತರಿಂದ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ: ಓರ್ವ ಇನ್ಸ್ ಪೆಕ್ಟರ್ ಅಮಾನುತು

Published

on

ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳ ಕಾರನ್ನು ತಡೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಇನ್ಸ್ ಪೆಕ್ಟರ್ ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ: ಸರ್ಕಾರದ ಮುಖ್ಯಸ್ಥನಾಗಿ ಮಂಡ್ಯ ಎಸ್ಪಿಗೆ ಹೇಳಿದ್ದೆ: ಸಿಎಂ ಸ್ಪಷ್ಟನೆ

ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದೇವರಾಜು ಅವರನ್ನ ಅಮಾನುತು ಮಾಡಿ ಮಂಡ್ಯ ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದೇ ತಿಂಗಳು 20 ರಂದು ಮಳವಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸಿಎಂ ಕಾರ್ ತಡೆದು ಕಪ್ಪು ಬಾವುಟ ಪ್ರದರ್ಶಿಸಿ, ಬರಗಾಲದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ: ಮಂಡ್ಯ ಎಸ್‍ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ

ಇದರಿಂದ ಕುಪಿತಗೊಂಡ ಮುಖ್ಯಮಂತ್ರಿಗಳು ವೇದಿಕೆಯ ಮೇಲೆಯೇ ಮಂಡ್ಯ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್‍ಕುಮಾರ್ ರೆಡ್ಡಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ದೇವರಾಜು ಅಮಾನತ್ತಾಗಿದ್ದಾರೆ.

https://www.youtube.com/watch?v=EPh2F90UOc8

https://www.youtube.com/watch?v=oSC_YuZcMB0

 

Click to comment

Leave a Reply

Your email address will not be published. Required fields are marked *