ಬೆಂಗಳೂರು: ಮಗಳ ಶವ ಹಸ್ತಾಂತರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳ್ಳಂದೂರು ಇನ್ಸ್‌ಪೆಕ್ಟರ್ ರಮೇಶ್ ರೊಟ್ಟಿಯನ್ನು ಅಮಾನತು ಮಾಡಿ, ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್ ಅವರು, ನನ್ನ ಮಗಳ ಹೆಣ ಕೊಡಲು ಪೊಲೀಸರು ಕೊಟ್ಟ ನೋವು ಅಷ್ಟಿಷ್ಟಲ್ಲ. ಮಗಳ ಸತ್ತ ನೋವು ನಮ್ಮಲ್ಲಿದ್ದಾಗಲೇ ಪೊಲೀಸರು ಲಂಚದ ಹಣಕ್ಕಾಗಿ ಕೈಯೊಡ್ಡಿದ್ದರು. ಪೋಸ್ಟ್ ಮಾರ್ಟಂ, ಆಂಬುಲೆನ್ಸ್, ಯುಡಿಆರ್ ಸರ್ಟಿಫಿಕೇಟ್ ಹೀಗೆ ಎಲ್ಲಾ ಕಡೆ ಹಣ ಕೀಳುವ ಕೆಲಸ ಮಾಡಿದ್ದರು. ಇನ್ಸ್‌ಪೆಕ್ಟರ್ ಸೌಜನ್ಯದಿಂದ ನನ್ನ ಜೊತೆ ವರ್ತಿಸಿಲ್ಲ ಎಂದು ಆರೋಪಿಸಿದ್ದರು.ಇದನ್ನೂ ಓದಿ: ಮಗಳ ಶವ ಪರೀಕ್ಷೆಗೆ ಲಂಚ ವಸೂಲಿ; ಕಣ್ಣೀರಿಟ್ಟ ಮಾಜಿ ಸಿಎಫ್‌ಒ – ಎಸ್‌ಐ, ಕಾನ್‌ಸ್ಟೇಬಲ್ ಅಮಾನತು
ಆರೋಪ ಕೇಳಿಬಂದಾಗ ಘಟನೆ ಬಗ್ಗೆ ವರದಿ ನೀಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್‌ಗೆ ಸೂಚನೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ವೈಟ್‌ಫೀಲ್ಡ್ ಸೆನ್ ಎಸಿಪಿ ಬಾಲಕೃಷ್ಣ ಮೂರು ದಿನಗಳ ಹಿಂದೆಯೇ ವರದಿ ನೀಡಿದ್ದರು. ವರದಿ ಆಧಾರದ ಮೇಲೆ ಕರ್ತವ್ಯಲೋಪ ಹಿನ್ನೆಲೆ ಬೆಳ್ಳಂದೂರು ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ರೊಟ್ಟಿಯನ್ನು ಅಮಾನತು ಮಾಡಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್‌ರಿಂದ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಮಶಾನ ಸಿಬ್ಬಂದಿ ಹಣ ಪಡೆದಿದ್ದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರೋ, ಎನ್‌ಹೆಚ್‌ಆರ್‌ಸಿ ಎರಡು ವಾರಗಳಲ್ಲಿ ವಿಸ್ತೃತ ವರದಿ ನೀಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆ ಯಾಕೆ? ಮಹಾರಾಷ್ಟ್ರ, ಗುಜರಾತ್

