ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಚಾಲಾಕಿ ಕಳ್ಳರ ಪುಡಿ ಗ್ಯಾಂಗೊಂದು ಪೊಲೀಸ್ ಇನ್ಸ್‌ಪೆಕ್ಟರ್ ಮಗನ ಸೈಕಲೊಂದನ್ನೇ ಕದ್ದೊಯ್ದಿದ್ದಾರೆ. ಪ್ರಕರಣ ಭೇದಿಸಿದ ಖಾಕಿ ಸೈಕಲ್ ಕಳ್ಳತನ ಗ್ಯಾಂಗ್‍ನ ಮೂವರನ್ನು ಬಂಧನ ಮಾಡಿದೆ. ಬಂಧಿತರು ಹಲವು ಸಮಯದಿಂದ ಈ ಸೈಕಲ್ ಕಳ್ಳತನವನ್ನೇ ಕಾಯಕವಾಗಿ ಮಾಡಿಕೊಂಡು ಬರ್ತಾ ಇದ್ದರು ಎಂದು ತನಿಖೆ ಸಂದರ್ಭ ಗೊತ್ತಾಗಿದೆ.
Advertisement
ಬಂಧಿತರನ್ನು ಹಾವೇರಿ ಮೂಲದ ಹನುಮಂತ, ಶಿವಮೊಗ್ಗ ಮೂಲದ ಮಂಜುರಾಜ್, ಕುತ್ತಾರ್ ನಿವಾಸಿ ಶಂಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮಂಗಳೂರು ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಆ ಮೂವರು ಹೊರ ಜಿಲ್ಲೆಯ ಕಾರ್ಮಿಕರು ನಿಯತ್ತಾಗಿ ದುಡಿದು ಜೀವನ ಸಾಗಿಸುತ್ತಿದ್ದರು. ಆದರೆ ಕಳ್ಳತನ ಮಾಡಿ ಅಂದರ್ ಆಗಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಜೊತೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್
Advertisement
ನಗರದ ಟ್ರಾಫಿಕ್ ಇನ್ಸ್‌ಪೆಕ್ಟರ್‌ರೊಬ್ಬರ ಪುತ್ರನ ಸೈಕಲ್ ಕದ್ದು ಇದೀಗ ತಗಲಾಕಿಕೊಂಡಿದ್ದಾರೆ. ಉರ್ವ ಸಮೀಪದ ಅಪಾಟ್ಮೆರ್ಂಟ್ ಒಂದರ ಕೆಲ ಭಾಗದಲ್ಲಿ ನಿಲ್ಲಿಸಿದ್ದ ಸೈಕಲನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಕಳ್ಳತನದ ದೃಶ್ಯ ಸಿ.ಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಮೂವರನ್ನು ಬಂಧಿಸಿ, ಒಂಬತ್ತು ಸೈಕಲನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ
Advertisement
Advertisement
ಕಟ್ಟಡ ಕಾಮಗಾರಿ ಕೆಲಸಕ್ಕೆ ಅಪರೂಪಕ್ಕೆ ಹೋಗುತ್ತಿದ್ದರು. ಹೀಗಾಗಿ ಹಗಲು ಹೊತ್ತಿನಲ್ಲಿ ಇಸ್ಪೀಟ್ ಆಡುವುದು, ಪುಂಡು ಪೋಕರಿಗಳ ರೀತಿ ಓಡಾಟ ನಡೆಸಿ ರಾತ್ರಿ ವೇಳೆ ಎಣ್ಣೆ ಹೊಡೆದು ಮಲಗುವ ಕಾಯಕವನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದರು. ಮೋಜು ನಡೆಸುವುದಕ್ಕೆ ಹಣಕ್ಕಾಗಿ 20,30 ಸಾವಿರ ಬೆಲೆಯ ಸೈಕಲನ್ನು ಕದ್ದು 500, 1000 ರೂಪಾಯಿಗೆ ಮಾರಾಟ ಮಾಡುತಿದ್ರು. ಪ್ಲ್ಯಾಟ್ ಕೆಳಗೆ ನಿಲ್ಲಿಸುವ ಸೈಕಲ್‍ಗಳು ಇವರ ಟಾರ್ಗೆಟ್ ಆಗಿತ್ತು. ಸದ್ಯ ಒಂದು ಸೈಕಲ್ ಕಳ್ಳತನ ಪ್ರಕರಣ ಭೇದಿಸೋಕೆ ಹೋಗಿ ಒಂಬತ್ತು ಸೈಕಲ್ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ- 16 ಬೈಕ್ ವಶ
ಸೈಕಲ್ ಮಾರಾಟದ ಸಂದರ್ಭ ಶುಭ್ರವಾದ ಬಟ್ಟೆ ಧರಿಸಿ ಹಣದ ಅಜೆರ್ಂಟ್ ಇದೆ ಎಂದು ನಂಬಿಸಿ ಸೈಕಲ್ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಕುಡಿದು ಮಜಾ ಮಾಡುತ್ತಿದ್ದರು. ಒಟ್ಟಿನಲ್ಲಿ ಇದೀಗ ಕಳ್ಳತನ ಮಾಡೋಕೆ ಹೋದ ಈ ಮೂವರು ಜೈಲು ಕಂಬಿ ಎಣಿಸುತ್ತಿದ್ದಾರೆ.