-ಎಲ್ಲ ತಾಲೂಕು ಕೇಂದ್ರದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
ಕೊಪ್ಪಳ: ಕಂದಾಯ ಸೇವೆ (Revenue Department) ನೀಡಲು ಅಗತ್ಯ ಮೂಲ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಗ್ರಾಮಾಡಳಿತ ನೌಕರರ ಸಂಘದಿಂದ ಜಿಲ್ಲಾದ್ಯಂತ ಗುರುವಾರ ಪ್ರತಿಭಟನೆ (Protest) ನಡೆಯಿತು.ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಕಾಂಗ್ರೆಸ್ ಶಾಸಕ, ಪುತ್ರ, ಪ್ರಭಾವಿಗಳಿಗೆ ಸೇರಿದ 44 ಕೋಟಿ ಮೌಲ್ಯದ ಆಸ್ತಿ ಜಪ್ತಿ
- Advertisement3
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕೊಪ್ಪಳ (Koppala) ತಾಲೂಕು ಹಾಗೂ ಗ್ರಾಮಾಡಳಿತ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
- Advertisement
ಸರ್ಕಾರದ ಕಂದಾಯ ಇಲಾಖೆ ಮೂಲಕ 21 ವಿವಿಧ ಪ್ರಮಾಣ ಪತ್ರ ಮತ್ತು ಸೌಲಭ್ಯ ನೀಡುತ್ತದೆ. ಇದನ್ನು ತಂತ್ರಾಶದಲ್ಲಿ ದಾಖಲು ಮಾಡಿ, ಸೇವೆ ನೀಡಬೇಕಿದೆ. ಆದರೆ ಗ್ರಾಮ ಆಡಳಿತಾಧಿಕಾರಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸೇವೆ ನೀಡುವುದು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಕೂಡಲೇ ಸರ್ಕಾರ ಕಂಪ್ಯೂಟರ್, ಇಂಟರ್‌ನೆಟ್ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು. ಶಿಷ್ಠಾಚಾರದ ಕೆಲಸಕ್ಕೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ರಿಯಾಯಿತಿ ನೀಡಬೇಕು. ಹಕ್ಕು ಬದಲಾವಣೆ ಮಾಡುವ ಅವಧಿ ವಿಸ್ತರಣೆ ಮಾಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: 3 PARAM ರುದ್ರ ಸೂಪರ್ ಕಂಪ್ಯೂಟರ್‌ಗಳಿಗೆ ಮೋದಿ ಚಾಲನೆ