ಮುಂಬೈ: ಬಾಲಿವುಡ್ ಸ್ಟಾರ್ ಜೋಡಿಯಾಗಿ ಸ್ಕ್ರಿನ್ ಮೇಲೆ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೋಡಿ ತಮ್ಮ ಆರತಕ್ಷೆಯ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿ ಸಂಭ್ರಮಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಆರತಕ್ಷತೆ ಕಾರ್ಯಕ್ರಮ ಬಳಿಕ ಮುಂಬೈನಲ್ಲಿ ಆತ್ಮೀಯರಿಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದ ದೀಪ್‍ವೀರ್ ಜೋಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಪ್ರಮುಖವಾಗಿ ರಣವೀರ್ ಸಿಂಗ್ ತಮ್ಮ ಇಬ್ಬರ ವೈವಾಹಿಕ ಜೀವನದ ಕುರಿತು ಈ ವೇಳೆ ಮಾತನಾಡಿದ್ದು, ಪತ್ನಿ ದೀಪಿಕಾರನ್ನ ಹಾಡಿಹೊಗಳಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಕಳೆದ ಒಂದು ವಾರ ಹಿಂದೆ ಇಟಲಿಯಲ್ಲಿ ಮದುವೆಯಾಗಿ ಮುಂಬೈಗೆ ಹಿಂದಿರುಗಿದ್ದ ದೀಪ್‍ವೀರ್ ಜೋಡಿ ಶನಿವಾರ ರಾತ್ರಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಮಾರಂಭವನ್ನು ರಣವೀರ್ ಸಿಂಗ್ ಸಹೋದರಿ ರಿತಿಕಾ ಭಾವನಾ ಆಯೋಜಿಸಿದ್ದರು. ಬೆಂಗಳೂರು ಕಾರ್ಯಕ್ರಮದಲ್ಲಿ ತಮ್ಮ ಟ್ರೆಡಿಷನಲ್ ಲುಕ್ ಮೂಲಕ ಮಿಂಚಿದ್ದ ಈ ಜೋಡಿ ಮುಂಬೈ ಕಾರ್ಯಕ್ರಮದಲ್ಲಿ ಪಾರ್ಟಿ ಮೂಡಿಗೆ ಜಾರಿದ್ದರು. ಈ ಕುರಿತ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಭಿನ್ನ ಉಡುಗೆ ಮೂಲಕ ಎಲ್ಲರ ಗಮನ ಸೆಳೆದಿದ್ದ ರಣವೀರ್ ಹಾಗೂ ದೀಪಿಕಾ ಮಸ್ತ್ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ರಣವೀರ್ ಧರಿಸಿದ್ದ ಉಡುಗೆಯನ್ನು ಮಾನಿಷ್ ಆರೋರ ವಿನ್ಯಾಸ ಮಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಆರೋರ, ಇದು ಆರಂಭ ಮಾತ್ರ. ರಣವೀರ್ ಮುಂದೇ ಬರ್ನಿಂಗ್ ಸ್ಟಾರ್ ಆಗಲಿದ್ದಾರ ಎಂದು ಪ್ರಶ್ನೆ ಮಾಡಿದ್ದಾರೆ.
https://www.instagram.com/p/Bql3bdUlP9c/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv