– ಧಾರವಾಡ ಕೃಷಿ ವಿವಿ ಸಂಶೋಧನೆಗೆ ಭಾರೀ ಮೆಚ್ಚುಗೆ
ಧಾರವಾಡ: ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧನಾ ಕಾರ್ಯವನ್ನು ಬರೀ ಯಂತ್ರಗಳಷ್ಟೇ ಅಲ್ಲ. ಬದಲಿಗೆ ಸೂಕ್ಷ್ಮ ಯಂತ್ರಗಳೊಂದಿಗೆ ಜೀವಂತ ಕೀಟಗಳಿಂದಲೂ ಮಾಡಬಹುದು ಎಂಬುದನ್ನು ಧಾರವಾಡ (Dharwad) ಕೃಷಿ ಮೇಳದ (Krishi Mela) ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ತೋರಿಸಿಕೊಡಲಾಗಿದೆ.
ಹೌದು, ಜೀವಂತ ಕೀಟಗಳು ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧ ಕಾರ್ಯ ಮಾಡುವ ಪ್ರಯೋಗವನ್ನು ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಅನಾವರಣ ಮಾಡಲಾಗಿದೆ. ಇಂತಹ ಬಲು ಅಪರೂಪದ ಪರಿಕಲ್ಪನೆಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಯೋಗ ಮಾಡಿದೆ. ದೇಶದ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ರೀತಿಯ ಪರಿಕಲ್ಪನೆಗೆ ಕೃಷಿ ವಿವಿ ಹೊಸ ರೂಪ ಕೊಟ್ಟಿದೆ. ಇದನ್ನೂ ಓದಿ: ಲಂಕಾ, ಪಾಕ್, ಅಫ್ಘಾನ್, ಬಾಂಗ್ಲಾ ಆಯ್ತು.. ಈಗ ನೇಪಾಳ ನರಕ – ಸೂಪರ್ ಪವರ್ ಭಾರತದ ಸುತ್ತ ಏನಾಗ್ತಿದೆ?
ಈ ಸಂಶೋಧನೆಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗವು ಸಂಶೋಧನೆ ನಡೆಸಿ ಮಾಹಿತಿ ಕಲೆ ಹಾಕಿದೆ. ಇದೀಗ ಈ ಮಾಹಿತಿ ಒಳಗೊಂಡ ಪರಿಕಲ್ಪನೆಯನ್ನು ಮೇಳದಲ್ಲಿ ಅನಾವರಣಗೊಳಿಸಿದೆ. ಭವಿಷ್ಯದಲ್ಲಿ ಕೀಟಗಳನ್ನು ಯಾವೆಲ್ಲಾ ರೀತಿ ಸದ್ಬಳಕೆ ಮಾಡಿಕೊಳ್ಳಬಹುದೆಂಬ ಚಿಂತನೆಯಿಂದ ಈ ರೀತಿಯ ಪ್ರಯೋಗವನ್ನು ಮಾಡಲಾಗಿದೆ.
ಕೀಟ ಪ್ರಪಂಚದಲ್ಲಿ ಅತೀ ದೊಡ್ಡ ಹೆಸರು ಚಿಟ್ಟೆಯದ್ದು, ಆದರೆ ಚಿಟ್ಟೆಗೆ ಹೋಲಿಸಿದರೆ ದುಂಬಿ ಹುಳುವೇ ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧನಾ ಕಾರ್ಯಕ್ಕೆ ಸೂಕ್ತವಾಗಿದೆ ಎಂದೆನಿಸಿಕೊAಡಿದೆ. ಅದರ ಜೀವಿತಾವಧಿ ಹಾಗೂ ಸೂಕ್ಷ್ಮ ಯಂತ್ರಗಳನ್ನು ಸುಲಭವಾಗಿ ಅಳವಡಿಸಲು ದೇಹದ ಆಕಾರವೂ ಸಹಕಾರಿಯಾಗಲಿದೆ. ಹೀಗಾಗಿ ದುಂಬಿ ಕೀಟಕ್ಕೆ ಸೂಕ್ಷ್ಮ ಚಿಪ್ ಅಳವಡಿಸುವ ಮೂಲಕ ಬೇಹುಗಾರಿಕೆ, ಶೋಧನಾ ಕಾರ್ಯವಷ್ಟೇ ಅಲ್ಲದೇ ರೈತಾಪಿ ಸಮುದಾಯವು ಕೂಡ ಕೃಷಿಯ ಚಟುವಟಿಕೆ, ಬೆಳೆವಣಿಗೆ ಹಾಗೂ ಕೀಟ-ರೋಗ ಬಾಧೆಗಳ ಬಗ್ಗೆಯೂ ನಿಗಾ ಇಡಬಹುದಾಗಿದೆ.
ಈ ಸಂಶೋಧನೆ ಕೀಟ ರೊಬೋಟಿಕ್ಸ್ (Cyborg insect robotics) ಎಂಬ ಪರಿಕಲ್ಪನೆ ಇದಾಗಿದ್ದು, ಇದು ಜೀವಂತವಾದ ಕೀಟವಾಗಿರದೆ ಎಲೆಕ್ಟ್ರಾನಿಕ್ ಜೀವಿಯಾಗಿದೆ. ಇದು ಬಹಳ ಕಡಿಮೆ ವಿದ್ಯುತ್ ಬಳಕೆಯಿಂದ ಚಲನೆ ಮಾಡಬಹುದಾಗಿದೆ.
ಪ್ರಪಂಚದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಕೀಟಗಳಿವೆ. ಅದರಲ್ಲಿ ಯಾವುದೇ ಕೀಟವನ್ನು ಸಹ ಬೇಹುಗಾರಿಕೆಗೆ ಬಳಸಬಹುದು. ಆದರೆ ಗಡಿಯಲ್ಲಿ ಈ ಕೀಟಕ್ಕೆ ಚಿಪ್ ಅಳವಡಿಸಿ ಮುಂದೆ ಬಿಟ್ಟರೆ ಅದು ಒಂದು ಅಥವಾ ಎರಡು ಕಿಲೋಮೀಟರ್ ದೂರ ಮಾತ್ರ ಕ್ರಮಿಸಬಹುದು. ಆದರೆ ಈ ಕೀಟ ಮೂವತ್ತರಿಂದ ನಲವತ್ತು ಕಿಲೋಮೀಟರ್ ದೂರ ಕ್ರಮಿಸಿ ಸೇನೆಗೆ ಸಹಕಾರಿಸಬಹುದು. ಈಗಾಗಲೇ ಚೀನಾ ದೇಶವು ಈ ರೀತಿ ಕೀಟಗಳನ್ನು ಬಳಕೆ ಮಾಡಿಕೊಂಡು ಬೇಹುಗಾರಿಕೆ, ರಕ್ಷಣಾ ವಲಯ ಕ್ಷೇತ್ರದಲ್ಲಿ ಬಳಸುತ್ತಿದೆ. ಈ ಮಾದರಿ ನಡೆ ಭಾರತ ದೇಶದಲ್ಲಿಯೂ ಪ್ರಾಯೋಗಿಕವಾಗಿಯೂ ಸಾಗಿದೆ. ಈ ಪ್ರಾಯೋಗಿಕ ಮಾಹಿತಿ ಆಧರಿಸಿಯೇ ಸೈಬೋರ್ಗ ಕೀಟ ರೊಬೊಟಿಕ್ಸ್ ಎಂಬ ಪರಿಕಲ್ಪನೆ ವಿವಿ ರೂಪಿಸಲಾಗಿದೆ.