ನವದೆಹಲಿ: ಭಾರತದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಉಪತಳಿ BA.4 ಮತ್ತು BA.5 ತಳಿ ಪತ್ತೆಯಾಗಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಕೊರೊನಾ ಹೊಸ ತಳಿಗಳು ದೃಢಪಟ್ಟಿವೆ.
ಈ ಕುರಿತು INSACOG ಅಧಿಕೃತ ಪ್ರಕಟಣೆ ಹೊರಡಿಸಿದೆ. ತಮಿಳುನಾಡು ಮೂಲದ 19 ವರ್ಷದ ಯುವತಿಯಲ್ಲಿ ಕೊರೊನಾ ರೂಪಾಂತರಿ BA.4 ದೃಢಪಟ್ಟಿದೆ. ತೆಲಂಗಾಣ ಮೂಲದ 80 ವರ್ಷದ ವೃದ್ಧನಲ್ಲಿ BA.5 ಉಪತಳಿ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 161 ಕೇಸ್ – ಇತರ 4 ಜಿಲ್ಲೆಗಳಲ್ಲಿ 6 ಪಾಸಿಟಿವ್ ಪ್ರಕರಣ
Advertisement
Advertisement
ಇಬ್ಬರು ಸೋಂಕಿತರಲ್ಲಿ ಕೊರೊನಾ ಲಘು ಲಕ್ಷಣಗಳು ವರದಿಯಾಗಿದೆ. BA.4 ಮತ್ತು BA.5 ಓಮಿಕ್ರಾನ್‌ನ ಉಪತಳಿಗಳಾಗಿದ್ದು, ಹಲವು ದೇಶಗಳಲ್ಲಿ ಪತ್ತೆಯಾಗಿವೆ. ಇದು ಮೊದಲು ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿತ್ತು.