ಲಾರಿಗೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಇನ್ನೋವಾ – ಮೂವರು ಸ್ಥಳದಲ್ಲೇ ಸಾವು

Public TV
1 Min Read
Innova car collides with lorry in Chitradurga three killed on the spot

ಚಿತ್ರದುರ್ಗ: ಇನ್ನೋವಾ ಕಾರು (Car) ಹಾಗೂ ಲಾರಿ ನಡುವೆ ಭೀಕರ ಅಪಘಾತ (Accident) ಸಂಭವಿಸಿ ಒರ್ವ ಮಹಿಳೆ ಸೇರಿ ಮೂವರು ಸಾವಿಗೀಡಾದ ಘಟನೆ ಹೊಳಲ್ಕೆರೆಯ (Holalkere) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಸುನಿತಾ (34), ಶ್ಯಾಮ್ (29) ಮತ್ತು ಶಿವು (35) ಎಂದು ಗುರುತಿಸಲಾಗಿದೆ. ನಸುಕಿನ ಜಾವ 3:00 ಗಂಟೆ ವೇಳೆಗೆ ಕಣಿವೆ ಆಂಜನೇಯ ದೇಗುಲ ಬಳಿ ಈ ಅಪಘಾತ ಸಂಭವಿಸಿದೆ. ಕಾರು ಆಂಧ್ರ ಪ್ರದೇಶ ಮೂಲದ್ದಾಗಿದ್ದು, ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ ತೆರಳುತ್ತಿತ್ತು. ಈ ವೇಳೆ ಅಪಘಾತ ನಡೆದಿದೆ. ಇದನ್ನೂ ಓದಿ: Ramanagara | ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಓರ್ವ ಸ್ಥಳದಲ್ಲೇ ಸಾವು

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಮೃತದೇಹಗಳನ್ನು ಹೊರಗೆ ತೆಗೆದು ಹೊಳಲ್ಕೆರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಇದನ್ನೂ ಓದಿ: ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

Share This Article