Bengaluru CityDistrictsKarnatakaLatestMain Post

ಟಿಕಾಯತ್‌ಗೆ ಮಸಿː ಒಳಗಡೆ ಮೋದಿಗೆ ಜೈ ಜೈ, ಹೊರಗಡೆ ಡೌನ್‌ ಡೌನ್‌ ಅಂದ್ರು

Advertisements

ಬೆಂಗಳೂರು: ರೈತ ನಾಯಕ ರಾಕೇಶ್‌ ಟಿಕಾಯತ್‌ ಮಸಿ ಬಳಿದ ಗ್ಯಾಂಗ್‌ ಒಳಗಡೆ ಮೋದಿಗೆ ಜೈ ಜೈ ಎಂದಿದ್ದರೆ ಹೊರಗಡೆ ಮೋದಿ ಡೌನ್‌ ಡೌನ್‌ ಎಂದು ಕೂಗಿದೆ.

ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಹಲ್ಲೆ ನಡೆಸಿದ ಗ್ಯಾಂಗ್‌ ಒಳಗಡೆ ಮೋದಿಗೆ ಜೈ, ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು ಕೂಗಿದ್ದರು. ಆದರೆ ಹೊರಗಡೆ ಮೋದಿ ಡೌನ್‌ ಡೌನ್‌ ಎಂದು ಕೂಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಶೆಟ್ಟಿ, ದಿಲೀಪ್ ಹಾಗೂ ಶಿವಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.. ಬಂಧನಕ್ಕೆ ಒಳಗಾದ ಶಿವಕುಮಾರ್‌ ಸಹೋದರಿ ಹೊರಗಡೆ ಬಂದು ಮೋದಿ ಡೌನ್‌ ಡೌನ್‌ ಎಂದು ಕೂಗಿರುವ ವೀಡಿಯೋ ವೈರಲ್‌ ಆಗಿದೆ.  ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

ನಡೆದಿದ್ದು ಏನು?
ಕೋಡಿಹಳ್ಳಿ‌ ಚಂದ್ರಶೇಖರ್‌ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿತ್ತು. ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು.

ಈ ವೇಳೆ ಏಕಾಏಕಿ ನುಗ್ಗಿದ ಗ್ಯಾಂಗ್‌ ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ, ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು‌ ಘೋಷಣೆ ಕೂಗಿದ್ದರು.

ಈ ಸಂದರ್ಭದಲ್ಲಿ ಅಲ್ಲಿ ಮಾರಾಮಾರಿ ನಡೆದಿದ್ದು ಅಲ್ಲಿದ್ದ ವ್ಯಕ್ತಿಗಳು ಇವರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

Leave a Reply

Your email address will not be published.

Back to top button