ಮುಂಬೈ: ಮಹಾರಾಷ್ಟ್ರದ ಸಚಿವ (Maharashtra Ministers) ಮತ್ತು ಭಾರತೀಯ ಜನತಾ ಪಕ್ಷದ (BJP) ನಾಯಕ ಚಂದ್ರಕಾಂತ್ ಪಾಟೀಲ್ (Chandrakant Patil) ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮಸಿ ಬಳಿದಿರುವ (Ink Attack) ಘಟನೆಗೆ ಸಂಬಂಧಿಸಿದಂತೆ ಭದ್ರತಾ ಲೋಪದ ಆರೋಪದ ಮೇಲೆ 10 ಪೊಲೀಸ್ ಸಿಬ್ಬಂದಿಯನ್ನು (Police Pfficials) ಅಮಾನತುಗೊಳಿಸಲಾಗಿದೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಜ್ಯೋತಿಬಾ ಪುಲೆ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಕ್ಕಾಗಿ ಶನಿವಾರ ಸಂಜೆ ಪುಣೆಯಲ್ಲಿ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಮಸಿ ಎರಚಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Advertisement
Advertisement
ಈ ಘಟನೆಯ ಬಳಿಕ ಚಂದ್ರಕಾಂತ್ ಪಾಟೀಲ್ ಅವರ ಭದ್ರತೆಗೆ ನಿಯೋಜಿಸಲಾಗಿದ್ದ 10 ಪೊಲೀಸರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಆಯುಕ್ತ ಅಂಕುಶ್ ಶಿಂಧೆ ಅಮಾನತುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾವು 7 ಪೊಲೀಸ್ ಸಿಬ್ಬಂದಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ಅವರೆಲ್ಲರೂ ಸಚಿವರ ಭೇಟಿಯ ಸಮಯದಲ್ಲಿ ಅವರ ಭದ್ರತೆಯ ಭಾಗವಾಗಿದ್ದರು ಎಂದು ಅಂಕುಶ್ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಆಪ್‌ಗೆ ಹಿನ್ನಡೆ – ಬಿಜೆಪಿ ಸಂಪರ್ಕದಲ್ಲಿದ್ದಾರೆ ಐವರು ಶಾಸಕರು
Advertisement
ಪಾಟೀಲ್ ವಿವಾದಿತ ಹೇಳಿಕೆಯೇನು?
ಶುಕ್ರವಾರ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವರು ಮಾತನಾಡಿ, ಅಂಬೇಡ್ಕರ್ ಮತ್ತು ಪುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನವನ್ನು ಕೇಳಲಿಲ್ಲ. ಅವರು ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಹಣವನ್ನು ಸಂಗ್ರಹಿಸಲು ಜನರಲ್ಲಿ ಭಿಕ್ಷೆ ಕೇಳಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದವನ್ನು ಎಬ್ಬಿಸಿತು.
Advertisement
ಪಾಟೀಲ್ ಅವರ ಹೇಳಿಕೆಯ ವಿರುದ್ಧ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಚಂದ್ರಕಾಂತ್ ಕ್ಷಮೆಯನ್ನೂ ಯಾಚಿಸಿದ್ದರು. ಇದನ್ನೂ ಓದಿ: ವೇದಿಕೆ ಮೇಲೆ ಡಿಕೆಶಿ, ಸಿದ್ದು ಬಣದ ಕಿತ್ತಾಟ – ಕಣ್ಣೀರಿಟ್ಟು ವೇದಿಕೆಯಿಂದ ಇಳಿದ ನಾಯಕಿ