ಬೆಂಗಳೂರು: ನಮ್ಮ ಮೆಟ್ರೋಗೆ (Namma Metro) ಸಿಬ್ಬಂದಿ ನೇಮಕಾತಿಯಲ್ಲಿ ಬಿಎಂಆರ್‌ಸಿಎಲ್ (BMRCL) ಕನ್ನಡ ವಿರೋಧಿ ಧೋರಣೆ ತಳೆದಂತೆ ಕಾಣಿಸುತ್ತಿದೆ. 50 ಮೆಟ್ರೋ ರೈಲು ಆಪರೇಟರ್ ಪೋಸ್ಟ್‌ಗಳಿಗೆ ಕನ್ನಡದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕದ ರೀತಿಯಲ್ಲಿ ಕಠಿಣ ಷರತ್ತುಗಳನ್ನು ಬಿಎಂಆರ್‌ಸಿಎಲ್ ವಿಧಿಸಿದೆ.
ಹೈದರಾಬಾದ್ ಮೆಟ್ರೋ ಮತ್ತು ಚೆನೈ ಮೆಟ್ರೋ ರೈಲಿನ ಲೋಕೋಪೈಲಟ್‌ಗಳು ಮಾತ್ರ ಅರ್ಜಿ ಹಾಕುವ ರೀತಿಯಲ್ಲಿ ಬಿಎಂಆರ್‌ಸಿಎಲ್ ನಿಯಮ ರೂಪಿಸಿದೆ. ರೈಲು ಆಪರೇಟರ್ ಪೋಸ್ಟ್ಗೆ ಅರ್ಜಿ ಹಾಕ್ಬೇಕು ಅಂದರೆ 3 ವರ್ಷ ಟ್ರೈನ್ ಆಪರೇಟ್ ಮಾಡಿರುವ ಅನುಭವ ಇರಬೇಕು ಎಂಬ ಷರತ್ತು ಹಾಕಲಾಗಿದೆ. ಇದರ ಪ್ರಕಾರ ಹೈದರಾಬಾದ್ ಮತ್ತು ಚೆನೈ ಮೆಟ್ರೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವ ರೈಲು ಆಪರೇಟರ್‌ಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಮೂಲಕ ಕನ್ನಡಿಗರಿಗೆ ಮೆಟ್ರೊದಲ್ಲಿ ಉದ್ಯೋಗ ನಿರಾಕರಿಸಲಾಗುತ್ತಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ
ಕರ್ನಾಟಕದ ಅಭ್ಯರ್ಥಿಗಳು ಈ ಪೋಸ್ಟ್‌ಗೆ ಅಪ್ಲಿಕೇಶನ್ ಹಾಕಲು ಸಾಧ್ಯವಾಗಲ್ಲ. ಇದೊಂದು ನಾಚಿಕೆಗೇಡಿನ ಸಂಗತಿ. ಈ ವಿವಾದಾತ್ಮಕ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮೆಟ್ರೋ ನೌಕರರ ಸಂಘ ಆಗ್ರಹಿಸಿದೆ. ಕನ್ನಡ ಪರ ಸಂಘಟನೆಗಳಿಂದಲೂ ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ: ಚೌಹಾಣ್‌ಗೆ ಬೊಮ್ಮಾಯಿ ಪತ್ರ
ಇನ್ನು ಬಿಎಂಆರ್‌ಸಿಎಲ್ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಈ ಕುರಿತು ಟ್ವೀಟ್ ಮಾಡಿದ್ದು, ನಮ್ಮ ಮೆಟ್ರೋ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಕನ್ನಡಿಗರ ವಿರೋಧ ಕಟ್ಟಿಕೊಂಡರೇ ಬೆಂಗಳೂರಲ್ಲಿ ಮೆಟ್ರೋ ರೈಲು ಓಡಾಡೋದೇ ಕಷ್ಟವಾಗಲಿದೆ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ: ಮಳವಳ್ಳಿ ವಸತಿ ಶಾಲೆಯ ದುರ್ಘಟನೆ – ಅಧಿಕಾರಿಗಳಿಂದ ಮಾಹಿತಿ ಪಡೆದ ಹೆಚ್‌ಡಿಕೆ; ಮೃತ ವಿದ್ಯಾರ್ಥಿಗೆ ಸಂತಾಪ