ಬೆಂಗಳೂರು: ಬಿಜೆಪಿ (BJP) ಎಂಪಿಗಳಿಗೆ ಮೋದಿ (Narendra Modi), ಅಮಿತ್ ಶಾ ಕಂಡರೆ ಭಯ. ಅದಕ್ಕೆ ರಾಜ್ಯಕ್ಕೆ ಆದ ತೆರಿಗೆ ಅನ್ಯಾಯದ ಬಗ್ಗೆ ಮಾತಾಡುವುದಿಲ್ಲ ಎಂದು ಬಿಜೆಪಿ ಎಂಪಿಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ರಾಜ್ಯಕ್ಕೆ ಅನುದಾನ ತಾರತಮ್ಯ ಆಗಿರೋ ವಿಚಾರವಾಗಿ ಪ್ರತಿಕ್ರಿಸಿದರು. ಈಗ ಬಿಜೆಪಿಯವರ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯ ಆದಾಗ ನಮ್ಮ ಬಿಜೆಪಿ ಎಂಪಿಗಳು ಮಾತಾಡುವುದಿಲ್ಲ. ಎಂಪಿಗಳು ಅಮಿತ್ ಶಾ, ಮೋದಿ ಕಂಡರೆ ಭಯ ಬೀಳ್ತಾರೆ. ನಿರ್ಮಲ ಸೀತಾರಾಮನ್ 2 ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದಾರೆ. ಅವರ ಋಣ ತೀರಿಸಬೇಕು ಎಂದು ಅನ್ನಿಸೋದಿಲ್ವಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
Advertisement
ಹಿಂದೆ ಪರಿಹಾರಕ್ಕೆ ನಾವು ದೆಹಲಿಯಲ್ಲಿ ಹೋರಾಟ ಮಾಡಿದ್ದೆವು. GST, ಐಟಿ, ಎಲ್ಲದ್ರಲ್ಲೂ ಕರ್ನಾಟಕ ಟಾಪ್ ನಲ್ಲಿದೆ. ಇಷ್ಟೆಲ್ಲ ಮಾಡಿದರೂ ನಮ್ಮ ಪಾಲು ನಮಗೆ ಸರಿಯಾಗಿ ಕೊಡ್ತಿಲ್ಲ. ಬಿಜೆಪಿಯವರು ರಾಜಕೀಯ ಬಿಡಬೇಕು. ಯಾಕೆ ಬಿಜೆಪಿಯವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ? ನಿಮಗೆ ಭಯ ಇದ್ದರೆ ನಾವು ನಿಮ್ಮ ಜೊತೆ ಬರುತ್ತೇನೆ ಬನ್ನಿ. ಮೋದಿ, ಅಮಿತ್ ಶಾ ಭೇಟಿ ಆಗೋಣ. ಚೇರ್ ಕುಟ್ಟಿ ಕೇಳಿ, ಇಡೀ ಸಂಪುಟ ನಿಮ್ಮ ಜೊತೆ ಇರುತ್ತದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
Advertisement
Advertisement
ಬರ ಪರಿಹಾರಕ್ಕಾಗಿ ನಾವು ಸುಪ್ರೀಂಕೋರ್ಟ್ ಗೆ ಹೋಗಿದ್ವಿ. ತೆರಿಗೆ ಅನ್ಯಾಯ ವಿಷಯಕ್ಕೆ ಕೋರ್ಟ್ ಗೆ ಹೋಗಬೇಕಾ ಎಂದು ಪರಿಶೀಲನೆ ಮಾಡ್ತೀವಿ. ನಮ್ಮ ರಾಜ್ಯಕ್ಕೆ ಹಣ ಕೊಡೊಲ್ಲ. ಯುಪಿಗೆ ಹೆಚ್ಚು ಹಣ ಕೊಡ್ತಾರೆ. ಕನ್ನಡಿಗರ ದುಡ್ಡಿನಲ್ಲಿ ಯುಪಿಯವರು ಲಕ್ಷ ದೀಪೋತ್ಸವ ಮಾಡ್ತಿದ್ದಾರೆ. ನಾವು ಬೇರೆ ರಾಜ್ಯಕ್ಕೆ ಕೊಡಬೇಡಿ ಎನ್ನುವುದಿಲ್ಲ. ನಮಗೂ ನ್ಯಾಯಯುತವಾಗಿ ಪಾಲು ಕೊಡಿ ಎಂದು ಆಗ್ರಹಿಸಿದ್ದಾರೆ.
Advertisement
ನಮ್ಮ ರಾಜ್ಯದಲ್ಲಿ ಎಲ್ಲಾ ರಾಜ್ಯದವರಿಗೂ ಉದ್ಯೋಗ ಕೊಡ್ತಿದ್ದೇವೆ. ಆದರೆ ಪರಿಹಾರ ಮಾತ್ರ ನಮಗೆ ಕಡಿಮೆ ಸಿಗುತ್ತೆ. ಸುಮ್ಮನೆ ಕೆಂಪು ಕೋಟೆ ಮೇಲೆ ಭಾಷಣ ಮಾಡಿದ್ರೆ ಸಾಲದು. ನಮಗೆ ಅನುದಾನ ಜಾಸ್ತಿ ಕೊಡಿ ಉದ್ಯೋಗ ಸೃಷ್ಟಿ ಮಾಡಿ ತೋರಿಸ್ತೀವಿ. ಉದ್ಯೋಗ ಸೃಷ್ಟಿ ಮಾಡೋಕೆ ಕರ್ನಾಟಕದಿಂದ ಮಾತ್ರ ಸಾಧ್ಯ. ನಮಗೆ ನಮ್ಮ ಪಾಲಿನ ಅನುದಾನ ಸರಿಯಾಗಿ ನೀಡಿ ಎಂದು ವಾಗ್ದಾಳಿ ನಡೆಸಿದರು.