ಬೀದರ್: ಈಜುಕೊಳದಲ್ಲಿ (Swimming Pool) ಸ್ವಿಮ್ಮಿಂಗ್ ವೇಳೆ ಅವಘಡ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ಬೀದರ್‌ನ (Bidar) ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ನಡೆದಿದೆ.
ಬೀದರ್‌ನ ಫೈಜ್‌ದರ್ಗಾ ಕಾಲನಿಯ ನಿವಾಸಿ ಸೈಯದ್ ಅಫಾನ್ (19) ಮೃತ ಯುವಕ. ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ ಯುವಕ ಪೂಲ್‌ನಲ್ಲೇ ಮುಳುಗಿ ಮೃತಪಟ್ಟಿದ್ದಾನೆ. ಈಜು ಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಗಂಭೀರ ಪೆಟ್ಟಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ – ವಿಷ ಸೇವಿಸಿ KSRTC ಬಸ್ ಚಾಲಕ ಆತ್ಮಹತ್ಯೆಗೆ ಯತ್ನ
ಘಟನೆ ಬಳಿಕ ಈಜುಕೊಳ ಮಾಲೀಕರ ವಿರುದ್ಧ ಮೃತ ಯುವಕನ ಕುಟುಂಬಸ್ಥರು ನಿರ್ಲಕ್ಷ್ಯ ಆರೋಪ ಹೊರಿಸಿದ್ದಾರೆ. ನಿಷ್ಕಾಳಜಿ ವಹಿಸಿದ ಈಜುಕೊಳದ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈಜುಕೊಳದ ಮಾಲೀಕ ಡಾ.ವೈಜಿನಾಥ ಮದನಾ ಎಂಬವರ ವಿರುದ್ಧ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈಜುಕೊಳದಲ್ಲಿ ರಕ್ಷಣಾ ಸಲಕರಣೆಗಳು, ತರಬೇತುದಾರರು ಇಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ನೋ ಎಂಟ್ರಿ – ಬೀದರ್ ವಿದ್ಯಾರ್ಥಿಗೆ ನ್ಯಾಯ ಕೊಡಿಸಲು ಕೆಇಎ ಸಿದ್ಧತೆ